ಸಂಸದರ ಪ್ರಯತ್ನ ಫಲ : ಸೌದಿಯಿಂದ ಕೊಪ್ಪಳಕ್ಕೆ ಮರಳಿದ ಮಹಿಳೆ

ಕೊಪ್ಪಳದ ಮಹಿಳೆಗೆ ಸೌದಿಯಲ್ಲಿ 
ಮಾನಸಿಕ 

ಹಾಗೂ ದೈಹಿಕ ಕಿರುಕುಳ ಪ್ರಕರಣ.ಅರೆಬಿಕ್ ಕಲಿಸುವ ಕೆಲಸ ಕೊಡಿಸುವುದಾಗಿ ಹೇಳಿ  ಕರೆದುಕೊಂಡು ಹೋಗಿ ಕಿರುಕುಳ ನೀಡಲಾಗಿತ್ತು.ಪ್ರತಿ ತಿಂಗಳು ೪೦ ಸಾವಿರ ರೂಪಾಯಿ ಕೊಡುವುದಾಗಿ ನಂಬಿಸಿ ಕರೆದುಕೊಂಡು ಹೋಗಿ ಕಿರುಕುಳ ನೀಡಲಾಗಿತ್ತು.ಜುಲೈ ೩೦ ರಂದು ಸಂಸದರನ್ನು ಸಂಪರ್ಕಿಸಿ ಬಾಬಾಜಾನ್ ಕುಟುಂಬ ಅಳಲನ್ನು ತೊಡಿಕೊಂಡಿದ್ದರು.ಬಾಬಾಜಾನ ಪತ್ನಿ ಚಾಂದ್ ಸುಲ್ತಾನರನ್ನು ಮೂರು ತಿಂಗಳ ಹಿಂದೆ ದುಬೈಗೆ ಕರೆದುಕೊಂಡು ಹೋಗಿದ್ದರು.ಗೆಸ್ಟ್ ಹೌ ಸ್ ನಲ್ಲಿ ಕೂಡಿ ಹಾಕಿ  ಊಟಕ್ಕೂ ಕೂಡಾ ಕೊಡದೇ ಮಾನಸಿಕ ಕಿರುಕುಳ ನೀಡಲಾಗಿತ್ತು. ಮೂರು ತಿಂಗಳ ಹಿಂದೆ ಮಂಗಳೂರು ಮೂಲದ ಸಂಷೇರ್ ಎಂಬ ಎಜೆಂಟ್ ಮುಖಾಂತರ ಸೌದಿಗೆ ಕರೆದುಕೊಂಡು ಹೋಗಿದ್ದರು.ಸಂಸದ ಕರಡಿ ಸಂಗಣ್ಣ ಈ ಕುರಿತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರೊಂದಿಗೆ  ಚರ್ಚಿಸಿ ಕ್ರಮಕ್ಕೆ ಆಗ್ರಹಿಸಿದ್ದರು..ಸಂಸದರ ಪ್ರಯತ್ನದ ಫಲವಾಗಿ ಇಂದು ಕುಟುಂಬ ಸೇರಿದ ಚಾಂದಸುಲ್ತಾನ. ಇಂದು ಸಂಸದರ ಮನೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಮ್ನ ನೋವನ್ನು ತೋಡಿಕೊಂಡರು. ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಗವಿಸಿದ್ದಪ್ಪ ಕರಡಿ, ಅಮರೇಶ ಕರಡಿ, ಸೈಯದ್ ನಾಸೀರುದ್ದೀನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ವಗ

Please follow and like us:
error