ಸಂಶೋಧಕನಿಗೆ ವಿಷಯದ ಬಗ್ಗೆ ಕುತೂಹಲ ಆಸಕ್ತಿ ಅಗತ್ಯ; ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್


ಕೊಪ್ಪಳ ಅ ೦೧ : ಸಂಶೋಧನೆಗಳು ಜ್ಞಾನದ ಹೊಸ ದಾರಿಯನ್ನು ತೋರಿಸಿಕೊಡುತ್ತವೆ. ಸಂಶೋಧಕನಿಗೆ ವಿಷಯದ ಬಗ್ಗೆ ಕುತೂಹಲ, ಆಸಕ್ತಿ ಸದಾ ಜಾಗೃತವಾಗಿರಬೇಕು ಎಂದು ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್‌ರವರು ಅಭಿಪ್ರಾಯಪಟ್ಟರು. ಅವರು ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ‘ಸಾಹಿತ್ಯದಲ್ಲಿ ಸಂಶೋಧನಾ ವಿಧಾನಗಳು’ ಸರ್ಟಿಫಿಕೆಟ್ ಕೊರ್ಸ್ ಉದ್ಘಾಟನಾ ಕಾರ್ಯಕ್ರಮ ಹಾಗೂ ‘ಸಂಶೋಧನೆಯಲ್ಲಿನ ಸವಾಲುಗಳು’ ಎಂಬ ವಿಷಯದ ಮೇಲೆ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಉಪನ್ಯಾಸ ನೀಡಿದರು. ಅಧ್ಯಯನದಲ್ಲಿ ಸೂಕ್ಷ್ಮ ದೃಷ್ಟಿಯ ಮನೋಭಾವ ಇರಬೇಕು. ಸಣ್ಣ ಸಣ್ಣ ಆಕರಗಳೇ ದೊಡ್ಡ ವಿಷಯಗಳಿಗೆ ದಾರಿಯನ್ನು ತೋರಿಸುತ್ತವೆ. ಈ ಜಗತ್ತು ಬೆಳೆದಿರುವುದೆ ಹೊಸ ಹೊಸ ಅವಿಷ್ಕಾರ ಹಾಗೂ ಸಂಶೋಧನೆಗಳಿಂದ ಎಂಬುವುದನ್ನು ತಾವೆಲ್ಲರು ಅರಿಯಬೇಕು. ಹಾಗೆ ಸಾಹಿತ್ಯ ಸಂಶೋಧನೆ ಕೂಡ ಇದಕ್ಕೆ ಹೊರತಾಗಿಲ್ಲ. ಸಂಶೋಧನೆಯಲ್ಲಿ ತೊಡಗಬೇಕಾದರೆ ಅನೇಕ ತೊಡಕುಗಳು ಉಂಟಾಗುತ್ತವೆ ಅವುಗಳನೆಲ್ಲ ಎದುರಿಸಿ ಸಂಶೋಧನೆಯಲ್ಲಿ ತೊಡಗಬೇಕಾಗುತ್ತದೆ ಅಂದಾಗ ಮಾತ್ರ ಪ್ರಪಂಚಕ್ಕೆ ಹೊಸದಾದ ಜ್ಞಾನವನ್ನು ನೀಡಲು ಸಾಧ್ಯ. ಹಸ್ತಪ್ರತಿಗಳ ಬಗ್ಗೆ ಮಾಹಿತಿ ಇರದ ಅನೇಕರಿಂದ ಮಾಹಿತಿಗಳು ನಾಶವಾಗುವ ಸಂಭವವಿರುತ್ತದೆ. ಅಂತಹ ಜ್ಞಾನಗಳ ಸಂರಕ್ಷಣೆ ಸಂಶೋಧಕರರ ಮಹತ್ವದ ಹೊಣೆಯಾಗಿದೆ. ಸಂಶೋಧನೆಯಲ್ಲಿ ತೊಡಗುವವರಿಗೆ ವಿಷಯದ ಆಳವಾದ ಆಧ್ಯಯನ, ತಾಳ್ಮೆ, ಕೂತುಹಲ ಪ್ರಪಂಚಕ್ಕೆ ಬೇಕಾಗಿರುವವ ಅಗತ್ಯವಿಷಯದ ಅರಿವು ಜಾಗೃತವಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಮನೋಹರ ದಾದ್ಮಿ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಸದಾ ಜ್ಞಾನದ ಹಸಿವು ಇರಬೇಕು ಅಂದಾಗ ಇಂತಹ ಸಮಶೋಧನೆಯಲ್ಲಿ ತೊಡಗಲು ಸಾಧ್ಯ. ವಿದ್ಯಾರ್ಥಿಗಳು ಪಠ್ಯಪುಸ್ತಕಕ್ಕೆ ಸಿಮೀತವಾಗಿರದೆ ಹೊಸ ಆಲೋಚನೆ ಅವಿಷ್ಕಾರಗಳಕಡೆ ಗಮನ ಹರಿಸಬೇಕು ಎಂದು ಹೇಳಿದರು. ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ಬಸವರಾಜ ಪೂಜಾರ ಮಾತನಾಡಿದರು. ಸರ್ಟಿಫಿಕೆಟ್ ಕೋರ್ಸನ ಸಂಯೋಜಕರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ನಾಗರಾಜ ದಂಡೋತಿ ಹೆಬ್ಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕು.ವಿಜಯಲಕ್ಷ್ಮಿ ಪ್ರಾರ್ಥಿಸಿದರೆ, ಕು.ವಿಶಾಲಾಕ್ಷಿ ಸ್ವಾಗತಿಸಿದರು. ಕು.ಭೀಮವ್ವ ನಿರೂಪಿಸಿದರು. ಕು.ಸುನಂದ ವಂದಿಸಿದರು. ಪ್ರಾಧ್ಯಾಪಕರು ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

Please follow and like us:
error