ಸಂವಿಧಾನ ಬದಲಾವಣೆಗೆ ಯಾರಿಗೂ ಅಧಿಕಾರವಿಲ್ಲ: ತೀಸ್ತಾ ಸೆಟಲ್ವಾಡ್

ಕರ್ನಾಟಕ ಕೋಮು ಸೌಹಾರ್ಧ ವೇಧಿಕೆಗೆ 15 ವರ್ಷದ ಸಂಭ್ರಮ
ಮಾನವಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‍ರಿಂದ ವಿದ್ಯುಕ್ತ ಚಾಲನ

ಚಿಕ್ಕಮಗಳೂರು, ಡಿ.29: ಸಂವಿಧಾನ ಬದಲಾವಣೆಗೆ ಯಾರಿಗೂ ಅಧಿಕಾರವಿಲ್ಲ. ಯಾರು ಸಂವಿದಾನ ಬದಲಿಸುವ ಮಾತಾಡುತ್ತಾರೋ, ಅವರು ಕಾನೂನು ಬಾಹಿರ ಶಕ್ತಿಗಳು. ಕಾನೂನು ಬಾಹಿರ ಶಕ್ತಿಗಳನ್ನು ನಾವು ಅವರ ಮುಖದ ಮೇಲೆ ಕಾನೂನು ಬಾಹಿರ ಶಕ್ತಿಗಳೆಂದೇ ಕರೆಯಬೇಕು. ಇತ್ತೀಚೆಗೆ ಕೇಂದ್ರ ಸಚಿವನೋರ್ವ ಸಂವಿಧಾನ ಬದಲಿಸುವ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ತಕ್ಕ ಉತ್ತರ ಕೊಡುವ ಶಕ್ತಿ ಇಲ್ಲಿನ ಜನರಿಗಿದೆ ಎಂದು ಮುಂಬೈನ ಮಾನವಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಹೇಳಿದರು.
ಅವರು ಗುರುವಾರ ಕರ್ನಾಟಕ ಕೋಮು ಸೌಹಾರ್ಧ ವೇಧಿಕೆಗೆ 15ನೇ ವರ್ಷದ ಸಂಭ್ರಮದಲ್ಲಿ ಚಿಕ್ಕಮಗಳೂರು ಜಿಲ್ಲಾ ಆಟದ ಮೈದಾನದಲ್ಲಿ ಎರಡು ದಿನಗಳ ಸಮ್ಮಿಲನ-ನೆನಪು ಸೌಹಾರ್ಧ ಮಂಟಪ ಕಾರ್ಯಕ್ರಮಕ್ಕೆ ಮುಂಬೈನ ಮಾನವಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಮಂಗಳೂರು ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಯು.ಎಚ್.ಉಮರ್ ಮತ್ತು ಬೆಂಗಳೂರಿನ ಪ್ರೊ. ನರಗೆರೆ ರಮೇಶ್ ಗುರುವಾರ ವಿದ್ಯುಕ್ತವಾಗಿ ಚಾಲನೆ ನೀಡಿ ಮಾನಾಡಿದರು. “ಪ್ರಖ್ಯಾತ ಕವಿ ಬರ್ಟೋಲ್ಟ್ ಬ್ರೆಕ್ಟ್‍ನ ಕವಿತೆಯ ಸಾಲುಗಳು ನೆನಪಾಗುತ್ತಿವೆ. ‘ಕಗ್ಗತ್ತಲ ಕಾಲದಲ್ಲಿ ಹಾಡುಗಳಿರುತ್ತವೆಯೇ ಎಂದು ಜನರು ಕೇಳುತ್ತಾರೆ.
ಹೌದು ಕಗ್ಗತ್ತಲ ಕಾಲದಲ್ಲಿಯೂ ಹಾಡುಗಳಿರುತ್ತವೆ, ಕಗ್ಗತ್ತಲ ಕಾಲದ ಬಗ್ಗೆ!’ ಎಂದು” ಕವಿತೆಯ ಸಾಲುಗಳನ್ನು ಉದ್ಧರಿಸುತ್ತಾ ಅವರು ತಮ್ಮ ಮಾತುಗಳನ್ನು ಆರಂಭಿಸಿದರು.
