ಗಂಗಾವತಿ ಎಂಎಲ್ಎ ಪರಣ್ಣ ಮುನವಳ್ಳಿ ಫೇಸ್‌ಬುಕ್ ಅಕೌಂಟ್ ಹ್ಯಾಕ್!; ಹಣಕ್ಕೆ ಬೇಡಿಕೆ!!

ಸಾರ್ವಜನಿಕರು ಹಣ ಹಾಕಬಾರದು ಎಂದು ಮನವಿ

ಗಂಗಾವತಿ ಎಂಎಲ್ಎ ಪರಣ್ಣ ಮುನವಳ್ಳಿ ಫೇಸ್‌ಬುಕ್ ಅಕೌಂಟ್ ಹ್ಯಾಕ್!; ಹಣಕ್ಕೆ ಬೇಡಿಕೆ!!

-ಸೈಬರ್ ಕ್ರೈಂ ಠಾಣೆಗೆ ಶಾಸಕ‌ ಪರಣ್ಣ ಮುನವಳ್ಳಿ ದೂರು

ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಿತ್ಯ ಏನಾದರೂ ಕ್ರೈಂ ಇದ್ದೇ ಇರುತ್ತೆ. ಅದರಲ್ಲಿ ಕೆಲವು ಬೆಳಕಿಗೆ ಬರುತ್ತವೆ.‌ಇನ್ನು ಹಲವು ಕತ್ತಲೆಯಲ್ಲೇ ಕಣ್ಮರೆಯಾಗುತ್ತವೆ. ಇದೀಗ ಶಾಸಕ ಪರಣ್ಣ ಮುನವಳ್ಳಿಯವರ ಫೇಸ್‌ಬುಕ್‌ ಅಕೌಂಟ್ ಹ್ಯಾಕ್ ಮಾಡಿರುವ ಕಿಡಿಗೇಡಿಗಳು ಸಾರ್ವಜನಿಕರಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದನ್ನು ಗಮನಿಸಿದ ಗಂಗಾವತಿ ಎಂಎಲ್ಎ ಪರಣ್ಣ ಮುನವಳ್ಳಿಯವರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದು, ಸಾರ್ವಜನಿಕರು ಹಣ ಹಾಕಬಾರದು ಎಂದು ಮನವಿ ಮಾಡಿದ್ದಾರೆ.

Please follow and like us:
error