ಸಪ್ತಸ್ವರ ವಾಟ್ಸಪ್ ಸಮೂಹದ ತೃತೀಯ ವಾರ್ಷಿಕೋತ್ಸವ

ಸಪ್ತಸ್ವರ ವಾಟ್ಸಪ್ ಸಮೂಹ ಕೊಪ್ಪಳ ದ ತೃತೀಯ ವಾರ್ಷಿಕೋತ್ಸವ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಸಮೂಹದ ಸದಸ್ಯರು ಹಾಗೂ ನಾಡಿನ ಸಂಗೀತ ಕಲಾರಸಿಕರ ಸಹಯೋಗದೊಂದಿಗೆ ಕಳೆದ ರವಿವಾರ ದಿ. ೧೧-೧೧-೨೦೧೮ರಂದು ಜರುಗಿತು.

ಈ ಸಂದರ್ಭದಲ್ಲಿ ನಾಡಿನ ಹಿರಿಯ ಹಾರ್ಮೋನಿಯಂ ಕಲಾವಿದರಾದ ಪಂ. ವಾಯುಜೀವೋತ್ತಾಚಾರ್ಯ ಜೋಶಿ ರಾಯಚೂರು(ಅಂಧ ಕಲಾವಿದರು) ಇವರಿಗೆ ಸಮೂಹದಿಂದ ಗೌರವ ಸನ್ಮಾನ ಜರುಗಿತು.

ಕಾರ್ಯಕ್ರಮವು ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ವರೆಗೆ ಜರುಗಿತು. ಈ ಕಾರ್ಯಕ್ರಮದ ಮೂಲಕ ಉದಯೋನ್ಮುಖ ಕಲಾವಿದರಿಗೆ ವೇದಿಕೆ ಕಲ್ಪಿಸಿ, ಅವರ ಪ್ರತಿಭೆ ಅನಾವರಣ ಗೊಳ್ಳುವಂತೆ ಮಾಡಿತು

Please follow and like us:
error