ಸಂಗೀತ ಧ್ಯಾನ ಕಾರ್ಯಕ್ರಮ ಕೊಪ್ಪಳ

ಕೊಪ್ಪಳ :
ನಗರದ ಬಿ.ಟಿ.ಪಾಟೀಲ ನಗರದ ಸಿದ್ಧಿ ವಿನಾಯಕ ದೇವಸ್ಥಾನದ ಆವರಣದಲ್ಲಿ ಮಾ. 13ರಂದು ಸಂಜೆ 5ರಿಂದ 8ಗಂಟೆಯವರೆಗೆ ಶಾಂಭವಿ ಪಿರಾಮಿಡ್ ಧ್ಯಾನ ಕೇಂದ್ರದಿಂದ ಸಾಮೂಹಿಕ ಸಂಗೀತ ಧ್ಯಾನ ಶಿಕ್ಷಣ ಕಾರ್ಯಕ್ರಮ ಆಯೋಜಿಸಲಾಗಿದೆ.
ಪಿರಾಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವಮೆಂಟ್(ಭಾರತ) ಸಂಸ್ಥಾಪಕರಾದ ಬ್ರಹ್ಮರ್ಷಿ ಪಿತಾಮಹ ಸುಭಾಷ್ ಪತ್ರೀಜಿ ಹಾಗೂ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸುವರು. ಧ್ಯಾನದಿಂದ ಸಂಪೂರ್ಣ ಆರೋಗ್ಯ,
ನೆನಪಿನ ಶಕ್ತಿ ವೃದ್ಧಿ, ದಿವ್ಯಚಕ್ಷು ಉತ್ತೇಜನ, ಆತ್ಮವಿಶ್ವಾಸ ವೃದ್ಧಿ, ಜೀವನದ ಗುರಿಯ ಸ್ಪಷ್ಟತೆ, ಆಧ್ಯಾತ್ಮಿಕ ಜ್ಞಾನ, ಏಕಾಗ್ರತೆಯ ಶಕ್ತಿ, ಮಾನಸಿಕ ಶಾಂತಿ ದೊರೆಯುತ್ತದೆ. ಹೀಗಾಗಿ ಭÀಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಮೂಲಕ ಕೋರಲಾಗಿದೆ.