ಸಾಹಿತಿ ಇಸ್ಮಾಯಿಲ್‌ರವರ ಕವನ ಸಂಕಲನಗಳ ಲೋಕಾರ್ಪಣೆ


ಕೊಪ್ಪಳ: ತುಮಕೂರಿನ ಹಿರಿಯ ಸಾಹಿತಿ ಈಚನೂರ ಇಸ್ಮಾಯಿಲ್‌ರವರ ‘ತಾಯ್ತನದ ಸೆರಗು’, ‘ಬೌದ್ಧಿಕ ಭಾರತದ ಕುರುಹಿನ ಚಿಂತೆ’ ಎಂಬ ಕವನ ಸಂಕಲನಗಳ ಲೋಕಾರ್ಪಣೆ ರವಿವಾರ ಮಧ್ಯಾಹ್ನ ಭಾಗ್ಯನಗರದಲ್ಲಿ ಜರುಗಲಿದೆ ಎಂದು ಸಾಹಿತಿ ಅಕ್ಬರ್ ಕಾಲಿಮಿರ್ಚಿ ತಿಳಿಸಿದ್ದಾರೆ.
ನ.೧೮ ರಂದು ಮಧ್ಯಾಹ್ನ ೩:೩೦ಕ್ಕೆ ಭಾಗ್ಯನಗರದ ಮಂಜುನಾಥ ಬಡಾವಣೆಯ ಕಾಲಿಮಿರ್ಚಿ ನಿವಾಸದಲ್ಲಿ ಜರುಗುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಶಂ.ನಿಂ.ತಿಮ್ಮನಗೌಡರ ವಹಿಸಲಿದ್ದಾರೆ. ಅಕ್ಬರ್ ಕಾಲಿಮಿರ್ಚಿ ಕವನ ಸಂಕಲನ ಲೋಕಾರ್ಪಣೆಗೊಳಿಸಲಿದ್ದು ಕೃತಿಗಳ ಕುರಿತು ಕಸಾಪ ನಿಕಟ ಪೂರ್ವ ಅಧ್ಯಕ್ಷ ಶಿ.ಕಾ.ಬಡಿಗೇರ ಹಾಗೂ ಉಪನ್ಯಾಸಕ ಶಿವಪ್ರಸಾದ ಹಾದಿಮನಿ ಮಾತನಾಡಲಿದ್ದಾರೆ. ಸಾಹಿತಿ ಈಚನೂರ ಈಸ್ಮಾಯಿಲ್ ಉಪಸ್ಥಿತರಿರುವರು ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯ ಹಿರಿಯ ಹಾಗೂ ಉದಯೋನ್ಮುಖ ಸಾಹಿತಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದು ಸಾಹಿತ್ಯಾಸಕ್ತರು ಆಗಮಿಸಲು ಕೋರಿದ್ದಾರೆ.

Please follow and like us:
error