ಸರಸ್ವತಿ ವಿದ್ಯಾಮಂದಿರ ಪ್ರೌಢಶಾಲೆ ಗೆ ೧೦೦ % ಫಲಿತಾಂಶ


ಕೊಪ್ಪಳ: ನಗರದ ಬಹದ್ದೂರಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರೌಢಶಾಲೆಯ ೨೦೧೮ ರ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ.೧೦೦ ರಷ್ಟು ಬಂದಿದ್ದು, ಕು. ಸ್ವಾತಿ ಶಂಕರಪ್ಪ ಜೆಲ್ಲಿ ೬೨೫/೫೯೩ ಅಂಕಗಳಿಸಿ ಶೇ.೯೪.೮೮ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ, ಕು. ರೇಣುಕಾ ಯಲ್ಲಪ್ಪ ಚೌಡ್ಕಿ ಮತ್ತು ಗೌತಮ ಹೇಮಂತ ಬೇಲೂರ ಈ ಇಬ್ಬರು ವಿದ್ಯಾರ್ಥಿಗಳು ೬೨೫/೫೬೯ ಅಂಕ ಪಡೆದು ಶೇ.೯೧.೦೪ ಪಡೆದು ಶಾಲೆಗೆ ದ್ವೀತಿಯ ಸ್ಥಾನ ಗಳಿಸಿದ್ದಾಳೆ.
ಪರೀಕ್ಷೆಗೆ ಹಾಜರಾದ ಒಟ್ಟು ೨೫ ವಿದ್ಯಾರ್ಥಿಗಳಲ್ಲಿ ರ್‍ಯಾಂಕ ೩, ಡಿಸ್ಟಿಂಗಷನ್ -೨, ಪ್ರಥಮ ಸ್ಥಾನ -೧೮, ದ್ವೀತಿಯ ಸ್ಥಾನ -೨ ಬಂದಿದ್ದು, ಈ ಎಲ್ಲಾ ವಿದ್ಯಾರ್ಥಿಗಳ ಉತ್ತಮ ಫಲಿತಾಂಶ ಪಡೆದಿದ್ದಕ್ಕೆ ಮತ್ತು ಶಾಲೆಯ ಫಲಿತಾಂಶ ಶೇ. ೧೦೦ ರಷ್ಟು ಮಾಡಲು ಶ್ರಮಿಸಿದ ಶಿಕ್ಷಕ ವೃಂದ್ದಕ್ಕೆ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯೋಪಾಧ್ಯಾಯರಾದ ರೇಣುಕಾ ಅತ್ತನೂರ ಅಭಿನಂದಿಸಿದ್ದಾರೆ.