ಸರಕಾರದ ಸೌಲಭ್ಯಗಳ ಸದ್ಬಳಕೆಯಾಗಲಿ- ಶಾಸಕ ಕೆ ರಾಘವೇಂದ್ರ ಹಿಟ್ನಾಳ

ಕೊಪ್ಪಳ 08- ಹಿರೇಸಿಂದೋಗಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ ಹೊರತಟ್ನಾಳ, ಕೋಳೂರು, ಕಾಟ್ರಳ್ಳಿ, ಚಿಕ್ಕಸಿಂದೋಗಿ, ಹಿರೇಸಿಂದೋಗಿ, ಗುನ್ನಳ್ಳಿ, ಹಾಗೂ ಮಂಗಳಾಪುರ ಗ್ರಾಮಗಳಲ್ಲಿ ವಿವಿಧ ಯೋಜನೆ ಅಡಿಯಲ್ಲಿ ಅಂದಾಜು ಮೊತ್ತ ರೂ 1 ಕೋಟಿಯ ಸಿ.ಸಿ ರಸ್ತೆ ಚರಂಡಿ ಶಾಲಾಕೊಠಡಿ ಮತ್ತು ಅನಿಲ ಭಾಗ್ಯ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ವಿತರಣೆ ಮಾಡಿ ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಹಿಂದಿನ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಅನೇಕ ಜನಪರ ಯೋಜನೆಗಳು ಜಾರಿಗೊಂಡಿದ್ದು ಗ್ರಾಮ ವಿಕಾಸನ ಯೋಜನೆ ಅಡಿಯಲ್ಲಿ ಪ್ರತಿ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕ್ಷೇತ್ರಕ್ಕೆ ಹೆಚ್ಚಿನ ಅನುಧಾನ ಬಿಡುಗಡೆಯಾಗಿದ್ದು ತ್ವರಿತಗತಿಯಲ್ಲಿ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ ಈಗಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರಾಜ್ಯದ ರೈತರ ಸಾಲಮನ್ನಾಕ್ಕೆ ಸೂಮಾರು ರೂ.39 ಸಾವಿರ ಕೋಟಿ ಅನುಧಾನ ಮಂಜೂರು ಮಾಡಲಾಗಿದ್ದು ದೇಶದಲ್ಲಿಯೇ ರೈತರ ಸಾಲ ಮನ್ನಾ ಮಾಡಿದ ಹೆಗ್ಗಳಿಕೆ ಸಮ್ಮಿಶ್ರ ಸರ್ಕಾರಕ್ಕೆ ಸಲ್ಲುತ್ತದೆ 5 ವರ್ಷಗಳ ಸತತವಾಗಿ ದೇಶದ ಜನತೆಗೆ ಸುಳ್ಳು ಆಸ್ವಾಸನೆಗಳನ್ನು ನೀಡುತ್ತಾ ಬಂದಿರುವ ಕೇಂದ್ರದ ಮೋದಿ ಸರ್ಕಾರಕ್ಕೆ ಪಂಚರಾಜ್ಯದ ಚುನಾವಣೆ ಸಮೀಕ್ಷೆಗಳು ತಕ್ಕ ಉತ್ತರ ನೀಡಲಿವೆ ಈ ದೇಶದ ಜನತೆ ಮತ್ತೊಮ್ಮೆ ಅಭಿವೃದ್ದಿ ಪರ ಹಾಗೂ ಜನಸಾಮನ್ಯರ ಕಾಂಗ್ರೆಸ್ ಸರ್ಕಾರಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿರುವುದು ಬರುವ 2019ರ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷ ಬಾಲಚಂದ್ರನ್ ಮಾಜಿ.ಜಿ.ಪಂ ಅಧ್ಯಕ್ಷ ಎಸ್.ಬಿ ನಾಗರಹಳ್ಳಿ ಮಾಜಿ ಕೂಡಾ ಅಧ್ಯಕ್ಷ ಜುಲ್ಲು ಖಾದ್ರಿ ಎ.ಪಿ.ಎಮ್.ಸಿ ಅಧ್ಯಕ್ಷ ವೆಂಕನಗೌಡ್ರ ಹಿರೇಗೌಡ್ರ ತಾ.ಪಂ ಸದಸ್ಯ ನಿಂಗಪ್ಪ ಯತ್ನಟ್ಟಿ ಮಾಜಿ.ಎ.ಪಿ.ಎಮ್.ಸಿ ಅಧ್ಯಕ್ಷ ಹನುಮರೆಡ್ಡಿ ಹಂಗನಕಟ್ಟಿ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಯಂಕಣ್ಣ ಕೊಳ್ಳಿ ನಗರ ಸಭಾ ಸದಸ್ಯ ಅಕ್ಬರ್ ಪಾಷಾ ಪಲ್ಟನ್ ಮುಖಂಡರುಗಳಾದ ಗಾಳೆಪ್ಪ ಪೂಜಾರ, ಕೃಷ್ಣರೆಡ್ಡಿ ಗಲ್ಬಿ, ಕೇಶವ ರೆಡ್ಡಿ ಮಾದನೂರು, ಗುರುಬಸವರಾಜ ಹಳ್ಳಿಕೇರಿ, ಬೀಮನಗೌಡ್ರ ಮಾಲೀಪಾಟೀಲ, ಅಡಿವೇಪ್ಪ ರಾಟಿ, ಭೀಮಣ್ಣ ಬಂಡಿ, ಶರಣಪ್ಪ ಹೊಸಳ್ಳಿ, ಹರೀಶ ರೆಡ್ಡಿ, ಸಿದ್ದರೆಡ್ಡಿ, ರೇವಯ್ಯ ಮಠದ್, ಅಜ್ಜಪ್ಪಗೌಡ ಪಾಟೀಲ್ ಇನ್ನು ಅನೇಕರು ಉಪಸ್ಥಿತರಿದ್ದರು

Please follow and like us:
error