fbpx

ಸಂಸದರ ಅನುದಾನದಿಂದ ಡೆಸ್ಕ್ ಖರೀದಿ | ಸಂಸದ ಸಂಗಣ್ಣ ಕರಡಿ ವಿತರಣೆ


ಮಹಿಳಾ ಕಾಲೇಜಿಗೆ ಡೆಸ್ಕ್ ವಿತರಣೆ
ಕೊಪ್ಪಳ:
ಕೊಪ್ಪಳ ನಗರದಲ್ಲಿನ ಸರ್ಕಾರಿ ಮಹಿಳಾ ಡಿಗ್ರಿ ಕಾಲೇಜಿಗೆ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದರ ನಿಧಿಯಿಂದ ಬುಧವಾರ ಡೆಸ್ಕ್‌ಗಳನ್ನು ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ಸರ್ಕಾರಗಳು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅನೇಕ ಸೌಲಭ್ಯಗಳನ್ನು ನೀಡಿದೆ. ಅವುಗಳನ್ನೆಲ್ಲ ಸದ್ಬಳಕೆ ಮಾಡಿಕೊಂಡು ಉನ್ನತ ಶಿಕ್ಷಣ ಪಡೆದು ಉತ್ತಮ ನೌಕರಿಗಳನ್ನು ಪಡೆದು ನಿಮ್ಮ ತಂದೆ-ತಾಯಿಯರ ಕಷ್ಟಗಳನ್ನು ದೂರ ಮಾಡಬೇಕು. ಅಂದಾಗ ಮಾತ್ರ ನಿಮ್ಮ ಪಾಲಕರು ನಿಮ್ಮನ್ನು ವಿದ್ಯಾವಂತರನ್ನಾಗಿ ಮಾಡಿದ್ದಕ್ಕೆ ಸಾರ್ತಕವಾಗುತ್ತದೆ ಎಂದರು.
ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರೂ ಯಾವ ಕ್ಷೇತ್ರದಲ್ಲೂ ಹಿಂದೆ ಬಿದ್ದಿಲ್ಲ. ಅದರಲ್ಲೂ ನಮ್ಮ ದೇಶದಲ್ಲಿ ಇಂದು ಮಹಿಳಾ ಸಾಧಕಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಉನ್ನತ ವ್ಯಾಸಂಗದಲ್ಲಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸುತ್ತಿದ್ದಾರೆ. ಅವರೆಲ್ಲ ನಿಮಗೆ ಪ್ರೇರಣೆಯಾಗಬೇಕು. ಅವರಂತೆ ನೀವು ಸಹ ಇರುವ ಸವಲತ್ತುಗಳಲ್ಲೇ ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಮುಂದೆ ಬರಬೇಕು ಎಂದು ನೆರೆದಿದ್ದ ಪದವಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ತನ್ನದೇ ರೀತಿನೀತಿಗಳಲ್ಲಿ ಶಿಕ್ಷಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಕೇಂದ್ರ ಸರ್ಕಾರ ಬೇಟಿ ಬಚಾವೋ ಬೇಟಿ ಪಡಾವೋ ಎನ್ನುವ ಅಭಿಯಾನ ಹಮ್ಮಿಕೊಂಡು ಆ ಮೂಲಕ ಬಾಲಕಿಯರ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಿದೆ. ಇದಲ್ಲದೇ ವಿದ್ಯಾರ್ಥಿ ವೇತನ, ಸುಕನ್ಯಾ ಸಮೃದ್ಧಿ ಯೋಜನೆಯಂತಹ ಉತ್ತಮ ಕಾರ್ಯಗಳನ್ನು ನೀಡಿ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ, ಅವರ ಜೀವನ ಸುಧಾರಣೆಗೆ ಮುಂದಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು, ವಿದ್ಯಾರ್ಥಿನಿಯರು, ವಿವಿಧ ಮುಖಂಡರು ಪಾಲ್ಗೊಂಡಿದ್ದರು.
ಫೋಟೊ:
ಕೊಪ್ಪಳ ನಗರದ ಸರ್ಕಾರಿ ಮಹಿಳಾ ಪದವಿ ಕಾಲೇಜಿಗೆ ಸಂಸದರ ಅನುದಾನದಲ್ಲಿ ಡೆಸ್ಕ್‌ಗಳನ್ನು ವಿತರಿಸಿದ ಸಂಸದ ಸಂಗಣ್ಣ ಕರಡಿ.

 

Please follow and like us:
error
error: Content is protected !!