ಸದಾಶಿವ ಆಯೋಗ ವರದಿ ಜಾರಿ ಮಾಡುವಂತೆ ಗಣಪತಿಯ ಒತ್ತಾಯ

ಸದಾಶಿವ ಆಯೋಗದ ವರದಿ ಜಾರಿಯಾಗಬೇಕೆಂದು ಮಾದಿಗ ಸಮುದಾಯ ಆಕ್ಟೋಬರ್ ೨ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಸಮಾವೇಶ ಹಾಗು ಪ್ರತಿಭಟನೆ ಹಮ್ಮಿಕೊಂಡಿದೆ.

ಇದಕ್ಕಾಗಿ ಫೇಸ್ ಬುಕ್ ಹಾಗು ವಾಟ್ಸ್ ಆ್ಯಪನಂತಹ ಸಾಮಾಜಿಕ ಜಾಲ ತಾಣಗಳ ಮೂಲಕ ಪ್ರತಿಭಟನೆಯ ಬಗ್ಗೆ ಪ್ರಚಾರ ಮಾಡುತ್ತಿದೆ. ಅದರಂತೆ ಸಮುದಾಯದ ಜನರಿಗೆ ಇನ್ನಷ್ಟು ಮಾಹಿತಿ ರವಾನಿಸಲು ಈ ಬಾರಿ ಗಣಪತಿ ಪ್ರತಿಷ್ಠಾನದಲ್ಲಿ ಸದಾಶಿವ ಆಯೋಗ ಜಾರಿ ಮಾಡುವಂತೆ ಗಣಪತಿಯೂ ಒತ್ತಾಯಿಸಿದ್ದಾನೆ.

ಹೌದು! ಕೊಪ್ಪಳದ ಗಂಗಾವತಿಯ ಗಾಂಧಿನಗರದಲ್ಲಿ ಗಣಪತಿಯನ್ನು ಪ್ರತಿಷ್ಠಾನ ಮಾಡಲಾಗಿದ್ದು, ಮುಖ್ಯದ್ವಾರದಲ್ಲಿ ಸದಾಶಿವ ಆಯೋಗ ವರದಿ ಜಾರಿ ಮಾಡುವಂತೆ, ಸದಾಶಿವ ಆಯೋಗಕ್ಕಾಗಿ ನಮ್ಮ ಹೋರಾಟ ಅಂತ ಬ್ಯಾನರ್ ಹಾಕಲಾಗಿದೆ.ಅಲ್ದೆ ಗಣಪತಿ ಕೈಯಲ್ಲಿ ಹಲಗಿಕೊಟ್ಟು, ಹಲಗಿ ಮೇಲೆ ಜೈ ಮಾದಿಗ ಅಂತ ಬರೆಯಲಾಗಿದೆ. ೧೦೧ ದಲಿತರಲ್ಲಿ ಮಾದಿಗ ಸಮುದಾಯ ಸಾಕಷ್ಟು ಸೌಲಭ್ಯಗಳಿಂದ ವಂಚಿತವಾಗಿದ್ದು, ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಬೇಕು ಅಂತ ಸಮುದಾಯದ ಹಿರಿಯ ಹೋರಾಟಗಾರರು ಮುಖಂಡರು ವಿಭಿನ್ನವಾಗಿ ಪ್ರಚಾರ ಮಾಡುತ್ತಿದ್ದಾರೆ. ಅದರಲ್ಲಿ ಗಣಪತಿಯೂ ಕೂಡ ಸದಾಶಿವ ಆಯೋಗದ ಪ್ರಚಾರ ಮಾಡುತ್ತಿರುವುದು ವಿಶೇಷ.

Please follow and like us:
error