ಸಾಲ ಮನ್ನಾ ಯೋಜನೆಯಡಿ ಶೇ.೮೩ ರಷ್ಟು ಪ್ರಗತಿಗೆ ಜಿಲ್ಲಾಧಿಕಾರಿಗಳಿಂದ ಹರ್ಷ


ಕೊಪ್ಪಳ ಜ.  ): ಸಾಲ ಮನ್ನಾ ಯೋಜನೆಯಡಿ ಕೊಪ್ಪಳ ಜಿಲ್ಲೆಯ ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿ ಶೇ.೮೩ ರಷ್ಟು ಪ್ರಗತಿ ಸಾಧಿಸಿದ್ದು, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸರ್ಕಾದರ ಮಹಾತ್ವಾಕಾಂಕ್ಷಿ ಯೋಜನೆಯಾದ ರೈತರ ಬೆಳೆ ಸಾಲ ಮನ್ನಾ ಯೋಜನೆ ಜಾರಿಯಲ್ಲಿದ್ದು, ರೈತರು ತಮ್ಮ ಸಾಲಕ್ಕೆ ಸಂಬಂಧಿಸಿದ ಆಧಾರಕಾರ್ಡ, ಪಡಿತರ ಚೀಟಿ ಹಾಗೂ ಸರ್ವೆ ನಂಬರಿನ ವಿವರಗಳನ್ನು ಸಂಬಂಧಪಟ್ಟ ಬ್ಯಾಂಕಿನಲ್ಲಿ ಹಾಗೂ ನಾಡಕಛೇರಿಯ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಿರುವುದರಿಂದ ಕೊಪ್ಪಳ ಜಿಲ್ಲೆಯ ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದಕ್ಕಾಗಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಜಿಲ್ಲಾ ಸಹಕಾರ ಸಂಘಗಳ ಉಪನಿಭಂಧಕರು, ಇತರೆ ಸಹಕಾರ ಬ್ಯಾಂಕುಗಳ ಹಾಗೂ ವಾಣಿಜ್ಯ ಬ್ಯಾಂಕುಗಳ ಅಧಿಕಾರಿ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯು ಸಾಲ ಮನ್ನಾ ಯೋಜನೆಯಲ್ಲಿ ಶೇ.೮೩ ರಷ್ಟು ಪ್ರಗತಿ ಸಾಧಿಸಿದೆ.
ಸಹಕಾರಿ ಬ್ಯಾಂಕ ಪ್ರಗತಿ : ಸಹಕಾರಿ ಬ್ಯಾಂಕಗಳಲ್ಲಿ ಸಾಧಿಸಿದ ಪ್ರಗತಿ ವಿವರ ಇಂತಿದೆ. ಜಿಲ್ಲೆಯಲ್ಲಿ ಒಟ್ಟು ೨೪೧೪೫ ಜನ ಅರ್ಹ ರೈತರನ್ನು ಸಾಲಮನ್ನಾಗೆ ಗುರುತಿಸಲಾಗಿದ್ದು, ಇದರಲ್ಲಿ ಶೇ. ೯೯.೩೯ ರಷ್ಟು ಅಂದರೆ ೨೩೯೯೮ ರೈತರ ಸ್ವಯಂ ಧೃಢೀಕರಣ ಪತ್ರಗಳನ್ನು ಪಡೆಯಲಾಗಿದೆ. ೧೪೭ ರೈತರು ಜಿಲ್ಲೆ ಗಡಿ ಭಾಗದವರಾಗಿದ್ದರಿಂದ ಅವರನ್ನು ಸಹ ಸಂಪರ್ಕಿಸಿ ದಾಖಲೆಗಳನ್ನು ಸಲ್ಲಿಸಲು ತಿಳಿಸಲಾಗಿದೆ. ಒಟ್ಟು ೨೪೧೪೫ ಜನ ರೈತರ ಪೈಕಿ ಶೇ. ೯೩.