ಸಂಸದೀಯ ಕಾರ್ಯದರ್ಶಿಯಾಗಿ ಶಾಸಕ ರಾಘವೇಂದ್ರ ಹಿಟ್ನಾಳ ನೇಮಕ : ಸಂಭ್ರಮಾಚರಣೆ

Koppal ಸಂಸದೀಯ ಕಾರ್ಯದರ್ಶಿಯಾಗಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ನೇಮಕ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ನಗರದ ಅಶೋಕ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಕಾಂಗ್ರೆಸ್ ನಾಯಕರಿಗೆ ಜಯಕಾರ ಕೂಗಿದರು.

ನಗರ ಘಟಕ ಅದ್ಯಕ್ಷ ಕಾಟನ್ ಪಾಷಾ, ಬ್ಲಾಕ್ ಅದ್ಯಕ್ಷ ಸುರೇಶ ಭೂಮರಡ್ಡಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಇಂದಿರಾ ಭಾವಿಕಟ್ಟಿ, ನಗರಸಭೆ ಸದಸ್ಯರಾದ ಅಜೀಮ ಅತ್ತಾರ್, ಅಕ್ಬರ್ ಪಲ್ಟನ್, ಮಂಜುನಾಥ ಗೊಂಡಬಾಳ, ಶ್ರೀನಿವಾಸ ಪಂಡಿತ , ರವಿ ಕುರಗೋಡ, ಶೀತಲ್ ಪಾಟೀಲ್, ಮಾನ್ವಿ ಪಾಷಾ ಸೇರಿದಂತೆ ಇತರರು ಭಾಗೀಯಾಗಿದ್ದರು.

Please follow and like us:
error