ಸಾವಿನಲ್ಲೂ ಒಂದಾದ ತಾಯಿ ಮಗ

 ಸಾವನ್ನಪ್ಪಿದ ಸುದ್ದಿ ತಿಳಿದು ಹೃದಯಘಾತವಾಗಿ ಮಗ ಸಾವನ್ನಪ್ಪಿ ತಾಯಿ ಮಗ ಸಾವಿನಲ್ಲೂ ಒಂದಾದ‌ ಹೃದಯವಿದ್ರಾವಕ ಘಟನೆ ಕೊಪ್ಪಳ ದಲ್ಲಿ ನಡೆದಿದೆ. ಕೊಪ್ಪಳ ತಾಲೂಕಿನ ಚುಕ್ಕನಕಲ್ ಗ್ರಾಮದಲ್ಲಿ ಇಂಥೊಂದು  ಹೃದಯವಿದ್ರಾವಕ ಘಟನೆ ನಡೆದಿದ್ದು. ಇಡಿ  ಗ್ರಾಮದಲ್ಲಿಯೇ ಸ್ಮಶಾನ ಮೌನ ಆವರಿಸಿದೆ‌. ಎಂಬತ್ತು ವರ್ಷದ ರೇಣುಕಮ್ಮ ಅನಾರೋಗ್ಯ ದಿಂದ ಸಾವನ್ನಪ್ಪಿದ್ರೆ. ತಾಯಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮಗ 60 ವರ್ಷದ  ಯಲ್ಲಪ್ಪರೆಡ್ಡಿ  ಇಹಲೋಕ ತ್ಯಜಿಸಿದ್ದಾನೆ. ಇಂದು ಬೆಳಗ್ಗೆ 4 ಗಂಟೆಗೆ ತಾಯಿ ಸಾವನ್ನಪ್ಪಿದ್ದಾಳೆ, ಆದ್ರೆ ತಾಯಿ ಸಾವನ್ನಪ್ಪಿರೋ ಸುದ್ದಿ ಯನ್ನ ಮಗ ಯಲ್ಲಪ್ಪರೆಡ್ಡಿಗೆ 3 ಗಂಟೆ ಬಳಿಕ ಅಂದ್ರೆ 7 ಗಂಟೆ ಸುಮಾರಿಗೆ ಗೊತ್ತಾಗಿದೆ. ಈ ಸಂದರ್ಬದಲ್ಲಿ ಹೃದಯಾಘಾತವಾಗಿ ಆತನೂ ಮೃತಪಟ್ಟಿದ್ದಾನೆ.

Leave a Reply