ಬ್ರಹ್ಮ ಜ್ಞಾನವನ್ನು ತಿಳಿದವರು ಸವಿತಾ ಮಹರ್ಷಿ : ಕೃಷ್ಣಮೂರ್ತಿ ದೇಸಾಯಿ

ಕೊಪ್ಪಳ ಫೆ. ): ಬ್ರಹ್ಮ ಜ್ಞಾನವನ್ನು ತಿಳಿದವರು ಸವಿತಾ ಮಹರ್ಷಿಯವರು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೃಷ್ಣಮೂರ್ತಿ ದೇಸಾಯಿ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಮಂಗಳವಾರದಂದು ಆಯೋಜಿಸಲಾದ ಸವಿತಾ ಮಹರ್ಷಿ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ಪ್ರಥಮ ಭಾರಿಗೆ ಕೊಪ್ಪಳ ಜಿಲ್ಲೆಯಲ್ಲಿ ಸವಿತಾ ಮಹರ್ಷಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಸವಿತಾ ಮಹರ್ಷಿಯವರು ಶಿವನ ಕಣ್ಣಿನಿಂದ ಹುಟ್ಟಿದ ಮನುಷ್ಯನಿಗೆ ಸವಿತಾಮಹರ್ಷಿ ಎಂದು, ಶಿವನ ಕಣ್ಣುಗಳನ್ನು ಸೂರ್ಯ ಚಂದ್ರಗಳು ಎಂದು ಕರೆಯುತ್ತಾರೆ, ಸೂರ್ಯ ಮತ್ತೊಂದು ಹೆಸರೆ ಸವಿತೃ ಆಗಿರುದರಿಂದ ಸವಿತಾ ಮಹರ್ಷಿ ಎಂಬ ಪೌರಾಣಿಕ ಕಥೆಗಳಲ್ಲಿ ಪುರಾಣ ಪುಣ್ಯ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ರಥಸಪ್ತಮಿಯ ಮೇಘ ಮಾಸ ಶುಕ್ಲ ಪಕ್ಷದ ಸಪ್ತಮಿ ದಿನ ಸೂರ್ಯರಾಧನೆಯ ವಿಶೇಷವಾದ ಸದಿನಂದು ಸವಿತಾ ಜಯಂತಿ ಆಚರಣೆ ಮಾಡಲಾಗುತ್ತದೆ. ಮಹರ್ಷಿಗಳು ಬ್ರಹ್ಮ ಜ್ಞಾನವನ್ನು ಹೊಂದಿದ ಸವಿತಾ ಮಹರ್ಷಿಯವರು ಹಿಂದೂ ಧರ್ಮದ ಪವಿತ್ರ ಚತುರ್ವೇದಗಳಲ್ಲಿ ಒಂದಾದ ಸಾಮವೇದವನ್ನು ಬರೆದರು ಎಂಬ ಪ್ರತೀತಿ ಇದೆ. ಸವಿತಾ ಮಹರ್ಷಿಯ ಪುತ್ರಿಯಾದ ಗಾಯಿತ್ರಿದೇವಿಯ ಮಂತ್ರಗಳಲ್ಲಿ ಸವಿತೃ ಎಂಬ ಪದವೂ ಸ್ಪಷ್ಟವಾಗಿ ಕಾಣುತ್ತದೆ, ಸಂಸ್ಕøತ ಗ್ರಂಥವಾದ ನಾಭಿಕ್ ಪುರಾಣದಲ್ಲಿ ಸವಿತಾ ಮಹರ್ಷಿ ಹುಟ್ಟದ ಬಗ್ಗೆ ಉಲ್ಲೇಖಯು ಇದೆ, ಪವಿತ್ರ ಕುಮಾರಸಂಭವ ಗ್ರಂಥದಲ್ಲಿ ಶಿವನ ಪುತ್ರ ಷಣ್ಮುಖನ ಜನನದ ನಂತರ ಬಾಲಕ ಷಣ್ಮುಖನಿಗೆ ಚೌಲಕರ್ಮ ಸೇವೆ ಮಾಡಿರುವುದು ಕಾಣಬಹುದು ಇಂದು ಸವಿತಾ ಸಮಾಜದರು ಕಾಯಕ ದೇಶಲ್ಲಿಯೇ ಉತ್ತಮ ಕಾರ್ಯವಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೃಷ್ಣಮೂರ್ತಿ ದೇಸಾಯಿ ಅವರು ಹೇಳಿದರು.
