ಸರಕಾರದ ಆದೇಶ ಪಾಲಿಸಿ, ಸಾರ್ವಜನಿಕರೂ ಕೈಜೋಡಿಸಿ- ಡಿಸಿಎಂ ಲಕ್ಷ್ಮಣ ಸವದಿ

ಕೋರೋನಾ ವಿರುದ್ದ ಹೋರಾಟಕ್ಕೆ ನಿರ್ಲಕ್ಷ್ಯ ಬೇಡ
ಕೊಪ್ಪಳ : ಕೋವಿಡ್_೧೯ ಪರಿಶೀಲ ಸಭೆಯನ್ನು ಇಂದು ಶಾಸಕರ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಿದ್ದೇನೆ ಈವರೆಗೆ ಕೊಪ್ಪಳದಲ್ಲಿ ಪಾಸಿಟಿವ್ ಬಂದಿಲ್ಲ ಬಳ್ಳಾರಿಯಲ್ಲಿ ಆರು ಜನರಿಗೆ ಗದಗಿನಲ್ಲಿ ಒಬ್ಬರಿಗೆ ಬರುವ ಸಾಧ್ಯತೆ ಇದೆ
ಇನ್ನು ಸಾಮಾಜಿಕ ಅಂತರವನ್ನು ಕಾಪಾಡುವ ಅಗತ್ಯವಿದೆ
ಗ್ರಾಮೀಣ ಹಾಗೂ ಪಟ್ಟಣದ ಜನರಿಗೆ ವಿನಂತಿಸುತ್ತೇನೆ ಜನರು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಆದೇಶದಂತೆ ಕೈಜೋಡಿಸಬೇಕು
ಭಾರತವೇ ಲಾಕ್ ಡೌನ್ ಆಗಿದೆ ಇನ್ನು ಸಾರ್ವಜನಿಕರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ನಿರ್ಲಕ್ಷ್ಯವಹಿಸಿದ್ರೆ ಮುಂದಿನ ದಿನಗಳಲ್ಲಿ ಕಂಟಕ ಎದರಾಗಬಹುದು
ಕಾರ್ಮಿಕರಿಗಾಗಿ ಹಾಗೂ ಬಡವರಿಗಾಗಿ ಮೂರು ತಿಂಗಳಕಾಲ ಯೋಜನೆಗಳನ್ನು ರೂಪಿಸಲಾಗಿದೆ.
ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರಿಗೆ ಸಹಕರಿಸಿ, ಹಲ್ಲೆ ಮಾಡಬೇಡಿ ಕೊಪ್ಪಳದಲ್ಲಿ ಈವರೆಗೆ ಅಂತಹ ಘಟನೆಗಳು ನಡೆದಿಲ್ಲ
ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ, ಇನ್ನು ಜಾಗೃತರಾಗಬೇಕಾಗಿದೆ
ಕೊರೊನಾಕ್ಕಾಗಿ ಪ್ರತ್ಯೇಕ ಆಸ್ಪತ್ರೆ ಯನ್ನು ಗುರುತಿಸಿದ್ದೇವೆ. ಅದಕ್ಕೆ ಮೂಲಭೂತ ಸೌಕರ್ಯಗಳನ್ನು ನೀಡಲಾಗುತ್ತದೆ
ಹೊರ ರಾಜ್ಯದಿಂದ ಬಂದ ನಿರಾಶ್ರಿತರಿದ್ದಾರೆ. ಅವರಿಗೆ ಆಶ್ರಯ ನೀಡಲಾಗಿದೆ
೧೭೪ ನಿರಾಶ್ರಿತರಿಗೆ ಆಶ್ರಯ, ಉಪಹಾರ, ಊಟ, ಆರೋಗ್ಯ ಸೌಲಭ್ಯಗಳನ್ನು ನೀಡಲಾಗಿದೆ
ನ್ಯಾಯಾಬೆಲೆ ಅಂಗಡಿಯನ್ನು ಬೆಳಿಗ್ಗೆಯಿಂದ ತೆರೆಯಲು ಹೇಳಲಾಗಿದೆ

ರಾಜ್ಯ ಸರ್ಕಾರ ಐದು ಕೆಜಿ ಅಕ್ಕಿಯನ್ನು ನೀಡಲಾಗುತ್ತಿದೆ
ಅಸಂಘಟಿತ ಕಾರ್ಮಿಕರಿಗೆ ವಿಶೇಷವಾಗಿ ನೀಡಲಾಗುತ್ತಿದೆ
ಸ್ಲಂ ಬಡವಾಣೆಗಳಲ್ಲಿ ಒಂದು ಲೀಟರ್ ಹಾಲು ನೀಡಲಾಗುತ್ತಿದೆ
ನಿರ್ಗತಿಕರಿಗೆ, ಭಿಕ್ಷುಕರಿಗೆ ಉಚಿತವಾಗಿ ಊಟ ನೀಡಲಾಗುತ್ತಿದೆ.
ಖಾಸಗಿ ಆಸ್ಪತ್ರೆ
ವೈದ್ಯರನ್ನು ವಿನಂತಿ ಮಾಡಿದ್ದೇವೆ, ಅವರು ಬಡವರ ಸೇವೆಯನ್ನು ಮಾಡಬೇಕು ಅಂತಾ ಕೇಳಿಕೊಳ್ಳುತ್ತೇನೆ
ಕಿರಾಣಿ ಅಂಗಡಿಗೆಗಳಲ್ಲಿ ಅಗತ್ಯ ವಸ್ತುಗಳ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದಾರೆ ಎನ್ನೊ ಆರೋಪ
ದೂರುಗಳು ಬಂದಿವೆ ಅದು ಕಂಡು ಬಂದಲ್ಲಿ ನಿರ್ದಾಕ್ಷ್ಯಣವಾಗಿ ಕ್ರಮಕೈಗೊಳ್ಳಲಾಗುವುದು ಎಂದು
ಕೊಪ್ಪಳದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು. ಅವರು ಜಿಲ್ಲಾಧಿಕಾರಿ ಕಚೇರಿಯ ಲ್ಲಿ ನಡೆದ ಸಭೆಯ ನಂತರ ಮಾತನಾಡಿದರು. ಸಭೆಯಲ್ಲಿ ಜಿಲ್ಲೆಯ ಸಮಸ್ತ ಶಾಸಕರು, ಸಂಸದ ಕರಡಿ ಸಂಗಣ್ಣ , ಜಿಲ್ಲಾಧಿಕಾರಿ ಎಸ್ಪಿ ಸೇರಿದಂತೆ ಇತರ ಅಧಿಕಾರಿಗಳು ಭಾಗವಹಿಸಿದ್ದರು
Please follow and like us:
error