ಸರಕಾರಿ ಪದವಿಪೂರ್ವ ಕಾಲೇಜಿಗೆ ಗೊಂಡಬಾಳ ನೇಮಕ

ಕೊಪ್ಪಳ, ಜೂ. ೦೧: ಕೊಪ್ಪಳ ನಗರದ ಬಾಲಕರ ಸರಕಾರಿ ಪದವಿಪೂರ್ವ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿಗೆ ಮಂಜುನಾಥ ಜಿ. ಗೊಂಡಬಾಳ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಈ ಕುರಿತು ಆದೇಶ ನೀಡಿರುವ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ರಾಘವೇಂದ್ರ ಹಿಟ್ನಾಳ ಅವರು, ಸ್ನಾತಕೋತ್ತರ ಪದವೀಧರ ಆಗಿರುವ ಮಂಜುನಾಥರಿಂದ ಕಾಲೇಜಿನ ಸಮಗ್ರ ಅಭಿವೃದ್ಧಿಗೆ ಪೂರಕ ಕೆಲಸ ಮಾಡುವ ಭರವಸೆ ಇದ್ದು, ಅವರ ಅವಧಿಯಲ್ಲಿ ಕಾಲೇಜಿನ ಶೈಕ್ಷಣಿಕ ಅಭಿವೃದ್ದಿ ಮತ್ತು ಸುಧಾರಣೆ ಕಾಣಲಿ ಎಂದು ಆಶಿಸಿದ್ದಾರೆ.