೯೬ ರಷ್ಟು ಅಂದರೆ ೨೨೬೮೬ ರೈತರ ಆಧಾರ ಕಾರ್ಡ, ಪಡಿತರ ಚೀಟಿ ಹಾಗೂ ಸರ್ವೇ ನಂಬರಿನ ಮಾಹಿತಿಯನ್ನು ಯಶಸ್ವಿಯಾಗಿ ತಂತ್ರಾಂಶದಲ್ಲಿ ದಾಖಲು ಮಾಡಲಾಗಿದೆ. ಇದರ ಹೊರತಾಗಿ ೩೨೦೭ ಪ್ರಕರಣಗಳು ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರ ನೇತೃತ್ವದ ತಾಲೂಕು ಮಟ್ಟದ ಸಮಿಗೆ ಶಿಫಾರಸ್ಸುಗೊಂಡಿರುತ್ತವೆ. ಸಮಿತಿಯಲ್ಲಿ ತಹಶೀಲ್ದಾರರು ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿಗಳು ಪರಿಶೀಲನೆ ಮಾಡಿ ಸರ್ಕಾರಿ ಆದೇಶದ ನಿರ್ದೇಶನದಂತೆ ಯಾವುದೇ ರೈತರು ಒಂದಕ್ಕಿಂತ ಹೆಚ್ಚಿನ ಸಂಘ/ ಸಹಕಾರ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದಲ್ಲಿ ಒಂದು ಸಂಸ್ಥೆಯಿಂದ ಮಾತ್ರ ಸಾಲ ಮನ್ನಾ ಸೌಲಭ್ಯ ಪಡೆಯತಕ್ಕದು ಎಂಬ ಸೂಚನೆಗೊಳಪಟ್ಟು, ಶೇ.೭೦ ರಷ್ಟು ಅಂದರೆ ಒಟ್ಟು ೨೨೧೬ ಪ್ರಕರಣಗಳ ಇತ್ಯರ್ಥಪಡಿಸಿರುತ್ತಾರೆ. ಸರ್ಕಾರದಿಂದ ಒಟ್ಟು ೪ ಕಂತುಗಳಲ್ಲಿ ಒಟ್ಟು ೧೪೨೫ ರೈತರ ಖಾತೆಗಳಿಗೆ ರೂ. ೮೫೭.೨೨ ಲಕ್ಷಗಳ ಹಣ ಬಿಡುಗಡೆ ಮಾಡಲಾಗಿರುತ್ತವೆ.
ವಾಣಿಜ್ಯ ಬ್ಯಾಂಕ ಪ್ರಗತಿ : ವಾಣಿಜ್ಯ ಬ್ಯಾಂಕಗಳಲ್ಲಿ ಸಾಧಿಸಿದ ಪ್ರಗತಿ ವಿವರ ಇಂತಿದೆ. ಜಿಲ್ಲೆಯಲ್ಲಿ ಒಟ್ಟು ೬೬೬೫೮ ಜನ ಅರ್ಹ ರೈತರನ್ನು ಸಾಲಮನ್ನಾಗೆ ಗುರುತಿಸಲಾಗಿದ್ದು, ಇದರಲ್ಲಿ ಶೇ.೮೩.೨೩ ರಷ್ಟು ಅಂದರೆ ೫೩೮೧೨ ರೈತರ ಸ್ವಯಂ ಧೃಢೀಕರಣ ಪತ್ರಗಳನ್ನು ಪಡೆಯಲಾಗಿದೆ. ಉಳಿದಂತೆ ೧೨೮೪೬ ರೈತರನ್ನು ಸಹ ಸಂಪರ್ಕಿಸಿ ದಾಖಲೆಗಳನ್ನು ಸಲ್ಲಿಸಲು ತಿಳಿಸಲಾಗಿದೆ. ಒಟ್ಟು ೬೬೬೫೮ ಜನ ರೈತರ ಪೈಕಿ ಶೇ.