ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಿ – ಪೂರ್ಣಿಮಾ


ಕೊಪ್ಪಳ: ಸರ್ಕಾರವು ಶಿಕ್ಷಣಕ್ಕೆ ಹೆಚ್ಚಿನ ಸೌಲಭ್ಯಗಳನ್ನು ನೀಡಿದ್ದು, ಮಕ್ಕಳ ಶಿಕ್ಷಣ, ಆರೋಗ್ಯ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಿದೆ. ಪಾಲಕರು ಇದರ ಸದುಪಯೋಗ ಪಡಿಸಿಕೊಳ್ಳಲು ಸಿಆರ್‌ಪಿ ಪೂರ್ಣಿಮಾ ಸಲಹೆ ನೀಡಿದರು.
ನಗರದ ಅನುದಾನಿತ ಕುವೆಂಪು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೬ ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಜಾ ವಹಿಸಿದ್ದರು. ೧೯೯೨ ನೇ ಸಾಲಿನಿಂದ ಶಾಲೆಯ ಮಕ್ಕಳು ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಶಾಲೆಯು ಸರಕಾರದ ಅನುದಾನಕ್ಕೆ ಒಳಪಟ್ಟಿದ್ದು, ಶಾಲೆಯ ಸರ್ಕಾರದ ಅನುದಾನಕ್ಕೆ ಒಳಪಟ್ಟಿದ್ದು ಸಂತದ ವಿಷಯವಾಗಿದೆ. ನಗರದ ಗಡಿಯಾರ ಕಂಬದ ಸ್ನೇಹ ಬಳಗದ ಅಧ್ಯಕ್ಷ ವಾಸುದೇವ ಮಾತನಾಡಿ, ತಾವು ಕಲಿತ ಶಿಕ್ಷಣ ಹಾಗೂ ಪ್ರಚಲಿತ ಶಿಕ್ಷಣದ ವ್ಯತ್ಯಾಸವನ್ನು ಮಕ್ಕಳಿಗೆ ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ರಾಮಣ್ಣ ಹಿರೇಮನಿ, ನಾಗರತ್ನ ಘಂಟಿ, ಪೂರ್ಣೀಮಾ ಕುಕನೂರ, ಗೀತಾ ಮಾರ್ಕಂಡೇಶ್ವರ, ಕವಿತಾ ಸಂಕನೂರ ಸೇರಿದಂತೆ ಇತರರು ಇದ್ದರು.
ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

Please follow and like us:
error