ಸಂಘ ಸಂಸ್ಥೆಗಳಿಗೆ ಧನಸಹಾಯ ತಾರತಮ್ಯ, ಸಂಸ್ಕೃತಿ ಇಲಾಖೆಯ ವಂಚನೆ ಖಂಡಿಸಿ ಕಲಾವಿದರ ಪ್ರತಿಭಟನೆ

ಕೊಪ್ಪಳ, ಫೆ. ೧೪ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶನಾಲಯವು ೨೦೧೭-೧೮ನೇ ಸಾಲಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಧನಸಹಾಯ ನೀಡುವಲ್ಲಿ ಕೊಪ್ಪಳ ಜಿಲ್ಲೆಯ ಸಂಘ ಸಂಸ್ಥೆಗಳಿಗೆ ಕಡಿಮೆ ಅನುದಾನವನ್ನು ನೀಡಿರುವುದಲ್ಲದೆ ಬಹುತೇಕ ಸಂಘ ಸಂಸ್ಥೆಗಳಿಗೆ ಕಾರಣವಿಲ್ಲದೆ ಅವರ ಅರ್ಜಿಯನ್ನು ತಿರಸ್ಕರಿಸಿ ಧನಸಹಾಯ ನೀಡಿರುವುದಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಕುಂಠಿತವಾಗುವಂತೆ ಮಾಡಿ ದ್ರೋಹವೆಸಗಿದ್ದಾರೆ ಎಂದು ಕಲಾವಿದರು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಗ್ರಹಿಸಿದರು.
ಆನ್‌ಲೈನ್ ಮೂಲಕ ಧನಸಹಾಯಕ್ಕೆ ಅರ್ಜಿ ಆಹ್ವಾನಿಸಿ ಏಳು ತಿಂಗಳು ಸುಮ್ಮನಿದ್ದು ಫೆಬ್ರುವರಿ ಅಂತ್ಯದಲ್ಲಿ ಧನಸಹಾಯವನ್ನು ತರಾತುರಿಯಲ್ಲಿ ನೀಡಿ ಕೊಪ್ಪಳ ಜಿಲ್ಲೆಯ ಸಂಘ ಸಂಸ್ಥೆಗಳನ್ನು ಕಡೆಗಣಿಸುವ ಮೂಲಕ ಕಳೆದ ವರ್ಷ ಮಾಡಿದ ಹಾಗೆ ಈ ವರ್ಷವೂ ಮುಂದುವರಿಸಿರುವುದು ಕಲಾವಿದರನ್ನು ಕೆರಳಿಸಿದೆ. ಆನ್‌ಲೈನ್ ಪ್ರಕ್ರಿಯೆಯಲ್ಲಿ ಸಹಾಯಕ ನಿರ್ದೇಶಕರು ಸಂಘ ಸಂಸ್ಥೆಗಳ ದಾಖಲೆಗಳನ್ನು ಪರಿಶೀಲಿಸಿ ಧನಸಹಾಯ ನೀಡಹುದೆಂದು ಸಿಫಾರಸ್ಸು ಮಾಡಿದಾಗಲು ಕೂಡಾ ನಿರ್ದೇಶನಾಲಯವು ಬೇಜವಾಬ್ದಾರಿಯಿಂದ ಬಹುತೇಕ ಕ್ರಿಯಾಶೀಲ ಸಂಸ್ಥೆಗಳಿಗೆ ಧನಸಹಾಯವನ್ನು ನೀಡಿರುವುದಿಲ್ಲ.
