ಸರ್ಕಾರದ ಸೌಲಭ್ಯ ಸದ್ಬಳಕೆಯಾಗಿದೇ- ರಾಘವೇಂದ್ರ ಹಿಟ್ನಾಳ


ಕೊಪ್ಪಳ:೧೬,ಹಿಟ್ನಾಳ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಾದ ಹಿಟ್ನಾಳ,ಕಂಪಸಾಗರ,ಹುಲಿಗಿ, ಮುನಿರಾಬಾದ್ ಆರ್.ಎಸ್,ಮುನಿರಾಬಾದ್,ಹೊಸಳ್ಳಿ ಗ್ರಾಮಗಳಲ್ಲಿ ವಿವಿಧ ಯೋಜನೆ ಅಡಿಯಲ್ಲಿ ಅಂದಾಜು ಮೊತ್ತ ರೂ.೩ ಕೋಟಿಯ ಶಾಲಾ ಕಟ್ಟಡ ದೇವಸ್ಥಾನದ ಜಿರ್ಣೋದ್ಧಾರ ಅಂಗನವಾಡಿ ಕಟ್ಟಡ ಹಾಗೂ ಸಿಸಿ ರಸ್ತೆಗಳ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಬಳಿಕ ಮಾತನಾಡಿದ ಶಾಸಕ- ಸಂಸದೀಯ ಕಾರ್ಯದರ್ಶಿ ಕೆ.ರಾಘವೇಂದ್ರ ಹಿಟ್ನಾಳರವರು ಸರ್ಕಾರವು ಪ್ರತಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಹೆಚ್ಚು ಅನುದಾನ ಕೋಡುತ್ತಿದ್ದು, ಇದರ ಜನತೆ ಸದ್ಬಳಕೆ ಮಾಡಿಕೊಳ್ಳಬೇಕು. ಈಗಾಗಲೇ ಕೊಪ್ಪಳದ ಬ್ಲೆಡ್ ಬ್ಯಾಂಕಿಗೆ ರೂ.೨೦ ಲಕ್ಷ ಅನುದಾನ ಇದೇ ೨೩.೦೨.೨೦೧೯ರಂದು ಐ-ಬ್ಯಾಂಕ್‌ಗೆ ರೂ.೧೦ ಲಕ್ಷ ಅನುದಾನ ಮಂಜೂರುಮಾಡಿದ್ದು, ಉಚಿತವಾಗಿ ಕಣ್ಣು ತಪಾಸಣೆ ಮಾಡಲಾಗುವುದು.ಸೂಕ್ತ ವಿದ್ದಲ್ಲಿ ರೋಗಿಗಳಿಗೆ ಕಣ್ಣಿನ ಆಪರೇಷನ್ ಮಾಡಲಾಗುವುದು. ಮುಂದಿನವಾರದಲ್ಲಿ ಕೊಪ್ಪಳ ನಗರದಲ್ಲಿ ರೂ.೧೦೦ ಕೋಟಿಯ ೪೫೦ ಹಾಸಿಗೆಯ ಆಸ್ಪತ್ರೆಗೆ ಶಂಕುಸ್ಥಾಪನೆ ನೇರವೇರಿಸಲಾಗುವುದು. ಇಲ್ಲಯೇ ವೈದ್ಯಕೀಯ ಕಾಲೇಜು ಇರುವುದರಿಂದ ೧೦೦೦ ಸಾವಿರ ಬೆಡ್ ಆಸ್ಪತ್ರೆ ನಿರ್ಮಾಣ ಮಾಡುವ ಗುರಿ ನಮ್ಮದಾಗಿದೆ. ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಿ ಸರ್ಕಾರವು ಪ್ರತಿಯೊಬ್ಬ ಕಾರ್ಮಿಕರಿಗಾಗಿ ಕಲ್ಯಾಣ ಮಂಡಳಿ ರಚಿಸಿದ್ದು, ಅವರ ಮಕ್ಕಳಿಗೆ ಉಚಿತವಾಗಿ ವಿಧ್ಯಾಭ್ಯಾಸ ಶಿಕ್ಷಣ ಕೋಡಿಸುವುದು ಸ್ನಾತಕೋತ್ತರ ಪದವಿಗೆ ರೂ.೨೦ ಸಾವಿರ ಹಾಗೂ ಇಂಜೀನಿಯರಿಂಗ್ ಹಾಗೂ ವೈದ್ಯಕೀಯ ತರಬೆತಿಗಳನ್ನು ಮಾಡುವ ವಿಧ್ಯಾರ್ಥಿಗಳಿಗೆ ಪ್ರತಿವರ್ಷ ೩೦ ಸಾವಿರ ಶೈಕ್ಷಣಿಕ ಸಹಾಯದನ ಕೊಡಲಾಗುವುದು.ಕಾರ್ಮಿಕರು ಕೆಲಸದವೇಳೆ ಅಪಘಾತ ಸಂಬವಿಸಿದ್ದಲ್ಲಿ ರೂ.೫ ಲಕ್ಷ ಪರಿಹಾರ ಧನವನ್ನಿ ನೀಡಲಾಗುವುದು. ಹೆಚ್.ಕೆ.ಆರ್.ಡಿ.ಬಿ.ಯೋಜನೆ ಅಡಿಯಲ್ಲಿ ಈ ವರ್ಷದಲ್ಲಿ ೪೮ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿ ಬರದಿಂದ ಸಾಗಿದ್ದು, ಶಿಕ್ಷಣ ಅಧಿಕಾರಿಗಳು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟು ಬರುವ ಎಸ್.ಎಸ್.ಎಲ್.ಸಿ. ಪಲಿತಾಂಶವು ರಾಜ್ಯದಲ್ಲಿ ಜಿಲ್ಲಾವಾರುವಾಗಿ ಗಣನಿಯವಾಗಿ ಏರಿಕೆಯಾಗಬೇಕೆಂದು ಶಿಕ್ಷಕರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ.ಜಿ.ಪಂ.ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ,ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಹಿಟ್ನಾಳ ಗ್ರಾ.ಪಂ.ಅಧ್ಯಕ್ಷ ದರ್ಮರಾಜ ಕಲಾಲ್, ಹುಲಿ ಗ್ರಾ.ಪಂ.ಅಧ್ಯಕ್ಷ ರೇಣುಕಮ್ಮ ನಾಯಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭುಮರೆಡ್ಡಿ, ಮುಖಂಡರುಗಳಾದ ಟಿ.ಜನಾರ್ಧನ ಹುಲಗಿ, ವಿಶ್ವನಾಥ ರಾಜು, ಕೆ.ರಮೇಶ, ವೆಂಕಟೇಶ ಕಂಪಸಾಗರ, ಮೂರ್ತೆಪ್ಪ, ವೆಂಕಟೇಶ ಅಗಳಕೇರಾ, ಜಿಯಾಖಾನ್, ವೀರಭದ್ರಸ್ವಾಮಿ, ಬಾಬುಗೌಡ ಪಾಟೀಲ, ಪ್ರಭುರಾಜ ಪಾಟೀಲ, ವೀರಣ್ಣ ಹುಲಗಿ, ಜಗನ್ನಾಥ ಹುಲಗಿ, ಕಾಜಾವಲಿ ಜೌಳಿ, ವಿಜಯ ಹುಲಿಗಿ, ವಿಜಯಕುಮಾರ ಪಾಟೀಲ, ಅಶೋಕ ಇಳಿಗೆರ, ನಗರಸಭೆ ಸದಸ್ಯ ಅಕ್ಬರಪಾಷಾ ಪಲ್ಟನ ಉಪಸ್ಥಿತರಿದ್ದರು.