ಸಚಿವ ಕೃಷ್ಣಬೈರೇಗೌಡ ಪ್ರವಾಸ ಕಾರ್ಯಕ್ರಮ

ಕೊಪ್ಪಳ ನ. : ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಕೃಷ್ಣಬೈರೇಗೌಡ ಅವರು ನ. 22 ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಸಚಿವರು ನ. 22 ರಂದು ಬೆಳಿಗ್ಗೆ 07-58 ಗಂಟೆಗೆ ಹಂಪಿ ಎಕ್ಸ್ ಪ್ರೇಸ್ ರೈಲಿನ ಮೂಲಕ ಕೊಪ್ಪಳಕ್ಕೆ ಆಗಮಿಸುವರು. ಬೆಳಿಗ್ಗೆ 08 ರಿಂದ 10 ಗಂಟೆಯವರೆಗೆ ಕೊಪ್ಪಳ ಪ್ರವಾಸಿ ಮಂದಿರದಲ್ಲಿರುವರು. 10 ರಿಂದ 10-30 ರವರೆಗೆ ಮುಖಂಡರೊಡನೆ ಪಕ್ಷದ ಸಭೆ ನಡೆಸುವರು. ಬೆಳಿಗ್ಗೆ 10-30 ರಿಂದ 1-30 ರವರೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ಕೈಗೊಳ್ಳುವರು. ನಂತರ ಮಧ್ಯಾಹ್ನ 02 ಗಂಟೆಗೆ ರಸ್ತೆ ಮೂಲಕವಾಗಿ ಬಳ್ಳಾರಿಗೆ ಪ್ರಯಾಣ ಬೆಳಸುವರು

Please follow and like us:
error