ಸಂವಿಧಾನ ಮತ್ತು ಜಾತ್ಯಾತೀತತೆಯ ಸಮರ್ಥನೆಯ ದಿನ

Koppal ಬಾಬರಿ ಮಸೀದಿ ಒಡೆದ 26ನೇ ವರ್ಷಾಚರಣೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರವರ ಪರಿನಿರ್ವಾಣದ ದಿನದ ಅಂಗವಾಗಿ ಕೊಪ್ಪಳದಲ್ಲಿ ಇಂದು ಸಿಪಿಐ ಎಂ ಪಕ್ಷ ಪ್ರತಿಭಟನೆ ನಡೆಸಿತು. ನಗರದ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಸಂಘಪರಿವಾರದ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಕೋಮುವಾದ ಹಳಿಯಲಿ ಕೋಮುಸಾಮರಸ್ಯ ಉಳಿಯಲಿ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು ಆರ್ .ಎಸ್.ಎಸ್ ನೇತೃತ್ವದ ಸಂಘಪರಿವಾರವು ಸುಪ್ರಿಂ ಕೋರ್ಟನ್ನು ಬದಿಗೆ ತಳ್ಳಿಯ ಅಯೋದ್ಯೆಯ ವಿವಾದಿತ ಸ್ಥಳದಲ್ಲಿಯೇ ರಾಮಮಂದಿರ ನಿರ್ಮಿಸಲು ಕೇಂದ್ರ ಸರಕಾರ ಕಾನೂನು ಸುಗ್ರಿವಾಜ್ಞೆ ತರುವಂತೆ ಒತ್ತಾಯಿಸಿ ಪ್ರಚಾರ ನಡೆಸುತ್ತಿದೆ. ಆ ಮೂಲಕ ಭಾರತ ಸಂವಿಧಾನದ ಜಾತ್ಯಾತೀತಗೆ ಸಂಬಂಧಿಸಿದ ಅನುಕೂಲಗಳನ್ನು ಮೂಲೆಗುಂಪಾಗಿಸಿ ಕೋಮುವಾದಿ ಅಜೆಂಡಾಗಳನ್ನು ಮುಂದೆ ತರಲು ಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೋಮುವಾದಿಗಳ ಸಂಚನ್ನು ಪ್ರತಿರೋಧಿಸುವ ಅಗತ್ಯ ಇದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನಿತ್ಯಾನಂದಸ್ವಾಮಿ, ಸುಂಕಪ್ಪ ಗದಗ, ಕಾಸಿಂ ಸರ್ದಾರ, ಹುಲಪ್ಪ ಗೋಕಾವಿ, ಶೇಖಪ್ಪ ಚೌಡ್ಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error