ಸರ್ಜಿಕಲ್ ಸ್ಟ್ರೈಕ್ ಶತ್ರು ರಾಷ್ಟ್ರಕ್ಕೆ ಎಚ್ಚರಿಕೆಯ ಸಂದೇಶವಾಗಿದೆ: ಸಂಸದ ಕರಡಿ ಸಂಗಣ್ಣ

ಕೊಪ್ಪಳ, ಸೆ.: ಪಾಕಿಸ್ತಾನದ ಸರಹದ್ದಿನ ಎಲ್‌ಒಸಿ ಸಮೀಪದ ಏಳು ಉಗ್ರರ ನೆಲೆಗಳ ಮೇಲೆ ಹಠಾತ್‌ ಸರ್ಜಿಕಲ್‌ ಸ್ಟ್ರೈಕ್‌ ಸೇನಾ ಕಾರ್ಯಾಚರಣೆಯ ೨ನೇ ವರ್ಷಾಚರಣೆಯ ಸಂಭ್ರಮದಲ್ಲಿ ಶೌರ್ಯ ದಿವಸ ಹಾಗೂ ನಿವೃತ್ತ ಸೈನಿಕರಿಗೆ ಸನ್ಮಾನ ಸಮಾರಂಭವು ನಗರದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಕ್ಷವು ಆಯೋಜಿಸಿತ್ತು.

ಈ ಕಾರ್ಯಮದಲ್ಲಿ ಉತ್ತರ ಪ್ರಾಂತ ಸಹ ಕಾರ್ಯನಿರ್ವಾಹಕ ಪ್ರಸನ್ನವರು ಮಾತನಾಡಿ ಪಾಕಿಸ್ತಾನವು ಭಾರತದ ಆಂತರಿಕ ಭದ್ರತೆಗೆ ಪದೇ ಪದೇ ಧಕ್ಕೆ ಉಂಟು ಮಾಡುತ್ತಿತ್ತು. ಭಯೋತ್ಪಾದನೆ ಬೆಂಬಲಿಸಿ ಜಮ್ಮು-ಕಾಶ್ಮೀರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಮಾಡಿ, ಪಠಾಣ್‌ ಕೋಟ್‌, ಉರಿ ಸೆಕ್ಟರ್‌ನ ಸೈನಿಕರ ನೆಲೆ ಮೇಲೆ ದಾಳಿ ಮಾಡಿತ್ತು. ಆದರೆ, ಸಿಡಿದೆದ್ಧ ಭಾರತೀಯ ಸೇನೆ ಮತ್ತು ವೀರ ಯೋಧರು ಆಕ್ರಮಿತ ಕಾಶ್ಮೀರದ ಎಲ್‌ಒಸಿ ಯಲ್ಲಿ ಹಠಾತ್‌ ಸರ್ಜಿಕಲ್‌ ಆಪರೇಷನ್‌ನಿಂದ ಉಗ್ರರ ಹಡಗು ತಾಣಗಳ ಮೇಲೆ ದಾಳಿ ನಡೆಸಿ 30-40 ಉಗ್ರರನ್ನು ಬಲಿ ತೆಗೆದುಕೊಂಡಿರುವುದನ್ನು ಪ್ರಶಂಶಿಸಿದರು.

ಸಂಸದರಾದ ಕರಡಿ ಸಂಗಣ್ಣ ಮಾತನಾಡಿ ಭಾರತದ ಸಾರ್ವಭೌಮತ್ವ, ಏಕತೆ, ಅಖಂಡತೆ, ಶಾಂತಿ, ಅಭಿವೃದ್ಧಿಗೆ ಭಂಗ ತರುತ್ತಿದ್ದ ಪಾಕಿಸ್ತಾನದ ಕಾರ್ಯವೈಖರಿ ವಿರುದ್ಧ ಸಂಘಟಿತ ಭಾರತೀಯ ಸೇನೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಚಾಣಾಕ್ಷತೆ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದರ ಪರಿಣಾಮವಾಗಿ ಇಂದು ಸರ್ಜಿಕಲ್ ಸ್ಟ್ರೈಕ್ ೨ನೇ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಈ ಮಹತ್ತರ ಕಾರ್ಯಾಚರಣೆಯು ಹಿತಿಹಾಸದಲ್ಲಿ ಬರೆದಿಡುವ ಪುಟಗಳಾಗಿವೆ. ಅಮೇರಿಕಾ ಸೇರಿದಂತೆ ವಿಶ್ವವೇದಿಕೆಯಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದ್ದು ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆಯ ಸಂದೇಶವಾಗಿದೆ ಎಂದರು.

ಶಾಸಕ ಹಾಲಪ್ಪ ಆಚಾರ ಮಾತನಾಡಿ ಭಾರತೀಯ ಸೈನಿಕರ ದಿಟ್ಟ ನಿಲುವು, ದೇಶದ ಜನರ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ. ಪ್ರಧಾನಿ ನರೇಂದ್ರಮೋದಿ ಅವರು ಎಲ್ಲಾ ರಾಜಕೀಯ ಪಕ್ಷಗಳು, ಪ್ರಮುಖರು ಹಾಗೂ ವಿಶ್ವವ್ಯಾಪ್ತಿಯ ಪ್ರಮುಖ ದೇಶಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
ಶಾಸಕ ಪರಣ್ಣ ಮುನವಳ್ಳಿ ಮಾತನಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಮಹಾದೇವ ದೇವರು ಸಾನಿಧ್ಯವಹಿಸಿದ್ದರು.
ಕಾರ್ಯಕ್ರಮದಲ್ಲಿ ೩೦ ಜನ ಮಾಜಿ ಸೈನಿಕರು ಹುತಾತ್ಮ ಯೋಧರ ಕುಟುಂಬದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಬಿ.ಆರ್ ಬೆಳ್ಳಟ್ಟಿ, ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ರಾಷ್ಟ್ರೀಯ ಪರಿಷತ ಸದಸ್ಯ ಸಿ.ವಿ ಚಂದ್ರಶೇಖರ, ಪಕ್ಷದ ಮುಖಂಡರಾದ ಚಂದ್ರಶೇಖರಗೌಡ ಪಾಟೀಲ, ರಾಜು ಬಾಕಳೆ, ಹಾಲೇಶ ಕಂದಾರಿ, ವಿರುಪಾಕ್ಷಪ್ಪಯ್ಯ ಗದುಗಿನಮಠ ನೀಲಕಂಠಯ್ಯ ಹಿರೇಮಠ, ನವೀನ ಗುಳಗಣ್ಣವರ, ಹೇಮಲತಾ ನಾಯಕ, ಶೋಭಾ ನಗರಿ, ವಾಣೀಶ್ರೀ ಮಠದ, ವೀಣಾ ಬನ್ನಿಗೊಳ್ಳ, ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ ಹಾಗೂ ಅನೇಕರು ಭಾಗವಹಿಸಿದ್ದರು.

Please follow and like us:
error