ಸಂಭ್ರಮ ಸಡಗರದಿಂದ ಈದ್ ಮಿಲಾದ್ ಆಚರಣೆ

ಈದ್ ಮಿಲಾದ್ ಪ್ರಯುಕ್ತ ಮುಸ್ಲಿಂ ಬಾಂಧವರಿಂದ ಕೊಪ್ಪಳದಲ್ಲಿ ಬೃಹತ್ ಮೆರವಣಿಗೆ ನಡೆಯಿತು. ಪೈಗಂಬರ್ ಅವರ 1492ನೇ ಜನ್ಮ ದಿನಾಚರಣೆ ಅಂಗವಾಗಿ ಕೊಪ್ಪಳದಲ್ಲಿ ಮುಸ್ಲಿಂ ಸಮಾಜದ ವತಿಯಿಂದ ಬೃಹತ್ ಮರವಣಿಗೆ ನಡೆಯಿತು.

ನಗರದ ಮುಖ್ಯ ರಸ್ತೆಗಳಲ್ಲಿ ನಡೆದ ಮೆರವಣಿಗೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ ರಾಜಶೇಖರ್ ಹಿಟ್ನಾಳ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಬಸವರಾಜ ಹಿಟ್ನಾಳ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಮುತ್ತುರಾಜ್ ಕುಷ್ಟಗಿ ಪ್ರಸನ್ನ ಗಡಾದ ಅಮ್ಜದ್ ಪಟೇಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಭೂಮರೆಡ್ಡಿ ಹಾಗೂ ಎಂ ಕಾಟನ್ ಪಾಷಾ, ಮಾನ್ವಿ ಪಾಷಾ ಸೇರಿದಂತೆ ಮುಸ್ಲಿಂ ನಾಯಕರು ಹಾಗೂ ಬಾಂದವರು ಬಾಗೀಯಾಗಿದ್ದರು.

ಜಿಲ್ಲೆಯ ಕುಷ್ಟಗಿ, ಯಲಬುರ್ಗಾಗಳಲ್ಲಿಯೂ ಸಂಭ್ರಮ ಮತ್ತು ಸಡಗರದಿಂದ ಈದ್ ಮಿಲಾದ್ ಆಚರಿಸಲಾಯಿತು.