ಸಾವಿನಲ್ಲೂ ಒಂದಾದ ಗಂಡ ಹೆಂಡತಿ

ಗಂಡ ಹೃದಯಾಘಾತದಿಂದ ಸತ್ತು ಎರಡೇ ತಾಸಲ್ಲಿ ಹೆಂಡತಿಗೆ ಹೃದಯಾಘಾತಕ್ಕೊಳಗಾಗಿ ಪಾಣಬಿಟ್ಟು ಸಾವಲ್ಲೂ ಒಂದಾದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಗಂಗಾವತಿಯ ಸಿದ್ದಿಕೇರಿ ಬಳಿಯ ತೋಟದ

ಮನೆಯಲ್ಲಿ ವಾಸವಿದ್ದ 65 ವರ್ಷದ ದುರುಗಪ್ಪ ನಾಯಕ್ ಜೋಗದ್, 60 ವರ್ಷದ ಹುಲಿಗೆಮ್ಮ ಜೋಗದ್ ಎಂಬ ವೃದ್ಧ ದಂಪತಿಗಳು ಇಂದು ಬಾರದ ಲೋಕಕ್ಕೆ ಹೋಗಿದ್ದಾರೆ. ನಾಲ್ಕೈದು ದಶಕಗಳ ಕಾಲ ಸುಖ ಸಂಸಾರ ಮಾಡಿಕೊಂಡು ಮಕ್ಕಳು ಮೊಮ್ಮಕ್ಕಳೊಂದಿಗೆ ಒಂದಾಗಿದ್ದ ಈ ಜೋಡಿ ಇಂದು ಸಾವಿನಲ್ಲು ಒಂದಾಗಿದ್ದಾರೆ. ಬೆಳಿಗ್ಗೆ 4 ಗಂಟೆ ಸುಮಾರಿಗೆ ದುರುಪ್ಪನಿಗೆ ಹೃದಯಾಘಾತವಾಗಿ ಮನೆಯಲ್ಲಿಯೇ ಸಾವನ್ನಪ್ಪಿದ್ದ. ಗಂಡ ಸಾವು ಹೆಂಡತಿಗೆ ಬರಸಿಡಿಲು ಬಡಿದಂತಾಗಿ ಹುಲಿಗೆಮ್ಮಳಿಗೆ ಹೃದಯಾಘಾತವಾಗಿದೆ. ತಕ್ಷಣ ಗಂಗಾವತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರು ಚಿಕಿತ್ಸೆ ಫಲಿಸದೆ ಹುಲಿಗೆಮ್ಮ ಆಸ್ಪತ್ರೆಯಲ್ಲಿಯೇ ಬೆಳಿಗ್ಗೆ 6 ಗಂಟೆಗೆ ಮೃತಪಟ್ಟಿದ್ದಾಳೆ. ಗಂಡ ಸತ್ತು ಎರಡೇ ತಾಸಲ್ಲಿ ಹೆಂಡತಿಯು ಸಾವನ್ನಿಪ್ಪಿದ್ದು ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಇದ್ದಾಗ ಜೊತೆಯಲ್ಲಿದ್ದ ದಂಪತಿ ಸಾವಿನಲ್ಲಿಯು ಜೊತೆಯಾಗಿದ್ದು ಮಾತ್ರ ಅಪರೂಪ. ಸಾವಿನಲ್ಲಿಯೂ ಒಂದಾದ ವೃದ್ಧ ದಂಪತಿಗಳನ್ನ ನೋಡುವುದಕ್ಕೆ ಸಾರ್ವಜನಿಕರು ಆಗಮಿಸಿ ಕಂಬನಿ ಮಿಡಿಯುತ್ತಿದ್ದಾರೆ.

Please follow and like us:
error