ಸಂವಿಧಾನ ಉಳಿಸಿ , ಪೌರತ್ವ ರಕ್ಷಿಸಿ ‘ ವೆಲ್ಪೇರ್ ಪಾರ್ಟಿ  ದೇಶವ್ಯಾಪಿ ಅಭಿಯಾನ

‘  ಕೊಪ್ಪಳ : ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ( ಸಿಎಎ ) ವಿರೋಧಿಸಿ ವೆಲ್ವೇರ್ ಪಾರ್ಟಿ ಆಫ್ ಇಂಡಿಯಾ ದೇಶಾದ್ಯಂತ ‘ ಸಂವಿಧಾನ ಉಳಿಸಿ , ಪೌರತ್ವ ರಕ್ಷಿಸಿ ‘ ಎಂಬ ಅಭಿಯಾನ ನಡೆಸಲಿದೆ . ಈ ಅಭಿಯಾನವು ಜನವರಿ 23ರಿಂದ ಜನವರಿ 31ರ ವರೆಗೆ ಒಂದು ವಾರ ಕಾಲ ನಡೆಯಲಿದೆ . ಸಿಎಎ ಕಾಯ್ದೆಯು ದೇಶದ 

ಸಂವಿಧಾನದ ಮೂಲ ಆಶಯಕ್ಕೆ ಮತ್ತು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದ್ದು , ಜಾತಿ ತಾರತಮ್ಯತೆಯಿಂದ ಕೂಡಿದೆ . ಇದು ಭಾರತದ ಜಾತ್ಯಾತೀತತೆಯ ಪರಂಪರೆಗೆ ಕೊನೆ ಹಾಡಲಿದೆ . ಮಾತ್ರವಲ್ಲದೆ , ಸರಕಾರದ ಅವೈಜ್ಞಾನಿಕ ಸರಕು ಮತ್ತು ಸೇವಾ ತೆರಿಗೆ ಹಾಗೂ ನೋಟ್ ಅಮಾತ್ಮೀಕರಣದಂತಹ ಕರಾಳ ಕ್ರಮಗಳಿಂದ ಈಗಾಗಲೇ ಸಾಕಷ್ಟು ಆರ್ಥಿಕ ಸಂಕಷ್ಟ ಮತ್ತು ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ದೇಶದ ಜನತೆಗೆ ಇವು ಅನಗತ್ಯ ಹೆಚ್ಚುವರಿ ತೊಂದರೆ ನೀಡಲಿವೆ ಎಂದು ಎಲ್ಲೇರ್ ಪಾರ್ಟಿ ಅಭಿಪ್ರಾಯ ವ್ಯಕ್ತಪಡಿಸಿದೆ . ಸಿಎಎಯನ್ನು ವಿರೋಧಿಸುವುದರ ಜತೆಗೆ ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ಗಳನ್ನು ಇಡೀ ದೇಶದಲ್ಲಿ ಜಾರಿಗೆ ತಂದಿರುವುದನ್ನು ಕೂಡಾ ಪಕ್ಷವು ವಿರೋಧಿಸುತ್ತದೆ . ಈಗಾಗಲೇ , ಡಿಸೆಂಬರ್ 25 , 2019 ರಂದು ಪಕ್ಷವು ಸಿಎಎ ಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ . ಸಿಎಎ , ಎನ್‌ಆರ್‌ಸಿ ಮತ್ತು : ಎನ್‌ಪಿಆರ್ ವಿರುದ್ಧ ಜನಜಾಗೃತಿ ಮೂಡಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ . ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ  ಎಂದು ಆದಿಲ್ ಪಟೇಲ್ , ಜಿಲ್ಲಾ ಅಧ್ಯಕ್ಷರು , ಡಬ್ಲುಪಿಿಐ ಹೇಳಿದರು. ಪತ್್ರಿಕಾಗೋಷ್ಠಿಯಲ್ಲಿ ಹಸನುದ್ದೀನ ಅಲಮ್‌ಬಗ್ದಾರ್‌ , ಜಿಲ್ಲಾ ಗೌರವ ಅಧ್ಯಕ್ಷರು , ಶ್ರೀಮತಿ ಸಬಿಹಾ ಪಟೇಲ್ , ವೆಲ್ವೇರ್ ಪಾರ್ಟಿಯ ನಗರಸಭಾ ಸದಸ್ಯರು , ಸಮದ್ ಚೌಥಾಯಿ , ಕೊಪ್ಪಳ ವಿಧಾನಸಭಾ ಅಧ್ಯಕ್ಷರು , ಅಬ್ದುಲ್ ವಾಹಿದ್ , ಜಿಲ್ಲಾ ಸಹಕಾರ್ಯದರ್ಶಿ , ನಜೀರ್‌ಅಹ್ಮದ್ ಹುಡಾ , ಜಿಲ್ಲಾ ಖಜಾಂಚಿ , ಮುಸ್ತಫಾ ಹುಡೇದ ಜಿಲ್ಲಾ ಸಹಕಾರ್ಯದರ್ಶಿ ಹಾಗೂ ಮಹೆಬೂಬ್ ಮಣ್ಣೂರ ಪ್ರಧಾನ ಕಾರ್ಯದರ್ಶಿ ಕೊಪ್ಪಳ ವಿಧಾನಸಭಾ ಕ್ಷೇತ್ರ , ಜಕರಿಯಾ ಖಾನ್ , ಜಿಲ್ಲಾ ಅಧ್ಯಕ್ಷರು ಎಸ್ . ಐ . ಓ . , ಗೌಸ್‌ಪಟೇಲ್ ಯೂಥ್ ಮೋಮೆಂಟ್ , ರಿಯಾಜ್ ಅಹ್ಮದ್ ಅಧ್ಯಕ್ಷರು ಎಸ್ . ಐ . ಓ . ಕೊಪ್ಪಳ ಮತ್ತಿತರರು ಉಪಸ್ಥಿತರಿದ್ದರು .

Please follow and like us:
error