“ಗುಜರಾತಿನಲ್ಲಿ ಹಿಂದುತ್ವದ ಮೂಲಕ ಜನರ ಭಾವನೆಗಳ ಮೇಲೆ ಚೆಲ್ಲಾಟ ನಡೆದಿದೆ. ಅದಕ್ಕೆ ಉತ್ತರವಾಗಿ ಹೋರಾಟದ ಮೂಲಕ ರೂಪುಗೊಂಡ ಜನನನಾಯಕ ಜಿಗ್ನೇಶ್ ಮೇವಾನಿ ಗೆಲುವು ಸಾಧಿಸಿದ್ದಾರೆ. ಇದು ಮುಂದಿನ ರಾಜಕೀಯ ಬದಲಾವಣೆಯ ದಿಕ್ಸೂಚಿಯಾಗಿದೆ. ಕರ್ನಾಟಕದ 25 ಕ್ಷೇತ್ರಗಳಲ್ಲಿ ಈ ರೀತಿಯ ಪ್ರಯೋಗ ನಡೆಯಬೇಕಾಗಿದೆ. ಹೊಸ ಆಲೋಚನೆ ಹೊಂದಿರುವ ಪ್ರತಿನಿಧಿಗಳು ಆಯ್ಕೆಯಾಗಿ ಬರಬೇಕು ಎಂದು ಆಶಿಸಿದರು.
ಈ ದೇಶದಲ್ಲಿ ಕೆಟ್ಟದ್ದನ್ನು ಪ್ರಶ್ನಿಸುವ ಅನೇಕ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ. ಅಂತವರ ಬಾಯಿ ಮುಚ್ಚಿಸುವ ವ್ಯವಸ್ಥಿತ ತಂತ್ರವು ನಡೆಯುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರಯದ ಹರಣದ ಭಾಗವಾಗಿ ಗೌರಿಯನ್ನು ಹತ್ಯೆ ಮಾಡಲಾಗಿದೆ. ಆದರೆ ಗೌರಿ ಮತ್ತು ಅವರ ವಿಚಾರಗಳು ಇಂದು ಬದುಕಿದೆ. ಕವಿತೆ, ಕಾವ್ಯಗಳ ಮೂಲಕ ಪ್ರತಿ ಹಳ್ಳಿಗಳಲ್ಲಿ ಜನಪರ ಧ್ವನಿಗಳು ಮೊಳಗುತ್ತಿವೆ. ಕಾರ್ಯಕರ್ತರು ಸೃಷ್ಟಿಗೊಂಡಿದ್ದಾರೆ. ಕಳೆದ 15 ವರ್ಷಗಳಿಂದ ಕೋಮುಸೌಹಾರ್ಧ ವೇದಿಕೆ ಸವೆಸಿದ ಹಾದಿ ಕಠಿಣವಾಗಿತ್ತು. ಆದರೂ ಒಂದು ಯಶಸ್ವಿ ನೆಲೆಗಟ್ಟನ್ನು ತಲುಪಲು ಯಶಸ್ವಿಯಾಗಿದೆ ಎಂದು ನುಡಿದರು.
ಕಳೆದ ಹದಿನೈದು ವರ್ಷಗಳಲ್ಲಿ ಸೌಹಾರ್ಧಕ್ಕಾಗಿ ಹಗಲಿರುಳು ದುಡಿದ ಸಂಗಾತಿಗಳಿಗೆ ಆರಂಭದಲ್ಲಿ ಪ್ರೊ.ಕ.ರಾಮದಾಸ್, ಪ್ರೊ.ಹಸನ್ ಮನ್ಸೂರ್, ಯುವರಾಜ್, ಪಾಸ್ಟರ್ ಆನಂದ್, ಡಾ.ಯು.ಆರ್.ಅನಂತಮೂರ್ತಿ, ಅಝೀಝ್ ಚಿಕ್ಕಮಗಳೂರು, ಪ್ರೊ.ಎಚ್.ಎಲ್. ಕೇಶವಮೂರ್ತಿ, ಬಿ.ವಿ.ವೀರಭದ್ರಪ್ಪ, ಗೌರಿ ಲಂಕೇಶ್, ಲಕ್ಷ್ಮಣ್ ಜಿ. ರವರಿಗೆ ನುಡಿ ನಮನ ಕಾರ್ಯಕ್ರಮ ನಡೆಯಿತು.