೭೫ ರಷ್ಟು ಅಂದರೆ ೪೯೯೯೨ ರೈತರ ಆಧಾರ ಕಾರ್ಡ, ಪಡಿತರ ಚೀಟಿ ಹಾಗೂ ಸರ್ವೇ ನಂಬರಿನ ಮಾಹಿತಿಯನ್ನು ಯಶಸ್ವಿಯಾಗಿ ತಂತ್ರಾಂಶದಲ್ಲಿ ದಾಖಲು ಮಾಡಲಾಗಿದೆ. ಇದರ ಹೊರತಾಗಿ ೧೯೯೬೯ ಪ್ರಕರಣಗಳು ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರ ನೇತೃತ್ವದ ತಾಲೂಕು ಮಟ್ಟದ ಸಮಿತಿಗೆ ಶಿಫಾರಸ್ಸುಗೊಂಡಿರುತ್ತವೆ. ಸಮಿತಿಯಲ್ಲಿ ತಹಶೀಲ್ದಾರರು ಹಾಗೂ ಬ್ಯಾಂಕ್ ಪ್ರತಿನಿಧಿಯವರು ಪರಿಶೀಲನೆ ಮಾಡಿ ಪ್ರಕರಣಗಳನ್ನು ಇತ್ಯರ್ಥಪಡಿಸಲಿದ್ದಾರೆ. ಸರ್ಕಾರದಿಂದ ಮೊದಲನೇ ಕಂತಿನಲ್ಲಿ ಒಟ್ಟು ೩೧೭೦ ರೈತರ ಖಾತಗಳಿಗೆ ರೂ. ೧೩೮೮.೨೩ ಲಕ್ಷಗಳ ಹಣ ಬಿಡುಗಡೆ ಮಾಡಲಾಗಿದೆ. ಇದರ ಹೊರತಾಗಿ ಒಟ್ಟು ೬೬೬೫೮ ಜನ ಅರ್ಹ ರೈತರ ಪೈಕಿ ಸುಮಾರು ಶೇ. ೧೦% ರಷ್ಟು ಅಂದರೆ ೬೫೦೦ ಜನ ರೈತರು ಸಹಕಾರ ಬ್ಯಾಂಕಿನಲ್ಲಿ ಹಾಗೂ ವಾಣಿಜ್ಯ ಬ್ಯಾಂಕಿನಲ್ಲಿ ಎರಡರಲ್ಲಿಯೂ ಕೂಡ ಸಾಲ ಪಡೆದ ಬಗ್ಗೆ ಮಾಹಿತಿ ಇರುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದ ನಿರ್ದೇಶನದಂತೆ ರಾಜ್ಯದ ಸಹಕಾರ ಸಂಸ್ಥೆ/ ಬ್ಯಾಂಕುಗಳಿಗೆ ಘೋಷಿಸಿರುವ ಬೆಳೆಸಾಲ ಮನ್ನಾ ಯೋಜನೆಯ ಫಲಾನುಭವಿಗಳು ಈ ಯೋಜನೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂಬ ಸೂಚನೆಗೊಳಪಟ್ಟು ಪ್ರಕರಣಗಳನ್ನು ಇತ್ಯರ್ಥಪಡಿಸುವ ಕ್ರಮ ಜರುಗಿಸಲಾಗುತ್ತದೆ.
ಇನ್ನುಳಿದಂತೆ ೧೨೮೪೬ ರೈತರು ತಮ್ಮ ಆಧಾರಕಾರ್ಡ, ಪಡಿತರ ಚೀಟಿ ಹಾಗೂ ಸರ್ವೆ ನಂಬರಿನ ವಿವರಗಳೊಂದಿಗೆ ಸ್ವಯಂ ಧೃಢೀಕರಣ ಪತ್ರವನ್ನು ಜ. ೧೯ ರೊಳಗಾಗಿ ಸಂಬಂಧಪಟ್ಟ ಬ್ಯಾಂಕಿನಲ್ಲಿ ಅಥವಾ ನಾಡಕಛೇರಿಯ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಸಲ್ಲಿಸಿ ಸರ್ಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Please follow and like us:
error