ಸಂಸ್ಕೃತಿಕ ಭವನ ನಿರ್ಮಾಣ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ.

ಕೊಪ್ಪಳ:೦೭, ಭಾಗ್ಯನಗರ ಪಟ್ಟಣ ಪಂಚಾಯತಿಯ ಶಿಕ್ಷಕರ ಕಾಲೋನಿಯಲ್ಲಿ ೨೦೧೯-೨೦೨೦ರ ಸಾಲಿನ ಶಾಸಕರ ಪ್ರದೇಶ ಅಭಿವೃದ್ಧಿ ಯೋಜನೆಯಡಿಯಲ್ಲಿ ಅಂದಾಜು ಮೊತ್ತ ರೂ.೫ ಲಕ್ಷದ ಸಂಸ್ಕೃತಿಕ ಭವನದ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ತ್ವರೀತಗತಿಯಲ್ಲಿ ಬೆಳೆಯುತ್ತಿರುವ ಭಾಗ್ಯನಗರ ಪಟ್ಟಣದ ಅಭಿವೃದ್ಧಿಗೆ ಈಗಾಗಲೆ ಪ್ರತಿ ವರ್ಷ ರೂ.೫ ಕೋಟಿ ಅನುದಾನ ಬಿಡುಗಡೆಯಾಗುತ್ತಿದ್ದು, ಪಟ್ಟಣದಲ್ಲಿ ವ್ಯವಸ್ಥಿತ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಕಲ್ಯಾಣ ನಗರದಿಂದ ಭಾಗ್ಯನಗರ ಕ್ರಾಸ್‌ವರೆಗೆ ರಸ್ತೆ ಮಧ್ಯೆಯಲ್ಲಿ ಅಲಂಕಾರ ದ್ವೀಪಗಳ ಜೋಡನೆ ಕಾಮಗಾರಿಯು ತ್ವರೀತಗತಿಯಲ್ಲಿ ಕೈಗೊಂಡಿದ್ದು ಇದನ್ನು ಭಾಗ್ಯನಗರ ಪಟ್ಟಣದವರೆಗೆ ವಿಸ್ತರಿಸಲಾಗುವುದು. ಭಾಗ್ಯನಗರ ಪಟ್ಟಣ ಪಂಚಾಯತಿಯನ್ನು ಮೇಲ್ದರ್ಜೆಗೇರಿಸಲು ಈಗಾಗಲೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದ್ದು ಈ ಆರ್ಥಿಕ ವರ್ಷದಲ್ಲಿ ಪಟ್ಟಣದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಸಮಗ್ರ ಭಾಗ್ಯನಗರ ಪಟ್ಟಣಕ್ಕೆ ಅವಶ್ಯಕತೆ ಇರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಬರುವ ದಿನಗಳಲ್ಲಿ ಸಂಸ್ಕೃತಿಕ ಭವನಕ್ಕೆ ರೂ.೫೦ ಲಕ್ಷ ಅನುದಾನ ಮಂಜೂರು ಮಾಡಿಸಿ ಒಂದು ಸುಸಜ್ಜಿತ ಸಂಸ್ಕೃತಿಕ, ಸಾಹಿತ್ಯ ಹಾಗೂ ಮಂಗಲ ಕಾರ್ಯಗಳಿಗೆ ಒಂದು ಬೃಹತ್ ಭವನ ನಿರ್ಮಾಣ ಮಾಡಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ಮಾಜಿ ಸಿ.ಪಂ.ಸದಸ್ಯ ಪ್ರಸನ್ನ ಗಡಾದ, ನಗರಸಭೆ ಸದಸ್ಯರುಗಳಾದ ಗುರುರಾಜ ಹಲಗೇರಿ, ಅಜೀಮ್ ಅತ್ತಾರ, ಬಸಯ್ಯ ಹಿರೇಮಠ, ಅಕ್ಬರ್ ಪಾಷಾ ಪಲ್ಟನ್, ಅರುಣ ಅಪ್ಪುಶೆಟ್ಟಿ, ಪಟ್ಟಣ ಪಂಚಾಯತಿ ಸದಸ್ಯರಾದ ಹೊನ್ನೂರಸಾಬ ಭೈರಾಪೂರ, ಸವಿತಾ ಗೋರಂಟ್ಲಿ, ಮಂಜುನಾಥ ಸಾಲಿಮಠ, ಗಂಗಾಧರ ಕಬ್ಬೇರ, ಯಶೋದಾ ಮರಡಿ, ಮುಖಂಡರುಗಳಾದ ರಮೇಶ ಹೂಗಾರ, ಮಹೆಬೂಬ ಬಳಿಗಾರ ಇನ್ನೂ ಅನೇಕ ನಿವೃತ್ತ ಶಿಕ್ಷಕರು, ಕಾಲೋನಿಯ ನಿವಾಸಿಗಳು, ಹಾಗೂ ವಕ್ತಾರ ರವಿ ಕುರುಗೋಡ ಯಾದವ ಉಪಸ್ಥಿತರಿದ್ದರು.

Please follow and like us:
error