ಸನ್ನಿಲೋಕ ಹಾಡು ಬಿಡುಗಡೆ : ಸಾಮಾಜಿಕ ಜಾಲತಾಣಗಳಲ್ಲಿ ಸದ್ದು


ಕೊಪ್ಪಳ, ೦೮- ಕೊಪ್ಪಳ ನಗರದ ಯುವಕರ ಸಾಹಿತ್ಯ ಸಂಗೀತ ನಿರ್ದೇಶನದ ಸನ್ನಿಲೋಕ ಹಾಡು ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಅವರ ಹುಟ್ಟುಹಬ್ಬದ ಪ್ರಯುಕ್ತ ಸನ್ನಿ ಲೋಕ ಎಂಬ ವೀಡಿಯೋ ಸಾಂಗ್‌ನ್ನು ಕಲಾವಿದ ರಾಕ್ ಮಲ್ಲು ಹೂಗಾರ್ ಅವರ ತಾಯಿ ಬಸಮ್ಮ ಹೂಗಾರ್ ಬಿಡುಗಡೆಗೊಳಿಸಿದರು.
ರಾಕ್ ಮಲ್ಲು ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಸಾಂಗ್‌ಗೆ ವಿನ್ ಸಂಜ್ ಸಾಹಿತ್ಯ ಬರೆದಿದ್ದು, ರ್‍ಯಾಪರ್ ಕೀರ್ತಿ ಸ್ವಾಮಿ ಹಾಡಿದ್ದು, ಎಐಓ ರಾಘವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಹೆಚ್.ಎಮ್.ಪ್ರಸಾದ್ ವೀಡೀಯೋ ಎಡಿಟಿಂಗ್ ಮಾಡಿದ್ದು ತೇಜು ಕುಮಾರ್ ಮತ್ತು ಸ್ಯಾಮುವೇಲ್ ಬೋವರ್ ಛಾಯಾಗ್ರಹಣ ಮಾಡಿದ್ದು ವಿನಯ ಮತ್ತು ಆನಂದ ಕೋರಿಯೊಗ್ರಾಫಿ ಮಾಡಿದ್ದಾರೆ.

Please follow and like us:
error