ಸಚಿವ ಅನಂತಕುಮಾರ್ ವಿರುದ್ದ ಪ್ರತಿಭಟನೆ

ಕೊಪ್ಪಳ:- ಕೇಂದ್ರ ಸಚಿವ ಅನಂತಕುಮಾರ್ ಹೇಳಿಕೆ ಖಂಡಿಸಿ ಕೊಪ್ಪಳದಲ್ಲಿ ಪ್ರತಿಭಟನೆ.ನಡೆಯಿತು. ಡಿಎಸ್ ಎಸ್, ಎಸ್ ಎಫ್ ಐ, ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಕೊಪ್ಪಳದ ಅಶೋಕ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿ ಅನಂತಕುನಾರ ವಿರುದ್ದ ದಿಕ್ಕಾರದ ಘೋಷಣೆಗಳನ್ನು ಕೂಗಲಾಯಿತು..

ಸಂವಿದಾನ ಬದಲಾಯಿಸುತ್ತೇವೆ ಎನ್ನುವ ಅನಂತಕುಮಾರ್ ಹೆಗಡೆ ಹೇಳಿಕೆಗೆ ತೀವ್ರ ಪ್ರತಿಭಟನೆ ವ್ತಕ್ತವಾಗಿದೆ. ಕ್ಷಮೆ ಕೇಳಲು ಆಗ್ರಹಿಸಿ ಅನಂತಕುಮಾರ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಕ್ಷಮೆ ಕೇಳದಿದ್ದರೆ ತೀವ್ರ ಸ್ವರೂಪದ ಪ್ರತಿಭಟನೆಯ ಎಚ್ವರಿಕೆ ನೀಡಿದರು.