ಸರ್ಕಾರದ ಸೌವಲತ್ತುಗಳ ಸದ್ಬಳಕೆಯಾಗಲಿ-ಶಾಸಕರ ಕೆ.ರಾಘವೇಂದ್ರ ಹಿಟ್ನಾಳ


ಕೊಪ್ಪಳ,೦೧,ಗುಡದಳ್ಳಿ ಗ್ರಾಮದ ಪ್ರೌಡ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮಾಡಿ ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಹಿಂದಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಯಾವುದೇ ವರ್ಗದ ವಿಧ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂದು ವಿಧ್ಯಾಶ್ರೀ ಯೋಜನೆ ಜಾರಿಗೆ ತಂದರು. ಹೆಣ್ಣಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಪದವಿ ಶಿಕ್ಷನದ ವರೆಗೂ ಉಚಿತ ಶಿಕ್ಷಣ ಯೋಜನೆ ಜಾರಿಗೊಳಿಸಿದರು. ಎಸ್.ಸಿ.ಎಸ್.ಟಿ ವಿಧ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ, ಹಾಗೂ ಎಲ್ಲಾವರ್ಗದ ವಿಧ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಿ ಯಾವ ವರ್ಗದ ಜನರು ಶಿಕ್ಷಣದಿಂದ ವಂಚಿತರಾಗಬಾರದೆಂದು ಶಿಕ್ಷಣದಲ್ಲಿ ಅನೇಕ ಕ್ರಾಂತಿಕಾರಿ ಬದಲಾವಣೆ ತಂದಿದ್ದು ಸಿದ್ದರಾಮಯ್ಯನವರ ಸರ್ಕಾರದ ಕೊಡುಗೆಗಳ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ, ಗ್ರಾ.ಪಂ.ಅಧ್ಯಕ್ಷ ಅಂದಿಗಲ್ಲಪ್ಪ ಗುಡದಳ್ಳಿ ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಜಿ.ಪಂ.ಸದಸ್ಯ ಗೂಳಪ್ಪ ಹಲಗೇರಿ, ಮುಖಂಡರುಗಳಾದ ದರ್ಮರಾಜ ಕಲಾಲ್, ನಾಗರಾಜ ಪಟವಾರಿ, ದೊಡ್ಡಬಸಪ್ಪ, ರಮೇಶ ಮೇಟಿ, ಉಮೇಶ ಗುಡದಳ್ಳಿ, ರಮೇಶ ಹೋಳೆಯಾಚಿನ್, ನಗರಸಭೆ ಸದಸ್ಯ ಅಕ್ಬರಪಾಷಾ ಪಲ್ಟನ ಉಪಸ್ಥಿತರಿದ್ದರು.

Please follow and like us:
error