fbpx

ಸಣ್ಣ ಯಂತ್ರಚಾಲಿತ ಎಣ್ಣೆಗಾಣ ಹಾಗೂ ಬಿತ್ತನೆ ಬೀಜ ಚೀಲಗಳ ವಿತರಣೆಗೆ ಚಾಲನೆ


ಕೊಪ್ಪಳ ಮೇ.  ಸಣ್ಣ ಯಂತ್ರಚಾಲಿತ ಎಣ್ಣೆಗಾಣ ಹಾಗೂ ಬಿತ್ತನೆ ಬೀಜ ಚೀಲಗಳ ವಿತರಣೆಗೆ ರ್ನಾಟಕ ಸರ್ಕಾರದ ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಇಂದು (ಮೇ.18) ಚಾಲನೆ ನೀಡಿದರು.
ಕೃಷಿ ಇಲಾಖೆಯ ಜಿಲ್ಲಾ ರೈತ ಸಂಪರ್ಕ ಕೇಂದ್ರಕ್ಕೆ ಸಚಿವರು ಭೇಟಿ ನೀಡಿ ರೈತರಿಗೆ ಸಣ್ಣ ಯಂತ್ರಚಾಲಿತ ಎಣ್ಣೆಗಾಣ ಹಾಗೂ ಬಿತ್ತನೆ ಬೀಜ ಚೀಲಗಳನ್ನು ವಿತರಿಸಿದರು.  ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಚ್.ವಿಶ್ವನಾಥ್ ರೆಡ್ಡಿ, ಸಂಸದ ಕರಡಿ ಸಂಗಣ್ಣ, ಶಾಸಕರಾದ ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್, ಬಸವರಾಜ ದಢೇಸೂಗೂರು, ಜಂಟಿ ಕೃಷಿ ನಿರ್ದೇಶಕಿ ಶಬಾನ ಎಂ.ಶೇಖ್ ಸೇರಿದಂತೆ ಹಲುವು ಗಣ್ಯರು ಉಪಸ್ಥಿತರಿದ್ದರು

Please follow and like us:
error
error: Content is protected !!