fbpx

ಸಂಸದರು ಮೂರನೆ ದರ್ಜೆ ಜನ ಬಳಸುವ ಮಾತು,ಭಾಷೆ ಬಳಸಬಾರದು: ರಾಯರಡ್ಡಿ

ಕೊಪ್ಪಳ : ರಸ್ತೆ ಕಾಮಗಾರಿಗೆ ಹಣ ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ಹೇಳುತ್ತೇನೆ. ರಾಜ್ಯ ಸರ್ಕಾರದ ಅನುಮತಿ ನೀಡದ ಹೊರತು ಕೇಂದ್ರ ಹೆದ್ದಾರಿ ಮಾಡಲು ಸಾಧ್ಯ. ಇದನ್ನು ಶಾಸಕರು, ಸಂಸದರು ತಿಳಿದುಕೊಳ್ಳಬೇಕು. ಆದರೆ ಇದನ್ನು ತಿಳಿಯದೆ ವಿಪಕ್ಷದವರು ಆರೋಪಿಸುತ್ತಾರೆ. ಭಾಷೆ ಮನುಷ್ಯನ ಗುಣವನ್ನು ತಿಳಿಸುತ್ತದೆ. ನಾಲಿಗೆಯ ಭಾಷೆ ಮೇಲೆ ಹಿಡಿತ ಇರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಅವರು ನಗರದ ಶಾಸಕರ ಭವನದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆದ್ದಾರಿ-೬೩ರ ೬.೮೬ ಕಿಮೀ ಉದ್ದದ ಸಿಮೆಂಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದರು.
ಎಂಪಿ ಕೇಳಿದ್ದರು, ಅದಕ್ಕೆ ನಾನು ಒಪ್ಪಿಗೆ ಕೊಟ್ಟಿದ್ದೆ. ಆದರೆ ಅನ್ಯ ಕಾರಣದಿಂದ ಮಾಡಲು ಆಗಲಿಲ್ಲ. ಡಿ. ೫ರಂದು ಚಾಲನೆ ನೀಡಲು ಕೇಳಿದೆ. ಆದರೆ ಒಪ್ಪಿಕೊಂಡ ಅವರು ಏಕಾಏಕಿ ೩೦ರಂದು ಚಾಲನೆ ಕೊಟ್ಟರು. ಅದಕ್ಕೆ ನಮ್ಮ ವಿರೋಧವಿಲ್ಲ. ಒನ್ ಟೈಂ ಇಪ್ರ್ಯೂಮೆಂಟ್ ಮಾಡಲು ಕೇಂದ್ರ ಸರ್ಕಾರ ಹಣ ನೀಡಿದೆ. ಸಿಆರ್ ಎಫ್ ನಿಂದ ಹಣ ಒದಗಿಸಿದೆ. ಅದು ರಾಜ್ಯ ಸರ್ಕಾರವೇ ನೀಡಿದ ಸೆಸ್ ಹಣದ್ದು. ಅದು ರಸ್ತೆ ಅಭಿವೃದ್ಧಿ ಗೆ ಮಾತ್ರ ಬಳಸಬೇಕು ಎಂಬ ನಿಯಮವಿದೆ. ಹೀಗಾಗಿ ರಾಜ್ಯ ಸರ್ಕಾರದ ಸಮ್ಮತಿ, ಸಹಕಾರವಿಲ್ಲದೆ ಯಾವ ಸಿಆರ್ ಎಫ್ ರಸ್ತೆ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ನಮಗೆ ಅಭಿವೃದ್ಧಿ ಕೆಲಸವಾಗಬೇಕೆ ಹೊರತು ರಾಜಕಾರಣವಲ್ಲ ಎಂದು ಹೇಳಿದರು.
ನಾನು ಸರ್ಕಾರವಾಗಿ ಈಗ ಹೇಳಬಹುದು. ಆದರೆ ಸಂಸದ, ಶಾಸಕ ಹೇಳಲು ಬರುವುದಿಲ್ಲ. ಇದನ್ನು ತಿಳಿದುಕೊಳ್ಳಬೇಕು. ಸಂಗಣ್ಣ ಬುದ್ಧಿವಂತರಾಗಿ ಮಾತನಾಡಬೇಕು. ಸಂಗಣ್ಣ ಬುದ್ಧಿವಂತನೂ ಅಲ್ಲ, ವಿದ್ಯಾವಂತನೂ ಅಲ್ಲ. ಆತನಿಗೆ ವಿಜ್ಞಾನ ಗೊತ್ತಿಲ್ಲ. ಪಶು ವಿಚಾರಗಳನ್ನು ಸಂಸದರು ತಿಳಿದುಕೊಳ್ಳಬೇಕು. ನಿಮ್ಮ ಭಾಷೆ ಸರಿಯಲ್ಲ. ಜನ ನಿಮ್ಮ ಬಗ್ಗೆ ಕೆಟ್ಟದಾಗಿ ತಿಳಿದುಕೊಳ್ಳುತ್ತಾರೆ. ಸರಿಯಾದ ಶಬ್ದ ಬಳಸುವುದನ್ನು ಅವರು ಕಲಿತುಕೊಳ್ಳಲಿ ಎಂದು ನಾನು ಬುದ್ಧಿವಂತಿಕೆ ಹೇಳುತ್ತೇನೆ. ಮೂರನೆ ದರ್ಜೆ ಜನ ಬಳಸುವ ಮಾತು ಬಳಸಬಾರದು. ಹೀಗೆ ಮುಂದುವರೆದರೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತಾರೆ ಎಂದು ಎಚ್ಚರಿಸಿದರು.

Please follow and like us:
error
error: Content is protected !!