ಸಹಕಾರಿ ಬ್ಯಾಂಕ್‌ಗಳ ಸಾಲವನ್ನು ಪೊಲೀಸರ ಸಹಾಯದಿಂದ ವಸೂಲು ಮಾಡಿ ಎಂದು ಆದೇಶ: ಖಂಡನೀಯ- ಭಾರಧ್ವಾಜ್

ಗಂಗಾವತಿ: ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ರೈತರಿಗೆ ಕೊಟ್ಟ ಸಾಲವನ್ನು ಪೊಲೀಸರ ಮುಖಾಂತರ ವಸೂಲಿ ಮಾಡಬೇಕೆಂದು ಸಹಕಾರ ಸಂಘಗಳ ನಿಬಂಧಕರು ಕರ್ನಾಟಕ ರಾಜ್ಯ ಇವರು ಆದೇಶಿಸಿರುವುದು ಖಂಡನೀಯವೆಂದು ಎ.ಐ.ಕೆ.ಎಂ. ಪ್ರಕಟಣೆಯಲ್ಲಿ ಖಂಡಿಸಿದೆ.
ಕರ್ನಾಟಕದಲ್ಲಿ ಕಳೆದ ೦೩ ವರ್ಷಗಳಿಂದ ಬರಗಾಲ, ನೆರೆ ಇನ್ನಿತರ ಪ್ರಕೃತಿ ವಿಕೋಪಗಳಿಂದ ನಷ್ಟಕ್ಕೊಳಗಾದ ರೈತರಿಗೆ ಪರಿಹಾರಗಳನ್ನು ಒದಗಿಸದೆ ರೈತರ ಸಾಲವನ್ನು ಪೊಲೀಸರ ಸಹಾಯದಿಂದ ವಸೂಲಿ ಮಾಡಲು ಮುಂದಾಗಿರುವುದು ಯಡಿಯೂರಪ್ಪರವರ ಬಿಜೆಪಿ ಸರ್ಕಾರ ರೈತವಿರೋಧಿ ಎಂದು ಖಚಿತವಾಗಿದೆ.
ರೈತರು, ಕೃಷಿ ಕಾರ್ಮಿಕರು ಒಂದಾಗಿ ಸಹಕಾರಿ ಬ್ಯಾಂಕ್‌ಗಳ ದೌರ್ಜನ್ಯವನ್ನು ಎದುರಿಸಬೇಕು. ಬ್ಯಾಂಕ್‌ಗಳು ದೌರ್ಜನ್ಯದಿಂದ ರೈತರ ಬಾಕಿಯನ್ನು ವಸೂಲು ಮಾಡಲು ಮುಂದಾದರೆ ಅಖಿಲ ಭಾರತ ಕಿಸಾನ್ ಮಹಾಸಭಾ ರಾಜ್ಯದಾಧ್ಯಂತ ರೈತರ ಪರವಾಗಿ ನಿಂತು ಹೋರಾಟ ಮಾಡಲಿದೆ.
ಸಿದ್ದರಾಮಯ್ಯನವರ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದು, ಮುಂದಿನ ಸಮ್ಮಿಶ್ರ ಸರ್ಕಾರ ರೈತರ ಬಾಕಿ ಮನ್ನಾ ಮಾಡಲು ಆದೇಶ ನೀಡಿದ್ದು, ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರಿಂದ ಯಾವುದೇ ಬಾಕಿ ವಸೂಲು ಮಾಡಬಾರದೆಂದು ಆದೇಶಿಸಿದ್ದರು. ಈಗಿನ ಬಿಜೆಪಿ ಯಡಿಯೂರಪ್ಪರವರ ಸರ್ಕಾರ ಪೊಲೀಸ್ ಸಹಾಯದಿಂದ ರೈತರ ಆಸ್ತಿಗಳನ್ನು, ಟ್ರ್ಯಾಕ್ಟರ್‌ಗಳನ್ನು ವಶಪಡಿಸಿಕೊಂಡು ರೈತರ ಭೂಮಿಯನ್ನು ಹರಾಜು ಮಾಡಬೇಕೆಂದು ಆದೇಶಿಸಿದೆ. ಇದರಿಂದಾಗಿ ರೈತರು ಭಯಭೀತರಾಗಿದ್ದಾರೆ. ಕೂಡಲೇ ಬಿಜೆಪಿ ಸರ್ಕಾರ ತಮ್ಮ ರೈತರ ಬಾಕಿ ವಸೂಲಿ ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ರೈತರ ಉಗ್ರ ರೂಪದ ಹೋರಾಟವನ್ನ ಎದುರಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ.

(ಭಾರಧ್ವಾಜ್)
ಸಂಚಾಲಕರು

Please follow and like us:
error