ಸಚಿವರ ಕೆಡಿಪಿ ಸಭೆ : ಚಾಟಿ ಬೀಸಿದ ಶಾಸಕ, ಸಂಸದರು

Koppal News ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ಆರ್ ಶಂಕರ್ ನೇತೃತ್ವದಲ್ಲಿ ಇಂದು ಮೊದಲ ಕೆಡಿಪಿ ಸಭೆಯನ್ನು ಕರೆಯಲಾಗಿತ್ತು.‌ಜಿಲ್ಲಾಡಳಿತ ಭವನದಲ್ಲಿರು‌ ಜಿಲ್ಲಾ ಪಂಚಾಯತ ಸಭೆಯ ಹಾಲ್ ನಲ್ಲಿ ಪ್ರಥಮ ಕೆಡಿಪಿ ಸಭೆ ನಡೆಯಿತು. ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳಿದ್ದು, ಬರಗಾಲ ಆವರಿಸಿಕೊಂಡಿದೆ. ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಪೂರ ಹಾಗು ಸಂಸದ ಕರಡಿ ಸಂಗಣ್ಣ ಜಿಲ್ಲೆಯಲ್ಲಿ ಆವರಿಸಿಕೊಂಡ ಬರಗಾಲದಿಂದ ಕುಡಿಯುವ ನೀರಿನ ಸಮಸ್ಯೆ ಹಾಗು ಬೆಳೆ ನಾಶದ ಕುರಿತು ಗಂಭೀರವಾದ ವಿಷಯಗಳನ್ನು ಸಚಿವರ ಗಮನಕ್ಕೆ ತಂದರು. ಅಲ್ದೆ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಬೇಜವಾಬ್ದಾರಿತನ, ನಿರ್ಲಕ್ಷ್ಯ ಅಧಿಕಾರಿಗಳಲ್ಲಿ ಹೆಚ್ಚಾಗಿದೆ ಅಂತ ದೂರಿದರು. ಇಷ್ಟಾದ್ರೂ ಅಧಿಕಾರಿಳು ಸಚಿವರ, ಶಾಸಕರ, ಸಂಸದರ ಮಾತುಗಳಿಗೆ ಕಿವಿಗೊಡದೆ.ಸಭೆಯಲ್ಲಿ ಮೊಬೈಲ್ ನಲ್ಲಿ ಮಗ್ನರಾಗಿದ್ದರು.
ಬರಗಾಲದ ಬಗ್ಗೆ ಚರ್ಚೆ ಆಗ್ತಾ ಇದ್ರೂ ಡೋಂಟ್ ಕೇರ್ ಅಂತ ಫೇಸ್‌ಬುಕ್‌, ವಾಟ್ಸ್ ಆಪ್ ನಲ್ಲಿ ಬ್ಯೂಸಿ ಆಗಿದ್ದರು. ಸಭೆಯಲ್ಲಿ ಅಧಿಕಾರಿಗಳು ಶಿಸ್ತನ್ನು ಕಾಪಾಡುವಂತೆ ಮತ್ತು ಮೊಬೈಲ್ ಅವಾಯಡ್ ಮಾಡುವಂತೆ ಡಿಸಿ ಸುನೀಲ್ ಕುಮಾರ ಪೊಮ್ಮಲ ವಾರ್ನಿಂಗ್ ಮಾಡಿದ್ರೂ ಅಧಿಕಾರಿಗಳು ಮಾತ್ರ ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದರು.

Please follow and like us:
error