fbpx

 ಸಂಸ್ಥೆಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು- ಬಿ.ಎಸ್​​​.ಗದ್ದಿಕೇರಿ

 

35 ವರ್ಷಗಳ ಕಾಲ ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಹಾಯ ಸಂಚಾರ ನಿರಿಕ್ಷಕ ಚಂದಾಲಿಂಗಪ್ಪ ಯಲಿಗಾರ್​ ಅವರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಎಸ್​ಗದ್ದಿಕೇರಿ, ವಿಭಾಗೀಯ ಸಂಚಾರ ಅಧಿಕಾರಿ ದೇವಾನಂದ ಬಿರಾದಾರ್​ ಹಾಗೂ ವಿಭಾಗೀಯ ತಾಂತ್ರಿಕ ಶಿಲ್ಪಿ ನಾರಾಯಣ ರೌಡಗೇರಿ ಗೌರವಿಸಿದರು.

ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಪ್ರತಿಯೊಬ್ಬ ನೌಕರರು ಸಂಸ್ಥೆಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕೆಂದು ಈಶಾನ್ಯ ಕರ್ನಾಟಕ ಸಾರಿಗೆ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಎಸ್​.ಗದ್ದಿಕೇರಿ ಹೇಳಿದರು. ನಗರದ ವಿಭಾಗೀಯ ಕಚೇರಿಯಲ್ಲಿ ನಡೆದ ಸಹಾಯಕ ಸಂಚಾರ ನಿರಿಕ್ಷಕ ಚಂದಾಲಿಂಗಪ್ಪ ಯಲಿಗಾರ್​ ಅವರ ವಯೋ ನಿವೃತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇನ್ನು ಸಾರಿಗೆ ಸಂಸ್ಥೆಯಲ್ಲಿ 35 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಚಂದಾಲಿಂಗಪ್ಪ ಯಲಿಗಾರ್​ ಇದೀಗ ನಿವೃತ್ತಿಯಾಗುತ್ತಿದ್ದಾರೆ. ಇದರಿಂದಾಗಿ ಪ್ರಮಾಣಿಕ ನೌಕರರೊಬ್ಬರು ಇಂದು ಸಂಸ್ಥೆಯಿಂದ ಹೊರಗೆ ಹೋಗುತ್ತಿದ್ದಾರೆ. ಇನ್ನು ಚಂದಾಲಿಂಗಪ್ಪ ಯಲಿಗಾರ್​ ಅವರು ಸಂಸ್ಥೆಯಲ್ಲಿ ಸೇವೆ ಸಲ್ಲಿಸುವವರೆಗೂ ಯಾವುದೆ ಒಂದೇ ಒಂದು ಕಪ್ಪುಚುಕ್ಕೆ ಇರಲಾರದ ರೀತಿ ಕೆಲಸ ಮಾಡಿದ್ದಾರೆ. ಚಂದಾಲಿಂಗಪ್ಪ ಅವರ ಕಾಯಕ ನಿಷ್ಠೆ ಹಾಗೂ ವೃತ್ತಿಯ ಬಗ್ಗೆ ಇರುವ ಗೌರವ ಇಲಾಖೆಯ ಇತರ ನೌಕರರಿಗೆ ಮಾದರಿಯಾಗಿದೆ ಎಂದರು. ಇನ್ನು ನಿವೃತ್ತಿ ಬಳಿಕ ನೌಕರರು ಸುಮ್ಮನೇ  ಮನೆಯಲ್ಲಿ  ಕುಳಿತುಕೊಳ್ಳಲಾರದೆ ಏನಾದರೂ ಸಮಾಜಮುಖಿ ಕೆಲಸಗಳನ್ನು ಮಾಡುವತ್ತ ಗಮನಹರಿಸಬೇಕೆಂದು  ಬಿ.ಎಸ್​.ಗದ್ದಿಕೇರಿ ಹೇಳಿದರು.

 

ಇನ್ನು ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಸಹಾಯಕ ಸಂಚಾರ ನಿರಿಕ್ಷಕ ಚಂದಾಲಿಂಗಪ್ಪ ಯಲಿಗಾರ್​ ನಾನು 35 ವರ್ಷಗಳ ಕಾಲ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಇದೇ ಕಾರಣಕ್ಕಾಗಿಯೇ ಸಂಸ್ಥೆ ನನಗೆ ಎಲ್ಲವನ್ನೂ ನೀಡಿದೆ. ಇನ್ನು ನಾನು ಸಂಸ್ಥೆಯಲ್ಲಿ ಇಷ್ಟೊಂದು ಸುದೀರ್ಘ ಅವಧಿವರೆಗೆ ಸೇವೆ ಸಲ್ಲಿಸಲು ನನ್ನ ವೃತ್ತಿ ಬಗೆಗಿನ ಗೌರವ ಹಾಗೂ ಇಲಾಖೆಯ ಅಧಿಕಾರಿಗಳ ಸಹಕಾರ ಎಂದರು. ಇನ್ನು ಪ್ರತಿಯೊಬ್ಬ ಸಂಸ್ಥೆಯ ನೌಕರರು ಕಾಯಕವೇ ಕೈಲಾಸ ಎಂದು ತಿಳದುಕೊಂಡು ಸೇವೆ ಸಲ್ಲಿಸಿಬೇಕಂದು ಚಂದಾಲಿಂಗಪ್ಪ ಯಲಿಗಾರ್​ ಮನವಿ ಮಾಡಿದರು.

 

ಇನ್ನು ಇದಕ್ಕೂ ಪೂರ್ವದಲ್ಲಿ ನಿವೃತ್ತಿ ಹೊಂದಿದ ಸಹಾಯಕ ಸಂಚಾರ ನಿರಿಕ್ಷಕ ಚಂದಾಲಿಂಗಪ್ಪ ಯಲಿಗಾರ್​ ದಂಪತಗಳಿಗೆ ಇಲಾಖೆ ವತಿಯಿಂದ ಗೌರವಿಸಲಾಯಿತು. ಈ ವೇಳೆಯಲ್ಲಿ ವಿಭಾಗೀಯ ಸಂಚಾರ ಅಧಿಕಾರಿ  ದೇವಾನಂದ ಬಿರಾದಾರ್​​, ವಿಭಾಗೀಯ ತಾಂತ್ರಿಕ ಶಿಲ್ಪಿ ನಾರಾಯಣ ಗೌಡಗೇರಿ, ಆಡಳಿತಾಧಿಕಾರಿ ಮುನಿರಾಮೇಗೌಡ  ಸೇರಿದಂತೆ ಸಂಸ್ಥೆಯ ವಿವಿಧ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು.

 

Please follow and like us:
error
error: Content is protected !!