fbpx

ಸಾಮಾಜಿಕ ನ್ಯಾಯ ಕಾಂಗ್ರೆಸ್‌ನಿಂದ ಸಾಧ್ಯ- ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ ೦೪: ಹಿರೆಸಿಂದೋಗಿ ಜಿಲ್ಲಾ ಪಂಚಾಯತ ಗ್ರಾಮಗಳಾದ ದದೆಗಲ್, ಹಲಗೇರಿ, ಕೋಳುರು, ಕಾಟ್ರಳ್ಳಿ, ಹಿರೇಸಿಂದೋಗಿ, ಚಿಕ್ಕಸಿಂದೋಗಿ ಹಾಗೂ ಹೊರತಟ್ನಾಳ್ ಗ್ರಾಮಗಳಲ್ಲಿ ಕಾಂಗ್ರೇಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೇಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಕೆ.ರಾಘವೇಂದ್ರ ಹಿಟ್ನಾಳ್ ರವರು ಮಾತನಾಡಿ ಮುಖ್ಯಮಂತ್ರಿ ಸಿದ್ಧರಾಮ್ಯನವರ ಅಧಿಕಾರ ಅವಧಿಯ ಈ ೫ ವರ್ಷದಲ್ಲಿ ರಾಜ್ಯದ ಜನತೆಗೆ ನೀಡಿದ ೧೬೫ ಬೇಡಿಕೆಗಳನ್ನು ಈಡೇರಿಸಿ ಎಲ್ಲಾ ವರ್ಗಗಳ ಜನರ ಹಿತ ಕಾಪಾಡಿದ್ದು ಕಾಂಗ್ರೇಸ್ ಸರ್ಕಾರ. ಸಾಮಾಜಿಕ ನ್ಯಾಯದ ತತ್ವದ ಅಡಿಯಲ್ಲಿ ಅಧಿಕಾರ ನಡೆಸಿದ ಸಿದ್ಧರಾಮಯ್ಯನವರು ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಹೆಗ್ಗಳಿಕೆ ಕಾಂಗ್ರೇಸ್ ಸರ್ಕಾರದ ಮುಖ್ಯಮಂತ್ರಿಗಳಿಗೆ ಸಲ್ಲುತ್ತದೆ. ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್, ಉಚಿತ ಲ್ಯಾಪ್‌ಟಾಪ್ ವಿತರಣೆ ಮಾಡಿ ಯಾವೋಬ್ಬ ವಿದ್ಯಾರ್ಥಿಯು ಶಿಕ್ಷಣದಿಂದ ವಂಚಿತರಾಗಬಾರದೆಂದು ಸರ್ವರಿಗೂ ಶಿಕ್ಷಣದ ಸೌಲತ್ತು ಕಲ್ಪಿಸಿದ್ದು ಕಾಂಗ್ರೇಸ್ ಸರ್ಕಾರ. ರೈತರ ಸ್ವಾವಾಲಂಬಿ ಬದುಕಿಗೆ ಅನೇಕ ರೈತರ ಯೋಜನೆಗಳನ್ನು ಜಾರಿಗೆ ತಂದು ಅವರ ಆರ್ಥಿಕ ವ್ಯವಸ್ಥೆಯನ್ನು ಸಧೃಡಗೋಳಿಸಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೇಸ್ ಸರ್ಕಾರವು ಅಧಿಕಾರಕ್ಕೆ ಬಂದು ರಾಷ್ಟ್ರದ ರಾಜಕಾರಣದ ದಿಕ್ಸೂಚಿ ಕರ್ನಾಟಕದ ಚುನಾವಣಾ ಫಲಿತಾಂಶವೇ ನಿರ್ಣಾಯಕವಾಗಲಿದೆ. ಜನ ಅಭಿವೃದ್ಧಿಗೆ ಬೆಂಬಲಿಸುವುದು ಶತಸಿದ್ಧ. ಮೇ ೧೨ ರಂದು ನಡೆಯುವ ರಾಜ್ಯ ಸಾವ್ರರ್ತಿಕ ಚುನಾವಣೆಯಲ್ಲಿ ಕಾಂಗ್ರೇಸ್ ಗೆಲುವು ನಿಶ್ಚಿತವೆಂದು ಘಂಠಾ ಘೋಷವಾಗಿ ಹೇಳಿ ಸುಳ್ಳು ಹೇಳುವುದೇ ಬಿ.ಜೆ.ಪಿ ನಾಯಕರ ಜಾಯಮಾನವೆಂದು ಟೀಕಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಮಾಜಿ ಜಿ.ಪಂ ಅಧ್ಯಕ್ಷ ಎಸ್.ಬಿ ನಾಗರಹಳ್ಳಿ, ತಾ.ಪಂ ಅಧ್ಯಕ್ಷ ಬಾಲಚಂದ್ರನ್, ಪ್ರಾಧಿಕಾರ ಅಧ್ಯಕ್ಷ ಜುಲ್ಲು ಖಾದ್ರಿ,. ಕಾಂಗ್ರೇಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ಎ.ಪಿ.ಎಮ್.ಸಿ ಅಧ್ಯಕ್ಷ ವೆಂಕಣಗೌಡ್ರ ಹೀರೇಗೌಡ್ರ, ತಾ.ಪಂ ಸದಸ್ಯ ಸಿದ್ಧಲಿಂಗ ಸ್ವಾಮಿ ಇನಾಮ್‌ದಾರ, ಮುಖಂಡರುಗಳಾದ ಹೆಚ್.ಎಲ್.ಹೀರೆಗೌಡ್ರ, ಹನುಮರೆಡ್ಡಿ ಹಂಗನಕಟ್ಟಿ, ಗವಿಸಿದ್ಧಪ್ಪ ಮುದುಗಲ್, ಗಾಳೆಪ್ಪ ಪೂಜಾರ, ಸಾವಿತ್ರಿ ಮುಜಂದಾರ, ಯಂಕಣ್ಣ ಕೊಳ್ಳಿ, ಲಕ್ಷ್ಮಣ ಡೊಳ್ಳಿಣ, ನಿಂಗಪ್ಪ ಯತ್ನಟ್ಟಿ, ಕೇಶವ ರೆಡ್ಡಿ, ಕೃಷ್ಣ ಗಲಬಿ, ಪ್ರಸನ್ನ ಗಡಾದ್, ಯಮನೂರಪ್ಪ ನಾಯಕ, ಶಿವಣ್ಣ ಹಂದ್ರಾಳ, ನಜೀರ್ ಅಳವಂಡಿ, ಶಿವು ಚಳ್ಳಾರಿ, ಹನುಮಂತಪ್ಪ ಕಿಡದಾಳ, ನವೋದಯ ವಿರುಪಣ್ಣ, ಕೌಶಲ್ ಚೋಪ್ರಾ, ರೇವಯ್ಯ ಮಠದ, ಅಶೋಕ ಅಬ್ಬಿಗೇರಿ, ಹನುಮಂತ ಹಳ್ಳೀಕೇರಿ, ಮೌಲಾಹುಸೇನ್, ಅಂದಾನಸ್ವಾಮಿ, ಕೊಟೇಶ ತಳವಾರ, ಅಂದಪ್ಪ ನಾಯಕ, ದೌಲತ್‌ಸಾಬ್ ಮಂಗಳಾಪುರ ಹಾಗೂ ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Please follow and like us:
error
error: Content is protected !!