ಸಂಕಷ್ಟದಲ್ಲಿರುವವರ ಸಹಾಯಕ್ಕೆ ಎಲ್ಲರೂ ಮುಂದಾಗಬೇಕಿದೆ- ಮಾಜಿ ಸಚಿವ ರಾಯರಡ್ಡಿ    

ಆಹಾರ ಧಾನ್ಯ ಕಿಟ್ ಗಳ ವಿತರಣೆಗಾಗಿ ಸಭೆ ನಡೆಸಿದ ಮಾಜಿ ಸಚಿವ ರಾಯರಡ್ಡಿ   

ಯಲಬುರ್ಗಾ.: ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಮಾಜಿ ಸಚಿವ ಬಸವರಾಜ ರಾಯರಡ್ಡಿ ನೇತೃತ್ವದಲ್ಲಿ  ಕುರೊನಾದಿಂದ ಭಾರತ ಲಾಕ್ ಡೌ ನ್ ಹಿನ್ನಲೆ ಹಲವು ಬಡ ಕುಟುಂಬ ವರ್ಗ ಜನತೆಗೆ ಆಹಾರ ಧಾನ್ಯ ಕಿಟ್ ಗಳ ವಿತರಣೆ ಕುರಿತ ಪೂರ್ವ ಭಾವಿ ಸಭೆ ನಡೆಯಿತು.                    ಬಳಿಕ ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ ಕಡುಬಡ ಕುಟುಂಬಗಳು ಕುರೊನಾ ವೈರಸ್ ನ ಪರಿಣಾಮದಿಂದ  ತತ್ತರಿಸಿ ಸಂಕಷ್ಟ ಅನುಭವಿಸುತ್ತಿದ್ದು ಇವರಿಗೆ ಸಹಾಯ ಹಸ್ತ ಚಾಚುವಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು. ಎಂದ ಅವರು ಈ ವೈರಸ್ ಸುಮಾರು 5ತಿಂಗಳ ಹಿಂದೆ ಚೀನಾದಲ್ಲಿ ಬಂದಿತು ಇದರ ಪರಿಣಾಮ ಭಾರತಕ್ಕೂ ಬಂದು ಜನತೆಯ ನೆಮ್ಮದಿ ಕಿತ್ತುಕೊಳ್ಳುತ್ತಾ ಹಲವರ ಸಾವಿಗೆ ಕಾರಣವಾಯಿತು. ಈ ವ್ಯವಸ್ಥೆಯಿಂದ ದೇಶಕ್ಕೆ ನಷ್ಟ ಉಂಟಾಗಿದೆ ಈ ರೋಗಕ್ಕೆ ಮದ್ದು ಇಲ್ಲವಾಗಿದ್ದು ಜನತೆ ಎಚ್ಚರ ವಹಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಯಲಬುರ್ಗಾ ಪಟ್ಟಣಕ್ಕೆ 650 ಕಿಟ್ಗಳು, ಕುಕನೂರಗೆ 750ಕಿಟ್ ಗಳು ಸೇರಿ ಪ್ರತಿ ಜಿಪಂಗೆ  650ಕಿಟ್ ಗಳಂತೆ ಬಡ ನಿರ್ಗತಿಕ ಕುಟುಂಬಗಳಿಗೆ ನೀಡುವ ಕಾರ್ಯಕ್ರಮ ಸೋಮವಾರ  ನಡೆಯಲಿದ್ದು ಇದರಲ್ಲಿ ಯಲಬುರ್ಗಾದ ಉಭಯ ಶ್ರೀಗಳು ಸೇರಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಸೇರಿದಂತೆ ಇತರರು ಭಾಗವಹಿಸಿದ್ದರು.

Please follow and like us:
error