ಸಮಾನ ವೇತನ , ಸೇವಾ ಸಕ್ರಮಕ್ಕಾಗಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

ಸೇವಾ ಭದ್ರತೆ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ಆದೇಶದನ್ವಯ ಸೇವಾ ಸಕ್ರಮಕ್ಕಾಗಿ ಸರಕಾರ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಪ್ರತಿಭಟನೆ  
ರಾಜ್ಯಾದದ್ಯಾಂತ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು ೨೦ ವರ್ಷಗಳಿಗಿಂತಲೂ ಅಧಿಕ ದಿನಗಳಿಂದ ಪಾಠ ಪ್ರವಚನಗಳನ್ನು ಮಾಡುತ್ತ ಶೈಕ್ಷಣಿಕ ಅರ್ಹತೆಗಳು ಸೇವಾನುಭವ ಇದ್ದರೂ ಸೇವಾ ಭದ್ರತೆ ಇಲ್ಲದೇ ಜೀವನವಿಡಿ ಜೀತದಾಳುಗಳಂತೆ ಕೆಲಸ ಮಾಡುತ್ತಿರುವರು. ಸೇವಾ ಭದ್ರತೆ ಸೇವಾ ಸಕ್ರಮಮತಿಗಾಗಿ ಅನೇP ವರ್ಷಗಳಿಂದಲೂ ಪ್ರತಿಭಟನೆ ತರಗತಿ ಬಹಿಷ್ಕಾರ ಅಹೋರಾತ್ರಿ ಧರಣಿ, ಉಪವಾಸ ಸತ್ಯಾಗ್ರಹ, ವಿವಿಧ ಹಂತಗಳ ಹೊರಾಟಗಳ ಮೂಲಕ ಸರಕಾರಕ್ಕೆ ಮನವಿ ತಿಳಿಸಿದಾಗ್ಯೂ ಸರಕಾರ ಸ್ಪಂದಿಸುತ್ತಿಲ್ಲ.
ವಿವಿಧ ಇಲಾಖೆಗಳಲ್ಲಿ ಅಂದರೆ ಅರೆಕಾಲಿಕ ಉಪನ್ಯಾಸಕರು,ಜೆ.ಒ.ಸಿ. ಬೋಧಕರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಶಿಕ್ಷಕರು, ಹೊರಗುತ್ತಿಗೆ ಅತಿಥಿ ಬೋಧಕರು, ದಿನಗೂಲಿ ನೌಕರರು ಪೌರಕಾರ್ಮಿಕರು, ಗುತ್ತಿಗೆ ವ್ಯೆದ್ಯರು, ಗ್ರಾಮೀಣ ಅಭಿವೃದ್ಧಿ ಇಲಾಖೆ ನೌಕಕರು ಮುಂತಾದ ಇಲಾಖೆಗಳಲ್ಲಿ ಸೇವಾ ಭದ್ರತೆ, ಸೇವಾ ಜೇಷ್ಠತೆಗಳ ಆಧಾರದ ಮೇಲೆ ಸರಕಾರ ಖಾಯಂಗೂಳಿಸಿದ್ದು, ಆದೇ ರೀತಿ ಅತಿಥಿ ಉಪನ್ಯಾಸಕರ ಸೇವೆಯನ್ನು ಸರಕಾರ ಸಕ್ರಮ ಮಾಡುತ್ತಿಲ್ಲವೇಕೆ? ಅನೇಕ ವಿದ್ಯಾರ್ಥಿಗಳ ಭವಿಷ್ಯವನ್ನು ಬದಲಾಯಿಸುವ ಅತಿಥಿ ಉಪನ್ಯಾಸಕರ ಭವಿಷ್ಯವು ಸಂಪೂರ್ಣ ಅಂತಂತ್ರ ಸ್ಥಿತಿಯಲ್ಲಿದೆ. ಇತ್ತೀಚಿನ ಸುಪ್ರಿಂಕೋರ್ಟ ಆದೇಶನ್ವಯ ಸಮಾನ ಕೆಲಸಕ್ಕೆ ಸಮಾನ ವೇತನ ತಾತ್ಕಾಲಿಕ ನೆಲೆಯಿಡಿ ಅಥಿತಿ ಉಪನ್ಯಾಸಕರು ಬರುತ್ತಿದ್ದು ಅವರಿಗೆ ಸೇವಾ ಭದ್ರತೆಯೊಂದಿಗೆ ಸೇವಾ ಸಕ್ರಮಾತಿ ಮಾಡಲು ಅವಕಾಶವಿದೆ ಎಂದು ಕಾನೂನು ಹೇಳುವುದು.