ಸವಿತಾ ಮಹರ್ಷಿ ಜಯಂತಿ ಕುರಿತು ವಿಶೇಷ ಉಪನ್ಯಾಸವನ್ನು ನೀಡಲು ಆಗಮಿಸಿದ ರಾಯಚೂರು ಉಪನ್ಯಾಸಕರಾದ ಶ್ರೀನಿವಾಸ ನಾಗಲದಿನ್ನಿ ಅವರು ಮಾತನಾಡಿ, ಪ್ರಪ್ರಥಮವಾಗಿ ಸರ್ಕಾರದ ವತಿಯಿಂದ ಸವಿತಾ ಮಹರ್ಷಿಯವರ ಜಯಂತಿಯನ್ನು ಆಚರಣೆ ಮಾಡುತ್ತಿದ್ದು ನಿಜಕ್ಕೂ ನಮ್ಮ ಸಮಾಜಕ್ಕೆ ಹóರ್ಷ ತಂದಿದೆ. ಮತ್ತು ಸರ್ಕಾರ ನೀಡುವ ಯೋಜನೆಗಳನ್ನು ನಮ್ಮ ಸಮಾಜದ ಜನರು ಪೆಡದುಕೊಳಬೇಕು. ಸಮಾಜದ ಜನರು ಹೊಂದಾಗಿ ಸಮಾಜದ ಏಳಿಗೆಗ್ಗಾಗಿ ಪ್ರತಿಯೊಬ್ಬರು ಸ್ರಮಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜೋತ್ಸವ ಪ್ರಶಸ್ತಿ ಪುರಸ್ಕøತರಾದ ಹೆಚ್ ಎಸ್ ಪಾಟೀಲ್, ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಬಳ್ಳಾರಿ, ತಾಲೂಕಾಧ್ಯಕ್ಷರಾದ ಶ್ರೀನಿವಾಸ ಹುಲಗಿ, ಮುಖಂಡರುಗಳಾದ ಜ್ಞಾನೇಶ್ವರರಾವ್, ಕರ್ಕಿಹಳ್ಳಿ ದೇವಪ್ಪ, ಹಿಟ್ನಾಳ ನಾಗರಾಜ , ಕಲ್ಲಪ್ಪ ಹೊನ್ನುಂಟಿ, ಮಾರುತಿ ಸೂಗೂರ್ ಯಲ್ಲಪ್ಪ ಸೂಗೂರ್, ನಾಗರಾಜ ಕಂಪ್ಲಿ, ವಿಠ್ಠಲ್ ಗೌರಿ ಅಂಗಾಲ್, ಶೇಖರ ಆಂದ್ರಾ, ಮಂಜುನಾಥ ಆಂದ್ರಾ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು
ಜಯಂತಿ ಅಂಗವಾಗಿ ಸವಿತಾ ಮಹರ್ಷಿ ಭಾವಚಿತ್ರದ ಮೇರವಣಿಗೆಯು ನಗರದ ಅಕ್ಕಮಹಾದೇವಿ ದೇವಸ್ಥಾನ ( ಮಹೇಶ್ವರ ದೇವಸ್ಥಾನ) ದಿಂದ ಆವರಣದಿಂದ ಪ್ರಾರಂಭಗೊಂಡು, ಗಡಿಯಾರ ಕಂಬದ ಮೂಲಕ ಜವಾಹರ ರಸ್ತೆಯ ಮಾರ್ಗವಾಗಿ ಸಾಹಿತ್ಯ ಭವನದವರೆಗೆ ಸಾಗಿ ಬಂದಿತು. ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿ, ಮೆರವಣಿಗೆಯನ್ನು ಆಕರ್ಷಕಗೊಳಿಸಿದವು.
(

Please follow and like us:
error