ಸಿಎಂ ಕುಮಾರಸ್ವಾಮಿ ಸರ್ಕಾರದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ- ಜಗದೀಶ್ ಶೆಟ್ಟರ್

ಕೊಪ್ಪಳ : ಕೊಪ್ಪಳದಲ್ಲಿ ಮಾಜಿ ಸಿಎಂ ಜಗದ್ದೀಶ ಶೆಟ್ಟರ್ ವಾಗ್ದಾಳಿ

ಸಿಎಂ ಕುಮಾರಸ್ವಾಮಿ ಸರ್ಕಾರದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಕುಮಾರಸ್ವಾಮಿ ಕೇವಲ ನಾಲ್ಕು- ಐದು ಜಿಲ್ಲೆಗೆ ನಾನು ಸಿಎಂ ಎಂದು ತಿಳಿದುಕೊಂಡಿದ್ದಾರೆ. ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಅವರು ಚಿಂತನೆ ಮಾಡ್ತಿಲ್ಲ

ಉತ್ತರ ಕರ್ನಾಟಕ ರೈತರು ತಮ್ಮ ಸಮಸ್ಯೆ ಹೇಳಿಕೊಂಡರೆ ನೀವು ನಮಗೆ ವೋಟ್ ಹಾಕಿಲ್ಲ ಅಂತಾರೆ. ಕೇವಲ ನಾಲ್ಕೈದು ಜಿಲ್ಲೆಯ ಹಿತ ಕಾಯ್ತಿದ್ದಾರೆ. ಇದು ರಾಜ್ಯದ ಸಿಎಂ ಆಗಲು ಅನರ್ಹರಾಗುತ್ತಾರೆ

ಬಜೆಟ್ ನಲ್ಲೂ ಕೂಡ ಕುಮಾರಸ್ವಾಮಿ ನಾಲ್ಕೈದು ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಿದ್ರು. ಡಿಸೆಂಬರ್ 10 ರಂದು ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಹೋರಾಟ ಮಾಡುತ್ತೇವೆ.

ಹಂಪಿ ಉತ್ಸವ ರದ್ದು ಮಾಡಿರೋದು ಉತ್ತರ ಕರ್ನಾಟಕಕ್ಕೆ ಮಾಡಿರೋ ಅನ್ಯಾಯ. ಸರ್ಕಾರ ಉತ್ಸವ ರದ್ದು ಮಾಡಲು ಬರದ ಕಾರಣ ನೀಡ್ತಿದೆ. ಟಿಪ್ಪು ಜಯಂತಿ ಮಾಡಲು ಸರ್ಕಾರದ ಬಳಿ ಹಣ ಇದೆ. ಆದ್ರೆ, ಹಂಪಿ ಉತ್ಸವಕ್ಕೆ ಹಣ ಇಲ್ಲ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದ ಶೆಟ್ಟರ್

ದೇವೇಗೌಡ ಆ್ಯಾಂಡ್ ಕಂಪನಿ ಉತ್ತರ ಕರ್ನಾಟಕದ ವಿರೋಧಿಗಳು ಎಂದ ಜಗದೀಶ್ ಶೆಟ್ಟರ್