ಸಚಿವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ರಸ್ತೆ ತಡೆ ಪ್ರತಿಭಟನೆ


ಕೊಪ್ಪಳ, ನ.೨೭: ರಾಜ್ಯ ಸರ್ಕಾರದ ಸಚಿವರುಗಳಾದ ವಿನಯ ಕುಲಕರ್ಣಿ ಮತ್ತು ಕೆ.ಜೆ. ಜಾರ್ಜ ರಾಜೀನಾಮೆಗೆ ನೀಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ ಆಗ್ರಹಿಸಿದರು.
ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಬೃಹತ್ ರಸ್ತೆ ತಡೆ ನಡೆಸಿ ಪ್ರತಿಭಟನೆ ಹಮ್ಮಿಕೊಂಡ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಅದಗೆಟ್ಟದ್ದು, ಅದಕ್ಕೆ ಪೂರಕವೆಂಬತೆ ಪದೇ ಪದೇ ರಾಜ್ಯ ಸರ್ಕಾರದ ಸಚಿವರು ಹವಲಾರು ಪ್ರಕರಣಗಳಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಇಷ್ಟಾದರೂ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳದಿರುವುದು ಶೋಚನೀಯ. ಒಂದು ಕಡೆ ಪ್ರಮಾಣಿಕ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಚಿವ ಕೆ.ಜೆ ಜಾರ್ಜ ಅವರು ಡಿವೈಎಸ್ಪಿ ಗಣಪತಿ ಆತ್ಮಹತ್ಯ ಪ್ರಕರಣದಲ್ಲಿ ಪಾತ್ರ ಪ್ರಮುಖವಾಗಿ ಕೇಳಿಬಂದಿದೆ. ಹಾಗೂ ಸಚಿವ ವಿನಯ ಕುಲಕರ್ಣಿ ಅವರು ಧಾರವಾಡ ಜಿ.ಪಂ ಸದಸ್ಯ ಯೋಗಿಶಗೌಡ ಹತ್ಯೆ ಪ್ರಕರಣದಲ್ಲಿ ಪಾತ್ರ ಕೇಳಿ ಬಂದಿದ್ದು, ಸಚಿವರು ಹಂತಕರ ರಕ್ಷಣೆಗೆ ಬೆಂಗಾವಲಾಗಿ ನಿಂತಿರುವ ಸಾಕ್ಷ್ಯಿಗಳು ಮಾಧ್ಯಮಗಳ ಮೂಲಕ ಲಭ್ಯವಾಗಿದೆ. ಹಾಗೂ ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯ ಹುಬ್ಬಳ್ಳಿಯಲ್ಲಿ ಠಿಕ್ಕಾಣಿಹೂಡಿ ಯೋಗೀಶಗೌಡರ ಪತ್ನಿಯನ್ನು ಸಂಧಾನಕ್ಕೆ ಒತ್ತಡ ಹೇರುತ್ತಿರುವುದು ಬಹಿರಂಗಗೊಂಡಿದೆ. ಈ ಕೂಡಲೇ ಅವರ ರಾಜೀನಾಮೆ ಪಡೆದು ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಖಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ರಸ್ತೆ ತಡೆ ನಡೆಸಿದ್ದರ ಪರಿಣಾಮ ಕೆಲ ಕಾಲ ವಾಹನಗಳ ಸಂಚಾರ ಅಸ್ಥವ್ಯಸ್ಥವಾಯಿತು. ಮನವಿ ಸ್ವೀಕರಿಸಲು ಸ್ಥಳಕ್ಕಾಗಮಿಸಿದ ಕೊಪ್ಪಳ ತಹಶೀಲ್ದಾರ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ಉಂಟಾಗಿ ಶ್ಥಳದಲ್ಲಿ ಉದ್ವೀಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಪ್ರತಿಭಟನಾಕಾರರನ್ನು ಮನವೊಲಿಸಿ ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರ ಸನ್ನಿಧಿಗೆ ರವಾನಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ಪ್ರತಿಭಟನೆಯಲ್ಲಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ ಚಂದ್ರಶೇಖರ, ಕೊಪ್ಪಳ ವಿಧಾನಸಭಾ ಬೂತ ಸಮಿತಿ ಅಧ್ಯಕ್ಷ ಅಮರೇಶ ಕರಡಿ, ಮಾಜಿ ಶಾಸಕ ಕೆ.ಶರಣಪ್ಪ ವಕೀಲ, ನಗರ ಮಂಡಲ ಅಧ್ಯಕ್ಷ ಶಿವಕುಮಾರ ಹಕ್ಕಾಪಕ್ಕಿ, ಮುಖಂಡರಾದ ತೋಟಪ್ಪ ಕಾಮನೂರ, ವಿರುಪಾಕ್ಷಯ್ಯ ಗದುಗಿನಮಠ, ಗವಿಸಿದ್ದಪ್ಪ ಕಂದಾರಿ, ಬಸವರಾಜ ಗಿಲ್ಲೇಸಗೂರ, ದೇವರಾಜ ಹಾಲಸಮುದ್ರ, ಉಮೇಶ ಕುರುಡೇಕರ, ಶ್ರವಣ ಬಂಡಾನವರ, ಬಿ.ಗಿ ಗದುಗಿನಮಠ, ಮಹಿಳಾ ಮೋರ್ಚಾದ ವಾಣಿಶ್ರೀ ಮಠದ, ಹೇಮಲತಾ ನಾಯಕ, ಶೋಭಾ ನಗರಿ, ಶ್ಯಾಮಲಾ ಕೋನಾಪೂರ, ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು.

Please follow and like us:
error