ಸಮಾಜಮುಖಿ ಕೆಲಸಕ್ಕೆ ಎಲ್ಲಾರೂ ಕೈಜೋಡಿಸಿ

ರಾಕಿಂಗ್ ಸ್ಟಾರ್  ಯಶ್ ಮತ್ತು ರಾಧಿಕಾ ಹೊಸ ಕೆಲಸವೊಂದಕ್ಕೆ ನಾಂದಿ ಹಾಡಿದ್ದಾರೆ. ಇಲ್ಲಿವರಗೆ ಯಶ್ ಮಾಡುತ್ತಿದ್ದ ಸಮಾಜಮುಖಿ ಕೆಲಸಕ್ಕೆ ಒಂದು ಮೂರ್ತಸ್ವರೂಪ ಸಿಕ್ಕಂತಾಗಿದೆ.ಇದು ಯಶೋಮಾರ್ಗದ ಹೊಸ ಕಚೇರಿ, ಕಚೇರಿಯಲ್ಲಿ ಪೂಜೆ ಮಾಡಿದ ನವದಂಪತಿ ಯಶೋಮಾರ್ಗ ಫೌಂಡೇಶನ್‌ನ್ನು ಎಂದಿಗಿಂತ ಸುಸಜ್ಜಿತವಾಗಿ ನಡೆಸಲು ಪಣತೊಟ್ಟಿದ್ದಾರೆ.ಈ ಸಿಂಪಲ್ ಕಚೇರಿ ಕಟ್ಟಡದಲ್ಲಿ ಇನ್ಮೇಲೆ ಯಶೋಮಾರ್ಗದ ಕೆಲಸ ಕಾರ್ಯಗಳು ನಡೆಯಲಿವೆ. ಇಲ್ಲಿವರಗೆ ರೈತರು, ಬಡವರು, ಕಷ್ಟದಲ್ಲಿ ಇರುವವರಿಗೆ ತನಗೆ ತೋಚಿದಂತೆ ಸಹಾಯ ಮಾಡುತ್ತಾ ಬಂದಿರುವ ಯಶ್‌, ಸಮಾಜಕ್ಕೆ ನಮ್ಮ ಕಿರುಕಾಣಿಕೆ ಸಲ್ಲಿಸಲು ಈ ಪ್ರಯತ್ನ ಎಂದಿದ್ದಾರೆ. ಯಶ್ ಇದು ಕೇವಲ ನನ್ನೊಬ್ಬನಿಂದಲೇ ಆಗುವ ಕೆಲಸ ಅಲ್ಲ. ಇದಕ್ಕೆ ಎಲ್ಲರೂ ಕೈಜೋಡಿಸಿ. ಆಗಲೇ ಬದಲಾವಣೆ ತರಲು ಸಾಧ್ಯ ಎಂದಿದ್ದಾರೆ. ಯಶ್ ಅವರ ಈ ಪ್ರಯತ್ನಕ್ಕೆ ಅಭಿಮಾನಿಗಳು ದೊಡ್ಡ ಮಟ್ಟದಲ್ಲೇ ಬೆಂಬಲ ಸೂಚಿಸಿದ್ದಾರೆ.

Leave a Reply