ಸಾರ್ವಜನಿಕ ಸ್ಥಳದಲ್ಲಿ ಪಕ್ಷದ ಪರ ಬ್ಯಾನರ್ : ಕಾನೂನು ಕ್ರಮಕ್ಕೆ ಪ್ರಕರಣ ದಾಖಲು

ಕೊಪ್ಪಳ ಮಾ. : ಕೊಪ್ಪಳ ನಗರದ ಸಾರ್ವಜನಿಕ ಸ್ಥಳದಲ್ಲಿ ಪಕ್ಷದ ಪರ ಬ್ಯಾನರ್ ಕಟ್ಟಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದು, ಕಾನೂನು ಕ್ರಮಕ್ಕೆ ಪ್ರಕರಣ ದಾಖಲಾಗಿದೆ.

ಸೋಮವಾರ (ಮಾ. 18 ರಂದು) ಬೆಳಿಗ್ಗೆ 08 ರಿಂದ 09 ಗಂಟೆಯ ಅವಧಿಯಲ್ಲಿ ಕೊಪ್ಪಳ ನಗರದ ಕೋಟೆ ಏರಿಯಾದಲ್ಲಿರುವ ಕೋಟೆ ಆಂಜನೇಯ ದೇವಸ್ಥಾನದ ಕಲ್ಲಿನ ಕಂಬಕ್ಕೆ ಒಂದು ಬ್ಯಾನರ್ ಕಟ್ಟಿದ್ದು, ಅದರಲ್ಲಿ ರಾಜಶೇಖರ ಹಿಟ್ನಾಳರವರ ಭಾವಚಿತ್ರವಿದೆ. ಯುವ ಜನರ ಆಶಾಕಿರಣ ಎಂದು ಬರೆದಿದ್ದು, ಕಾಂಗ್ರೆಸ್ ಪಕ್ಷದ ಕಾರ್ಮಿಕ ಘಟಕ ರಾಜ್ಯ ಕಾರ್ಯದರ್ಶಿ ಮಂಜುನಾಥ ಗೊಂಡಬಾಳ ಎಂಬುವರು ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ. ಕಾಂಗ್ರೆಸ್ ಪಕ್ಷದ ಪರವಾಗಿ ಸಾರ್ವಜನಿಕ ಸ್ಥಳದಲ್ಲಿ ಬ್ಯಾನರನ್ನು ಕಟ್ಟಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದು ಕಂಡು ಬಂದಿರುವುದರಿಂದ ಕೊಪ್ಪಳ ತಾಲೂಕಿನ ಎಂ.ಸಿ.ಸಿ. ಫ್ಲೈಯಿಂಗ್ ಸ್ಕ್ವಾಡ್ ಸ್ಥಳದಲ್ಲಿದ್ದ ಬ್ಯಾನರನ್ನು ಜಪ್ತಿಮಾಡಿಕೊಂಡು ದೇವಸ್ಥಾನದ ಪೂಜಾರಿ ಹಾಗೂ ಮಂಜುನಾಥ ಗೊಂಡಬಾಳ, ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು 08-ಕೊಪಳ ಲೋಕಸಭಾಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ತಿಳಿಸಿದ್ದಾರೆ

Please follow and like us:
error