ಸಾಮೂಹಿಕ ಕವಾಯತು : ಸರಸ್ವತಿ ವಿದ್ಯಾಮಂದಿರ ಪ್ರೌಢಶಾಲೆಗೆ ದ್ವೀತಿಯ ಸ್ಥಾನ


ಕೊಪ್ಪಳ : ಗಣರಾಜ್ಯೋತ್ಸವ ನಿಮಿತ್ಯ ಇಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಾಮೂಹಿಕ ಕವಾಯತಿಯನಲ್ಲಿ ಅತ್ಯುತ್ತi ಸಾಧನೆ ತೋರಿದ ಸರಸ್ವತಿ ವಿದ್ಯಾಮಂದಿರ ಪ್ರೌಢಶಾಲೆಗೆ ದ್ವಿತೀಯ ಸ್ಥಾನ ಲಭಿಸಿದೆ. ಸಾಮೂಹಿಕ ಕವಾಯತ್ ನಲ್ಲಿ ಲೇಜಿಂ ಹಾಗೂ ಡಂಬಲ್ಸ್ ಮತ್ತು ಹಲಗೆ ಬಾರಿಸುತ್ತಾ ಭಾಗವಹಿಸಿದ್ದ ವಿದ್ಯಾರ್ಥಿಗಳ ಆಕರ್ಷಕ ಕವಾಯತ್ತು ಜನಾಕರ್ಷಣೆ ಪಡೆಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಸಚಿವ ರಹಿಂಖಾನ್ ಶಾಲೆಯ ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕ ರಾWವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಎಸ್ಪಿ ರೇಣುಕಾ ಕೆ.ಸುಕುಮಾರ್, ಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ರೇಣುಕಾ ಅತ್ತನೂರ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.