ಸಂಡೇ ಲಾಕಡೌನ್ ಕೊಪ್ಪಳ ಜಿಲ್ಲೆ ಉತ್ತಮ ಪ್ರತಿಕ್ರಿಯೆ

ಕೊಪ್ಪಳ : ಸಂಡೆ ಲಾಕಡೌನ್ ಗೆ ಕೊಪ್ಪಳ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ವಾರದ ಲಾಕಡೌನ್ ಗೆ ಹೋಲಿಸಿದರೆ ಈ ಸಲ ಜನ ಸ್ವಯಂಪ್ರೇರಿತ ರಾಗಿ ಲಾಕಡೌನ್ ಗೆ ಮುಂದಾಗಿದ್ದಾರೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರದಲ್ಲಿ ಪಾಜಿಟಿವ್ ಪ್ರಕರಣಗಳು ಹಾಗೂ ಸಾವುಗಳ ಸಂಖ್ಯೆ ಹೆಚ್ಚಾಗಿದೆ. ಆಲ್ಲದೇ ಜನತೆ ಸ್ವಯಂಪ್ರೇರಿತ ರಾಗಿ ಪ್ರತಿದಿನ ಮದ್ಯಾಹ್ನ ೨ ಗಂಟೆಗೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಲಾಕಡೌನ್ ಮಾಡುತ್ತಿದ್ದಾರೆ. ಈಗಾಗಲೇ ೬ ಜನರು ಮೃತಪಟ್ಟಿದ್ದು ೨೧೦ ಪ್ರಕರಣಗಳು ದಾಖಲಾಗಿವೆ.ಇನ್ನೂ ೨ ಸಾವಿರಕ್ಕೂ ಹೆಚ್ಚು ರಿಜಲ್ಟ್ ಬರಬೇಕಿದೆ.

ಮೆಡಿಕಲ್, ಹಾಲು ಮಾರಾಟ ಕೇಂದ್ರ ಹೊರತು ಪಡಿಸಿ ಉಳಿದೆಲ್ಲಾ ಚಟುವಟಿಕೆಗಳು ಬಂದಾಗಿವೆ. ಸಂಚಾರ ನಿಲ್ಲಿಸಿರುವ ಕೆಎಸ್ ಆರ್ ಟಿಸಿ, ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ. ಬೀದಿಗಿಳಿಯದ ಜನ, ರೋಡಿಗಿಳಿಯದ ಆಟೋ, ಕ್ಯಾಬ್, ಖಾಸಗಿ ಬಸ್ ಹಾಗೂ ಇತರೆ ವಾಹನಗಳು.ರಾಜ್ಯ ಸರ್ಕಾರದ ಆದೇಶದ ಹಿನ್ನಲೆ ವ್ಯಾಪಾರ ವಹಿವಾಟು ಬಂದ್ ಮಾಡಿ ನಾಗರಿಕರು ಮನೆಯಲ್ಲೇ ಉಳಿದಿದ್ದಾರೆ. ಅಲ್ಲಲ್ಲಿ ವಿರಳವಾಗಿ ಜನ ಸಂಚರಿಸುತ್ತಿದ್ದಾರೆ.

Please follow and like us:
error