ಸದ್ಭಾವನಾ ದಿನಾಚರಣೆ ಸಮಾರಂಭ.

Gangavati :  ಕೇಸರಹಟ್ಟಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ತ್ರೀಯ ಸದ್ಭಾವನಾ ದಿನಾಚರಣೆಯನ್ನು ಆಚರಿಸಲಾಯಿತು. ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಗಂಗಾವತಿಯ ಬಸವ ಕೇಂದ್ರದ ಅಧ್ಯಕ್ಷರಾದ   ಬಸವರಾಜ ರವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ ವಿವಿಧತೆಯಲ್ಲಿ ಏಕತೆಯನ್ನು ಮೈಗೂಡಿಸಿಕೊಂಡಿರುವ ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ನಮ್ಮಲ್ಲಿ ಇರುವಷ್ಟು ಧರ್ಮ ಜಾತಿಗಳು ಪ್ರಪಂಚದ ಯಾವುದೇ ದೇಶದಲ್ಲಿಲ್ಲ..ಈ ಧರ್ಮಗಳು, ಜಾತಿಗಳು ದೇಶದ ಪ್ರಗತಿಗೆ ಹಾಗೂ ಐಕ್ಯತೆಗೆ ದಕ್ಕೆ ತರಬಾರದು. ಪರಸ್ಪರರನ್ನು ಸಮಾನ ಗೌರವದಿಂದ ಕಾಣುವುದನ್ನು ಧರ್ಮ ಕಲಿಸುತ್ತದೆ. ಬಸವಣ್ಣನವರ ವಚನದಂತೆ ದಯವಿಲ್ಲದ ಧರ್ಮ ಅದಾವುದಯ್ಯ ದಯವೇ ಬೇಕು ಸಕಲ ಪ್ರಾಣಿಗಳಲ್ಲಿ, ಧರ್ಮಗಳು ಮನುಷ್ಯರಲ್ಲಿ ಪರಸ್ಪರ ಮಮತೆ ಸಮತೆ ಸಹೋದರತೆ ಹುಟ್ಟು ಹಾಕದೇ ಮನುಜರಲ್ಲಿ ಧರ್ಮ ಜಾತಿ ಹೆಸರಿನಲ್ಲಿ ಜನರನ್ನು ಹೊಡೆದು ಸಮಾಜದ ಸ್ವಾಸ್ಥ್ಯ ಆಳುಮಾಡುವುದು ಧರ್ಮವೇ ಎಂದು ಪ್ರಶ್ನಿಸುತ್ತ, ವಿಶ್ವದಲ್ಲಿರುವ ಎಲ್ಲಾ ಮನುಷ್ಯರು ಪರಸ್ಪರ ಬ್ರಾತೃತ್ವದೊಂದಿಗೆ ಬದುಕಬೇಕೆನ್ನುವುದು ಕುವೆಂಪುರವರ ಆಶಯವಾಗಿತ್ತು. ಅದಕ್ಕಾಗಿನೇ ಅವರು, ವಿಶ್ವಮಾನವ ಸಂದೇಶವನ್ನು ಸಾರಿದ್ದಾರೆ. ದೇಶದಲ್ಲಿ ಕೋಮು ಸೌಹಾರ್ದತೆ ಮತ್ತು ಜಾತ್ಯಾತೀತ ಮನೋಭಾವನೆ ಬೆಳೆಸುವಲ್ಲಿ ಕುವೆಂಪುರವರ ಸಾಹಿತ್ಯವು,ವಚನ ಸಾಹಿತ್ಯವು ಯುವಕರಿಗೆ ಜೀವಕಳೆಯಾಗಿವೆ. ಸಮಯ ಸಿಕ್ಕಾಗೆಲ್ಲ ವಚನ ಸಾಹಿತ್ಯವನ್ನು ಓದಿದರೆ ತಮ್ಮಲ್ಲಿ ಸದ್ಭಾವವು ತಾನಾಗಿಯೇ ಬರುತ್ತದೆ ಎಂದರು. ಸಮಾಜದಲ್ಲಿ ಯುವಕರನ್ನು ದಾರಿತಪ್ಪಿಸುವ ಅನೇಕ ದುಷ್ಟ ಶಕ್ತಿಗಳಿವೆ. ಯುವಕರು ಪ್ರಶ್ನೆ ಮಾಡದೇ ಯಾವುದನ್ನು ಒಪ್ಪಿಕೊಳ್ಳಬಾರದು. ಎಲ್ಲರ ಮಾತುಗಳನ್ನು ಆಲಿಸಿ ಆದರೆ ನಿರ್ಧಾರ ಮಾತ್ರ ನಿಮ್ಮದಾಗಲಿ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಬಸಪ್ಪ ನಾಗೋಲಿ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಅದ್ಯಕ್ಷರಾದ   ಚೆನ್ನಪ್ಪ ಮಳಗಿ ನ್ಯಾಯವಾದಿಗಳು ಹಾಗೂ ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಶೋಭಾ, ಶ್ರೀಮತಿ ಯೋಗಿತ, ಕಾರ್ಯಕ್ರಮಾಧಿಕಾರಿ ಕಾಳಪ್ಪ ಪತ್ತಾರ ಉಪಸ್ಥಿತರಿದ್ದರು. ಆರಂಭದಲ್ಲಿ ಕುಮಾರಿ ಲತಾ ಸಂಗಡಿಗರು ಸದ್ಭಾವನಾ ಸಂದೇಶ ಗೀತೆ ಹಾಡಿದರು. ಕೊನೆಯಲ್ಲಿ ಕು. ರಾಘವೇಂದ್ರ ವಂದನಾರ್ಪನೆ ನೆರವೇರಿಸಿದರು.

Please follow and like us:
error