೨೦೧೫-೧೬, ೨೦೧೬-೧೭ರಲ್ಲಿ ಬಹುತೇಕ ಕ್ರಿಯಶೀಲ ಸಾಂಸ್ಕೃತಿಕ ಸಂಸ್ಥೆಗಳಿಗೆ ಧನಸಹಾಯವನ್ನು ನೀಡಲಾಗಿತ್ತು. ಆದರೆ ಈ ವರ್ಷ ಹಿಂದಿನ ವರ್ಷ ಧನಸಹಾಯ ಪಡೆದ ಕ್ರಿಯಾಶೀಲ ಸಂಘ ಸಂಸ್ಥೆಗಳನ್ನು ಕೈಬಿಡಲಾಗಿದೆ. ಸಹಾಯಕ ನಿರ್ದೇಶಕರನ್ನು ಕಾರಣ ಕೇಳಿದರೆ, ನಿರ್ದೇಶಕರತ್ತ ಬೊಟ್ಟುಮಾಡುತ್ತಾರೆ. ನಿರ್ದೇಶಕರು ಸರಕಾರದತ್ತ ಬೊಟ್ಟುಮಾಡಿ ತೋರಿಸುತ್ತಿದ್ದಾರೆ. ದೂರವಾಣಿಯಲ್ಲಿ ಸಂಪರ್ಕಿಸಿದರೆ, ನೋಡುತ್ತೇನೆ, ಪರಿಶೀಲಿಸುತ್ತೇನೆ ಎಂದು ಹೇಳಿ ಹಾರಿಕೆ ಉತ್ತರ ನೀಡುತ್ತಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿಷ್ಕ್ರೀಯತೆಯಿಂದಾಗಿ ಜಿಲ್ಲೆಯಲ್ಲಿ ಯಾವಿದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯದೆ, ಉತ್ಸವಗಳು ನಡೆಯದೆ ಸರಕಾರದ ಹಣ ವಾಪಸ್ ಹೋಗುವುದರಲ್ಲಿದೆ. ಪಕ್ಕದ ಜಿಲ್ಲೆಗಳಲ್ಲಿ ಉತ್ಸವವನ್ನು ಮಾಡಿದ್ದರು ಕೂಡಾ ನಮ್ಮ ಜಿಲ್ಲೆಯಲ್ಲಿ ಆನೆಗುಂದಿ ಮತ್ತು ಕನಕಗಿರಿ ಉತ್ಸವವನ್ನು ಕಳೆದ ೨ ವರ್ಷಗಳಿಂದಲೂ ಮಾಡಿರುವುದಿಲ್ಲ. ಮುಖ್ಯ ಮಂತ್ರಿ ಬಂದಾಗ, ರಾಹುಲ್ ಗಾಂಧಿ ಬಂದಾಗ ನೇರವಾಗಿ ನೇರವಾಗಿ ನಿರ್ದೇಶನಾಲಯದಿಂದ ಹೊರ ಜಿಲ್ಲೆಯ ಕಲಾವಿದರನ್ನು ಕರೆಸಿ ಅವರಿಗೆ ಹಣ ಪಾವತಿಸಿ ಸ್ಥಳೀಯ ಕಲಾವಿದರಿಗೆ ಅವಕಾಶವಂಚಿತರನ್ನಾಗಿ ಮಾಡಿರುವುದನ್ನು ಚರ್ಚಿಸಲು ಮತ್ತುಜಿಲ್ಲಾ ಉಸ್ತುವಾರಿ ಸಚಿವರು ಆನೆಗುಂದಿ ಉತ್ಸವವನ್ನು ಮಾಡದಿರುವ ಧೋರಣೆಯನ್ನು ಖಂಡಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜನಪರ ಉತ್ಸವ, ಕವಿಗೋಷ್ಟಿ, ಸಂವಾದ, ಚಿಗುರು, ಯುವ ಸೌರಭ, ಜನಪದ ಜಾತ್ರೆ ಮತ್ತು ಪ್ರಾಯೋಜಿತ ಕಾರ್ಯಕ್ರಮಗಳನ್ನಲ್ಲದೆ ೨೦೧೭-೧೮ರ ಸಾಲಿನಲ್ಲಿ ಸಂಘ ಸಂಸ್ಥೆಗಳಿಗೆ ಧನ ಸಹಾಯ ನೀಡುವಲ್ಲಿ ವಂಚಿಸಿರುವುದನ್ನು ಚರ್ಚಿಸಿ ಪ್ರತಿಭಟನೆ ಹಮ್ಮಿಕೊಳ್ಳಲು ಕೊಪ್ಪಳ ಜಿಲ್ಲೆಯ ಕಲಾವಿದರಿಗೆ ಆಹ್ವಾನಿಸುತ್ತದೆ. ಭಾನುವಾರ ೧೮.೦೨.೨೦೧೮ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಪ್ರವಾಸಿ ಮಂದಿರಲ್ಲಿ ಚರ್ಚಿಸಿ ಪ್ರತಿಭಟನೆ ಹಮ್ಮಿಕೊಳ್ಳಲು ಸಲಹೆ ಸೂಚನೆ ನೀಡಲು ಜಿಲ್ಲೆಯ ಕಲಾವಿದರು ಆಗಮಿಸಬೇಕಾಗಿ ಧನಸಹಾಯ ವಂಚಿತ ಸಂಘ ಸಂಸ್ಥೆಗಳ ಪದಾಧಿಕಾರಿಗಳು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಗಿ ೯೫೩೮೮೨೫೧೭೩, ೯೧೧೩೫೬೫೧೮೯, ೯೯೦೦೪೧೦೯೦೮ ಸಂರ್ಕಿಸಲು ಕೋರಲಾಗಿದೆ.

Please follow and like us:
error