ಸಂದಿಗ್ಧ” ಚಲನಚಿತ್ರ : ಜ. 26 ರಿಂದ ಜಿಲ್ಲೆಯಾದ್ಯಾಂತ ವಿಶೇಷ ಪ್ರದರ್ಶನ

ಕೊಪ್ಪಳ ಜ. ್ತ: ಬಾಲ್ಯ ವಿವಾಹ ನಿರ್ಮೂಲನೆ ಜಾಗೃತಿ ಮೂಡಿಸುವ ಕುರಿತಾದ “ಸಂದಿಗ್ಧ” ಚಲನಚಿತ್ರವನ್ನು ಜ. 26 ರಿಂದ 30 ರವರೆಗೆ ಕೊಪ್ಪಳ ಜಿಲ್ಲೆಯಾದ್ಯಾಂತ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಅವರು ತಿಳಿಸಿದ್ದಾರೆ.
ಬಾಲ್ಯ ವಿವಾಹವು ಮಕ್ಕಳ ಹಕ್ಕಿನ ಉಲ್ಲಂಘನೆಯಾಗಿದೆ. ಕೊಪ್ಪಳ ಜಿಲ್ಲಾಡಳಿತವು ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ನಿರಂತರ ಪ್ರಯತ್ನವನ್ನು ಮಾಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಯುನಿಸೆಫ್, ಜಿ.ಪಂ. ಹಾಗೂ ವಿವಿಧ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹಲವಾರು ಕಾರ್ಯತಂತ್ರಗಳನ್ನು ಅನುಷ್ಠಾನ ಮಾಡುತ್ತಿದೆ. “ಸಂದಿಗ್ದ” ಚಲನಚಿತ್ರವು ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲುವ ಚಲನ ಚಿತ್ರವಾಗಿದ್ದು, ಇದನ್ನು ಎಲ್ಲರೂ ವೀಕ್ಷಿಸುವಂತಾಗಲು ಅಗತ್ಯವಾದ ಕ್ರಮವನ್ನು ಕೈಗೊಳ್ಳಲಾಗಿದೆ.
ವಿಶೇಷ ಪ್ರದರ್ಶನ : “ಸಂದಿಗ್ಧ” ಚಲನಚಿತ್ರದ ವಿಶೇಷ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ವಿವರ ಇಂದೆ. ಜ.26 ರಂದು ಕೊಪ್ಪಳ ನೆಹರು ಯುವಕೇಂದ್ರ, ಜಿಲ್ಲಾ ಯವ ಸಮನ್ವಯಾಧಿಕಾರಿ, ನಗಾರಾಭಿವೃದ್ಧಿ ಕೋಶ ಯೋಜನಾ ನಿರ್ಧೇಶಕರು, ಮತ್ತು ರಾಷ್ಟ್ರೀಯ ಗಾಮೀಣ ಜೀವನೋಪಾಯ ಸಂವರ್ಧನಾ ಘಟಕ (ಸಂಜೀವಿನಿ)ದ ಜಿಲ್ಲಾ ವ್ಯವಸ್ಥಾಪಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಕೊಪ್ಪಳ ಜಿಲ್ಲಾ ವ್ಯವಸ್ಥಾಪಕರಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಜಿಲ್ಲೆಯ ಎಲ್ಲಾ ಚಿತ್ರಮಂದಿರಗಳಲ್ಲಿ ಜ. 27 ರಂದು ವಿಶೇಷವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕರಿಗೆ, ಆಶಾ ಕಾರ್ಯಕರ್ತೆಯರಿಗೆ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ (ಎಸ್.ಡಿ.ಎಂ.ಸಿ) ಎಲ್ಲಾ ಸದಸ್ಯರುಗಳಿಗೆ, ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ (ವಿ.ಎಚ್.ಎಸ್.ಸಿ) ಸದಸ್ಯರಿಗೆ, ಮಕ್ಕಳ ರಕ್ಷಣಾ ಸಮಿತಿಯ (ಸಿ.ಪಿ.ಸಿ) ಸದಸ್ಯರುಗಳಿಗೆÉ, ಚುನಾಯಿತ ಪ್ರತಿನಿದಿಗಳಿಗೆ, ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ವಿಶೇಷ ಉಚಿತ ಪ್ರದರ್ಶನವನ್ನು ಆಯೋಜಿಸಲಾಗಿದೆ. ಮತ್ತು ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ್‍ನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ಜಿಲ್ಲೆಯ ಎಲ್ಲಾ ಯುವಕ/ಯುವತಿ ಮಂಡಳ/ಕೇಂದ್ರ/ಸಂಘದ ಸದಸ್ಯರುಗಳಿಗೆ ಹಾಗೂ ಸಂಜೀವಿನಿ ಯೋಜನೆಯಲ್ಲಿರುವ ಎಲ್ಲಾ ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದ್ದು, ಎಲ್ಲರೂ ಜ. 27 ರಂದು ಬೆಳಿಗ್ಗೆ 09 ಗಂಟೆಯಿಂದ 10-40 ರ ವರೆಗೆ ಹತ್ತಿರದ ಚಲನಚಿತ್ರ ಮಂದಿರದಲ್ಲಿ ‘ಸಂದಿಗ್ದ’ ಚಲನಚಿತ್ರವನ್ನು ಕಡ್ಡಾಯವಾಗಿ ವಿಕ್ಷಿಸುವಂತೆ ಸೂಕ್ತ ಕ್ರಮ ಕೈಗೊಳ್ಳಲು ಈ ಮೂಲಕ ಆದೇಶಿಸಲಾಗಿದೆ.
ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮತ್ತು ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಸ್ನಾತ್ತಕೊತ್ತರ ಅಧ್ಯಯನ ಕೇಂದ್ರದ ವಿಶೇಷ ಆಡಳಿತಾಧಿಕಾರಿ, ಜಿಲ್ಲೆಯಲ್ಲಿರುವ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಜ. 30 ರೊಳಗಾಗಿ ಯಾವುದೇ ದಿನದಂದು ಬೆಳಿಗ್ಗೆ 09 ಗಂಟೆಯಿಂದ 10-40ರ ವರೆಗೆ “ಸಂದಿಗ್ಧ” ಚಲನಚಿತ್ರವನ್ನು ಹತ್ತಿರದ ಚಲನಚಿತ್ರ ಮಂದಿರದಲ್ಲಿ ವೀಕ್ಷಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಅವರು ಮನವಿ ಮಾಡಿದ್ದಾರೆ

Please follow and like us:
error