ಕರ್ನಾಟಕ ಕೋಮು ಸೌರ್ಹಾಧ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಭಟ್ ಬಾಕ್ರಬೈಲ್ ಅಧ್ಯಕ್ಷತೆ ವಹಿಸಿದ್ದರು. ಕೆ.ಎಲ್.ಅಶೋಕ್ ಮಾತನಾಡಿ ಹೋರಾಟದ ದಾರಿ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಇದಕ್ಕೂ ಮುನ್ನ ಬೆಂಗಳೂರಿನ ವಚನ ರಾಕ್ಸ್ ಎಸ್.ಆರ್.ರಾಮಕೃಷ್ಣ ಮತ್ತು ತಂಡದಿಂದ ಸೌಹಾರ್ಧ ಗೀತೆಗಳ ಸಂಗೀತ ಕಾರ್ಯಕ್ರಮ ಗಮನ ಸೆಳೆಯಿತು. ಹಾಗೂ ಮಲ್ಲಿಕಾರ್ಜುನಯ್ಯ ಮತ್ತು ತಂಡದವರು ಮತಿತರೆ ಸೌಹಾರ್ದ ಕಲಾ ತಂಡಗಳ ಸಾಂಸ್ಕøತಿಕ ಕಾರ್ಯಕ್ರಮ ರಸವತ್ತಾಗಿತ್ತು.
ಕಾರ್ಯಕ್ರಮದಲ್ಲಿ ಕೆ.ಫಣಿರಾಜ್, ವಿ.ಎಸ್.ಶ್ರಿಧರ್, ಗೌಸ್ ಮೊಹಿದ್ದೀನ್, ವೀರಸಂಗಯ್ಯ, ಚಂದ್ರಶೇಖರ್ ತೋರಣಘಟ್ಟ, ಕೆ.ಎಸ್.ಅಸೋಕ್, ತ್ರಿಮೂರ್ತಿ, ಗಣೇಶ್, ಪಾವಗಡ ಮಲ್ಲಿಕಾರ್ಜುನಯ್ಯ, ತಾಜುದ್ದೀನ್ ತುಮಕೂರು, ಸದಾನಂದ ಮೋದಿ, ಕೆ.ರಮೇಶ್ ಅಂಕೋಲ, ಶಿವಸುಂದರ್, ಕೆ.ಪಿ.ಶ್ರೀಪಾಲ್, ಜಿ.ರಾಜು, ಅನೀಸ್ ಪಾಷಾ, ಡಾ. ಎಚ್.ವಿ.ವಾಸು, ಇಸ್ಮಾಹೀಲ್ ದೊಡ್ಮನಿ, ಗೌರಿ, ಅಮ್ಜದ್ ಪಾಷಾ, ಕಲೀಮುಲ್ಲಾ, ಇಸ್ಮತ್ ಪಜೀರ್, ಸೆಬಸ್ಟೀಯನ್ ದೇವರಾಜ್, ಶಬ್ಬೀರ್ ಅಹ್ಮದ್, ಸಿ.ಜಿ.ಗಂಗಪ್ಪ, ಹೈದರ್ ಬೇಗ್, ಶಶಿಧರ್ ಹೆಮ್ಮಾಡಿ, ಹಯವಧನ ಉಪಾಧ್ಯ, ಅಬ್ಬಲಿ ಸಾಬ್, ಹಸನಬ್ಬ, ಚಾಂದ್ ಪೀರ್, ಶೀಲಾ ರಾಮನಾಥನ್, ಸತೀಶ್ ಅರವಿಂದ್, ರಾಮುಕೌಳಿ ಮತ್ತಿತರರಿದ್ದರು.
ಉಡುಪಿಯ ಹುಸೇನ್ ಕೋಡಿಬೇಂಗ್ರೆ ಸ್ವಾಗತಿಸಿದರೆ, ಪ್ರಗತಿಪರ ಚಿಂತಕ ಕೃಷ್ಣಮೂರ್ತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Please follow and like us:

Related posts