Breaking News
Home / Koppal News / ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ : ಆ. ೦೫ ರಂದು ಲಿಖಿತ ಪರೀಕ್ಷೆ
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ : ಆ. ೦೫ ರಂದು ಲಿಖಿತ ಪರೀಕ್ಷೆ

ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ : ಆ. ೦೫ ರಂದು ಲಿಖಿತ ಪರೀಕ್ಷೆ

: ಕೊಪ್ಪಳ ಜಿಲ್ಲಾ ಪೊಲೀಸ್ ಘಟಕದಲ್ಲಿ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ರ ಪ್ರಸಕ್ತ ಸಾಲಿನ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ಆ. ೦೫ ರಂದು ಭಾನುವಾರ ಬೆಳಿಗ್ಗೆ ೧೦-೩೦ ರಿಂದ ೧೨ ಗಂಟೆಯವರೆಗೆ ಜಿಲ್ಲೆಯ ಗಂಗಾವತಿ ನಗರದ ೦೬ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು ೨೩೦೦ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಪರೀಕ್ಷಾ ಕೇಂದ್ರಗಳ ವಿವರ : ಗಂಗಾವತಿಯ ಸಾಯಿ ನಗರದ ಕೊಲ್ಲಿ ನಾಗೇಶ್ವರಾವ್ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಮಹಾ ವಿದ್ಯಾಲಯದಲ್ಲಿ ರೂಲ್ ನಂಬರ್. ೧೧೬೧೦೦೧ ರಿಂದ ೧೧೬೧೬೦೦ ವರೆಗೆ ಒಟ್ಟು ೬೦೦ ಅಭ್ಯರ್ಥಿಗಳು. ವಿರುಪಾಪುರ ಬೆಥಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ರೂಲ್ ನಂಬರ್. ೧೧೬೧೬೦೧ ರಿಂದ ೧೧೬೨೦೦೦ ವರೆಗೆ ಒಟ್ಟು ೪೦೦, ಎಂ.ಎನ್.ಎಂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್ (ಪ್ರೌಢ ಶಾಲಾ ವಿಬಾಗ) ದಲ್ಲಿ ರೂಲ್ ನಂಬರ್. ೧೧೬೨೦೦೧ ರಿಂದ ೧೧೬೨೩೦೦ ರವರೆಗೆ ಒಟ್ಟು ೩೦೦, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರೂಲ್ ನಂಬರ್. ೧೧೬೨೩೦೧ ರಿಂದ ೧೧೬೨೬೦೦ ವರೆಗೆ ಒಟ್ಟು ೩೦೦, ಲಯನ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜ್ ಲಯನ್ಸ್ ಕ್ಲಬ್ ಆವರಣದಲ್ಲಿ ರೂಲ್ ನಂಬರ್. ೧೧೬೨೬೦೧ ರಿಂದ ೧೧೬೨೯೦೦ ವರೆಗೆ ಒಟ್ಟು ೩೦೦, ಎಲ್.ಐ.ಸಿ ಆಫೀಸ್ ಎದುರುಗಡೆಯ ಲಿಟಲ್ ಹಾರ್ಟ್ಸ್ ಸ್ಕೂಲ್‌ನಲ್ಲಿ ರೂಲ್ ನಂಬರ್. ೧೧೬೨೯೦೧ ರಿಂದ ೧೧೬೩೩೦೦ ವರೆಗೆ ಒಟ್ಟು ೪೦೦, ಸೇರಿದಂತೆ ಜಿಲ್ಲೆಯ ಗಂಗಾವತಿ ತಾಲೂಕಿನ ೦೬ ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು ೨೩೦೦ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕರೆಪತ್ರಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್ ತಿತಿತಿ.ಞsಠಿ.gov.iಟಿ <hಣಣಠಿ://ತಿತಿತಿ.ಞsಠಿ.gov.iಟಿ> ನಿಂದ ಪಡೆದುಕೊಳ್ಳಬಹುದಾಗಿದೆ. ಲಿಖಿತ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ ಹಾಗೂ ಲಿಖಿತ ಪರೀಕ್ಷೆಗೆ ಹಾಜರಾಗಬೇಕಾದ ಪರೀಕ್ಷಾ ಕೇಂದ್ರದ ವಿವರಗಳನ್ನು ಸಹ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಕರಪತ್ರವನ್ನು ಪಡೆಯದೇ ಪರೀಕ್ಷೆಗೆ ಹಾಜರಾದಲ್ಲಿ ಲಿಖಿತ ಪರೀಕ್ಷಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದಿಲ್ಲ. ಕರೆಪತ್ರದ ಜೊತೆಗೆ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು. ನಿಗದಿತ ದಿನಾಂಕ ಹಾಗೂ ಸಮಯದಲ್ಲಿ ಹಾಜರಾಗದಿದ್ದರೆ ಅಂತಹವರನ್ನು ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ನೇಮಕಾತಿ ಅಧ್ಯಕ್ಷರು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About admin

Comments are closed.

Scroll To Top