ಸಾಮಾಜಿಕ ಕಳಕಳಿಗೆ ನೀನೆ ರಾಜಕುಮಾರ ಒಂದು ಮಾದರಿ – ಕಿರು ಚಿತ್ರ ಬಿಡುಗಡೆ

ನಗರದ ಸಾಹಿತ್ಯ ಭವನದಲ್ಲಿ ರಿಧಮ್ ಡ್ಯಾನ್ಸ್ ಆಂಡ್ ಕಲ್ಚರಲ್ ಟ್ರಸ್ಟ್ ಆಯೋಜಿಸಿದ ಆದರ್ಶ ದಂಪತಿಗಳು ಸೀಜನ್ ೨ ಕಾರ್ಯಕ್ರಮ ವೇಳೆ ನೀನೆ ರಾಜಕುಮಾರ ಕಿರು ಚಿತ್ರ ನಿನ್ನೆ ಅದ್ಧೂರಿಯಾಗಿ ಬಿಡುಗಡೆ ಆಗಿದೆ, ಈಗ ಎಲ್ಲವೂ ಶಾರ್ಟ್, ಬ್ಯುಸಿ ಲೈಫ್ನಲ್ಲಿ ಜನರಿಗೆ ಸಮಯ ಕೂಡ ಇರುವುದಿಲ್ಲ. ಸಾಮಾಜಿಕ ಸಂದೇಶಗಳನ್ನು ಪುಟಗಟ್ಟಲೆ ಬರೆದರೆ ಯಾರು ಓದುವುದಿಲ್ಲ. ಹಾಗಾಗಿ ಕೆಲವರು ಸಂದೇಶಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಕಿರು ಚಿತ್ರಗಳ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಿರು ಚಿತ್ರಗಳನ್ನು ನಿರ್ಮಾಣ ನಿರ್ದೇಶನ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಕಿರು ಚಿತ್ರ ಎಂಬುದು ಸಿನಿಮಾದ ಮತ್ತೊಂದು ಪರಿಭಾಷೆ ಎಂದೇ ಹೇಳಬಹುದು. ಸುಮಾರು ಮೂರು ಗಂಟೆಗಳ ಸಮಯದ ಸಿನಿಮಾದಲ್ಲಿ ಹೇಳಲಾಗದ ವಿಷಯವನ್ನು, ಕೆಲ ನಿಮಿಷಗಳಲ್ಲಿ ಹೇಳುವಂತಹ ಪ್ರಕ್ರಿಯೆ ಕಿರುಚಿತ್ರಗಳಲ್ಲಿ ಪರಿಣಾಮಕಾರಿಯಾಗಿ ನಡೆಯುತ್ತಿದೆ. ಇದು ಸಾಮಾನ್ಯವಾಗಿ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವ ನಿಟ್ಟಿನಲ್ಲಿ, ತಮ್ಮ ಪ್ರತಿಭೆಗಳನ್ನು ಹೊರಹಾಕಲು ಯುವ ಪ್ರತಿಭೆಗಳು ಹೆಚ್ಚಾಗಿ ಮಾಡುತ್ತಾರೆ. ಇದರ ಜತೆಗೆ ಕೆಲ ಯುವಕರು ಈ ಕಿರು ಚಿತ್ರಗಳನ್ನು ಸಾಮಾಜಿಕ ಕಳಕಳಿಯಿಂದ ನಿರ್ಮಾಣ ಮಾಡುತ್ತಿದ್ದಾರೆ. ನೀನೆ ರಾಜಕುಮಾರ ಕಿರು ಚಿತ್ರ ಸಂಭಾಷಣೆಗಳೇ ಇಲ್ಲದೆ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ರವಾನೆ ಮಾಡುತ್ತಿದೆ. ಇತ್ತೀಚಿಗೆ ಬಂದ ನೀನೆ ರಾಜಕುಮಾರ ಕಿರು ಚಿತ್ರ ಒಂದು ಮಾದರಿ ಚಿತ್ರ ಸೇರುತ್ತದೆ. ಪತ್ರಕರ್ತ ಬಸವರಾಜ ಮರದೂರ ಅವರು ಮಾನವೀಯತೆ ಹಿನ್ನೆಲೆಯಲ್ಲಿ ಈಗಿನ ಯುವಕರಿಗೆ ಸಂದೇಶ ಹೇಳುವಂತಹ ನೀನೆ ರಾಜಕುಮಾರ್ ಕಿರು ಚಿತ್ರ ರಾಯಲ್ ಫೇಮ್ ಕ್ರಿಯೇಷನ್ಸ್ ರವರ ನಿರ್ಮಾಣದ ಎರಡನೇ ಕಿರುಚಿತ್ರ “ನೀನೆ ರಾಜಕುಮಾರ” ಮಕ್ಕಳಾಧಾರಿತ ಮಾನವೀಯತೆ ಬಗ್ಗೆ ಕುರಿತು ಈ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಮಾನವೀಯತೆ ಆಧಾರವಾಗಿಟ್ಟುಕೊಂಡು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ, ನಿರ್ದೇಶನ, ಸಂಭಾಷಣೆಯನ್ನು ಸ್ವತಃ ಮರದೂರವರೇ ನಿರ್ವಹಿಸುತ್ತಿದ್ದಾರೆ. ಚಿತ್ರದ ಉದ್ದಕ್ಕೂ ಯಾವುದೇ ಸಂಭಾಷಣೆಗಳನ್ನು ಬಳಸಿಲ್ಲ, ೨೦ ನಿಮಿಷಗಳಿಗೆ ಸೀಮಿತವಾಗುವ ಈ ಕಿರು ಚಿತ್ರ ಸಾಕಷ್ಟು ಪರಿಣಾಮಕಾರಿ ಅಂಶಗಳನ್ನು ಹೊಂದಿದೆ. ಸಾಮಾಜಿಕ ಕಳಕಳಿಗೆ ನೀನೆ ರಾಜಕುಮಾರ ಈ ಕಿರು ಚಿತ್ರ ಒಂದು ಮಾದರಿ, ಇನ್ನು ಮುಂದಿನ ದಿನಗಳಲ್ಲೂ ಇಂತಹ ಸಾಮಾಜಿಕ ಸಂದೇಶ ಉಳ್ಳ ಸಾಕಷ್ಟು ಕಿರು ಚಿತ್ರಗಳು ನಿರ್ಮಾಣವಾಗಲಿ, ಒಟ್ಟಿನಲ್ಲಿ ಕಿರು ಚಿತ್ರಗಳೆಂದರೆ ಬರೀ ನಿರ್ದೇಶಕನಾಗಲು ಅರ್ಹತೆ ಗಿಟ್ಟಿಸುವ ಅಂಕಪಟ್ಟಿಯಾಗದೆ ಸಮಾಜದ ಅಂಕುಡೊಂಕುಗಳಿಗೆ ಕನ್ನಡಿ ಹಿಡಿಯುವ ಒಂದು ಮಾಧ್ಯಮವಾಗಿರುವುದು ಸಂತಸದ ಸಂಗತಿ.

Please follow and like us:
error