You are here
Home > Koppal News > ಸಿಎಂ ಕಾರ್ಯಕ್ರಮ : ಪೂರ್ವಬಾವಿ ಸಭೆ

ಸಿಎಂ ಕಾರ್ಯಕ್ರಮ : ಪೂರ್ವಬಾವಿ ಸಭೆ

ಗಂಗಾವತಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೇ ತಿಂಗಳು 14 ರಂದು ಕೊಪ್ಪಳ ಜಿಲ್ಲೆಗೆ ಆಗಮಿಸಲಿದ್ದು ಗಂಗಾವತಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು. ಗಂಗಾವತಿಯ ಮಂಥನ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಎಂ ಕನಗವಲ್ಲಿ, ಕನಕಗಿರಿ ಕ್ಷೇತ್ರದ ಶಾಸಕ ಶಿವರಾಜ್ ತಂಗಡಗಿ, ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ, ಎಸ್ಪಿ ಅನುಪ್ ಶೆಟ್ಟಿ ನೇತೃತ್ವದಲ್ಲಿ ಸಭೆ ನಡೆಯಿತು. ಜಿಲ್ಲೆಯ ಗಂಗಾವತಿ ತಾಲೂಕಿನ ವಿವಿಧ ಕಾಮಗಾರಿಗಳ , ಶಂಕುಸ್ಥಾಪನೆ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ಕುರಿತು ಪೂರ್ವಭಾವಿಯಾಗಿ ಸಭೆ ನಡೆಸಿದ್ರು. ಸಭೆಯಲ್ಲಿ ಜಿಲ್ಲಾ ಹಾಗೂ ತಾಲೂಕ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ರು

ಇದೇ ಸಂದರ್ಭದಲ್ಲಿ

ಗಂಗಾವತಿಯ ಶಾಸಕರಾದ ಇಕ್ಬಾಲ್ ಅನ್ಸಾರಿ ಸಮಾವೇಶದ ಸ್ಥಳ ವೀಕ್ಷಣೆ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯಕ್ರಮ ಪೂರ್ವ ಸಿದ್ಧತೆಗಾಗಿ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ವೇದಿಕೆ ಸಿದ್ದಪಡಿಸಲು ಇಕ್ಬಾಲ್ ಅನ್ಸಾರಿಯವರು ಸ್ಥಳ ವೀಕ್ಷಣೆ ನಡೆಸಿದರು.

ದಿ.14 ನೇ ಡಿಸೆಂಬರ್ 2017 ನಡೆಯುವ ಬೃಹತ್ ಸರಕಾರಿ ಸಮಾವೇಶದಲ್ಲಿ ಸುಮಾರು 40 ಸಾವಿರ ಜನ ಸೇರುವ ನಿರೀಕ್ಷೆ ಇದ್ದು ಬರುವ ಜನರ ಆಸದ ವ್ಯವಸ್ಥೆ, ಊಟದ ವ್ಯವಸ್ಥೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಸ್ಥಳ ವೀಕ್ಷಣೆ ನಡೆಸಿ ಮುಖಂಡರ ಜೊತೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಎಸ್. ಬಿ.ಖಾದ್ರಿ, ಗದ್ವಾಲ್ ಖಾಸೀಂ ಸಾಬ್, ನಗರಸಭೆ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಶ್ಯಾಮೀದ್ ಮನಿಯಾರ್, ನಗರಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ನಾಗರಾಜ ನಂದಾಪೂರ,ಶಾಸಕರ ಆಪ್ತ ಸಹಾಯಕ ಜಾಫರ್ ಸೂಫಿ, ಯುವ ನಾಯಕರಾದ ಇಮ್ತಿಯಾಜ್ ಅನ್ಸಾರಿ ಹಾಗೂ ಸೈಯದ್ ಇಲಿಯಾಜ್ ಖಾದ್ರಿ ಉಪಸ್ಥಿತರಿದ್ದರು.

Top