ಕಾರಣ ಸರಕಾರ ಹಣಕಾಸಿನ ಹೊರೆ ಇದೆ ಎಂಬ ನೆಪದಿಂದ ಇದನ್ನು ಜಾರಿಗೆ ತಂದಿಲ್ಲ. ಕಾರಣ ಕೇವಲ ಸರಕಾರದ ಹಣಕಾಸಿನ ತೊಂದರೆಯನ್ನು ಹೋಗಲಾಡಿಸಲು ಅತಿಥಿ ಉಪನ್ಯಾಸಕರ ಸೇವಾ ಜೇಷ್ಠತೆ ಬಲಿಕೊಡುವಂತಾಗಬಾರದು. ಅತಿಥಿ ಉಪನ್ಯಾಸಕರ ಸೇವಾ ಜೇಷ್ಠತೆ, ಶ್ಯೆಕ್ಷಣಿಕ ಅರ್ಹತೆ ಇದ್ದರೂ ಅವರಿಗೆ ಸೇವಾ ಭದ್ರತೆ ಇಲ್ಲಾ ದಿರ್ಘಾವಧಿ ನೇಮಕಾತಿಯಿಂದ ವಯೋಮಿತಿ ಮೀರಿ ಅರ್ಜಿ ಹಾಕಲು ಅವಕಾಶ ವಿಲ್ಲದಂತಾಗಿದೆ. ಇನ್ನಾದರು ಸರಕಾರ ವಿವಿಧ ಇಲಾಖೆಗಳಲ್ಲಿ ನೆರೆಹೊರೆರಾಜ್ಯಗಳಲ್ಲಿ ಸೇವಾನುಭವ ಸೇವಾ ಜೇಷ್ಠತೆ, ಶೈಕ್ಷಣಿಕ ಅರ್ಹತೆಗಳು ಸೇವಾ ಕಾಯಂ ಮಾಡಿದಂತೆ ಕರ್ನಾಟಕ ಸರಕಾರದಲ್ಲೂ ಮಾಡದೇ ಹೋದಲ್ಲಿ ನಮಗಿರುವ ಮತದಾನದ ಹಕ್ಕಿನ ಮೂಲಕ ಉತ್ತರಿಸಲು ರಾಜ್ಯಾದ್ಯಾಂತ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ತಯಾರಾಗಿದೆ ಎಂದು ಪ್ರಕಟಣೆಯ ಮೂಲಕ ಸರಕಾರಕ್ಕೆ ಕೊಪ್ಪಳ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘ ಹಾಗೂ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಸಂಚಾಲಕರಾದ ವೀರಣ್ಣ.ಎಸ್.ಸಜ್ಜನರ ತಿಳಿಸಿದ್ದಾರೆ.
ಪ್ರಮುಖ ಬೇಡಿಕೆಗಳು:
೧) ಸೇವಾ ಭದ್ರತೆ,
೨) ಸಮಾನ ಕೆಲಸಕ್ಕೆ ಸಮಾನ ವೇತನ, ಸುಪ್ರಿಂಕೋರ್ಟ ಅದೇಶದನ್ವಯ ತಾತ್ಕಲಿಕ ನೆಲೆದಡಿ
ಸೇವಾ ಸಕ್ರಮ.
೩) ಸೇವಾ ಜೇಷ್ಠತೆ ಸೇವಾನುಭವ ಹಾಗೂ ಶೈಕ್ಷಣಿಕ ಅರ್ಹತೆಗಳ ಆಧಾರದ ಮೇಲೆ ನೆರೆ ಹೊರೆ
ರಾಜ್ಯಾಗಳಲ್ಲಿ ಅತಿಥಿ ಉಪನ್ಯಾಸಕರ ಸೇವಾ ಸಕ್ರಮಾತಿಯಂತೆ ಕರ್ನಾಟಕದಲ್ಲಿ ಅತಿಥಿ
ಉಪನ್ಯಾಸಕರ ಸೇವಾ ಸಕ್ರಮತಿಗೊಳಿಸುವುದು.
ಉಪಸ್ಥಿತ ಉಪನ್ಯಾಸಕರು:
ಗೀತಾ ಬೆಲ್ಲದ, ಗಿರಿಜಾ ತುರಮುರಿ, ಸಂತೋಷ ಔದಿ, ತುಕಾರಾಮ ನಾಯಕ್, ಜ್ಞಾನೇಶ್ವರ ಪತ್ತಾರ, ವಾಸುದೇವ , ಶಿವಣ್ಣ, ಖಾಜವಾಲಿ ಎಮ್.ಕೆ, ಸಣ್ಣದೇವೇಂದ್ರ ಸ್ವಾಮಿ, ಯಂಕಮ್ಮ, ರಾಜೇಶ್ವರಿ, ಅರುಣಕುಮಾರ, ಕನಕಪ್ಪ, ಮಲ್ಲೇಶ, ಮೋಹನಕುಮಾರ, ಪರುಶುರಾಮ, ಪ್ರಕಾಶ.ಜ.ಡಿ. ಕಳಕಪ್ಪ ಕುಬಾಂರ, ಬಸವರಾಜ ಹುಳಕಣ್ಣನವರ, ಶರಣಪ್ಪ ತಳವಾರ, ಶಿವಪ್ರಸಾದ ಹಾದಿಮನಿ, ಬಸವರಾಜ ನಾಯಕ, ಶರಣಪ್ಪ ತಳವಾರ, ಗೋಣಿಬಸಪ್ಪ, ಮಲ್ಲೇಸಪ್ಪ ಉಳ್ಳಾಗಡ್ಡಿ, ವಿಜಯ ತೋಟದ, ಸುಧಾ,ತುಮ್ಮರಗುದ್ದಿ, ಕಲೇಶ್ವರ ಅಬ್ಬಿಗೇರಿ, ಸಂತೋಷ ಬೆಲ್ಲದ, ಫಹಿಮಾ ಬೇಗಂ, ಪ್ರಕಾಶ ಬಳ್ಳಾರಿ, ಶ್ರೀಕಾಂತ ಸಜ್ಜನರ, ಶಿವನಗೌಡ ಪಾಟೀಲ, ಬಗಾಡೆ ಸಾಲಿಮಠ, ಶಮಶಾದ್ ಬೇಗಂ ಉಪಸ್ಥಿತ ಅತಿಥಿ ಉಪನ್ಯಾಸಕರು

Please follow and like us:
error