You are here
Home > Koppal News > ಶ್ವೇತಾಂಬರ ಜೈನ್ ರಿಂದ ಕ್ಷಮಾ-ಯಾಚನಾ ದಿನಾಚರಣೆ

ಶ್ವೇತಾಂಬರ ಜೈನ್ ರಿಂದ ಕ್ಷಮಾ-ಯಾಚನಾ ದಿನಾಚರಣೆ

 ಕೊಪ್ಪಳ : ಅಗಸ್ಟ ೨೭ ರಂದು ನಗರದ ಶ್ವೇತಾಂಬರ ಜೈನ್ ಸ್ಥಾಪಕ ಭವನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಕ್ಷಮಾ-ಯಾಚನಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ವರ್ಷದ ಜೈನ್ ಧರ್ಮದ ಸಂಪ್ರದಾಯದಂತೆ ಚಾತುರ್ಮಾಸದ ಅವಧಿಯಲ್ಲಿ ಅತೀ ವಿಶಿಷ್ಟವಾಗಿ ಆಚರಿಸಲ್ಪಡುವ ಅಷ್ಟದಿವಸೀಯ ಪರ್ಯೂಷಣ ಪರ್ವದ ಆಚರಣೆಯನ್ನು ಭವ ಭಾವನಾತ್ಮಕ ಭಕ್ತಿಯೊಂದಿಗೆ ಜಪ-ತಪ ಮತ್ತು ತ್ಯಾಗಗಳೊಂದಿಗೆ, ದಾನ-ಧರ್ಮಗಳೊಂದಿಗೆ ಧಾರ್ಮಿಕ ಕ್ರೀಯಾ ವಿಧಿವಿಧಾನಗಳೊಂದಿಗೆ ಜೈನ್ ಸಮಾಜದ ಎಲ್ಲಾ ಬಂಧು ಭಾಂಧವರು ಮಿತ್ರರು ಪರಸ್ಪರ ಹಿಂದಿನಿಂದ ಇಂದಿನವರೆಗಿನ ಪ್ರತ್ಯಕ್ಷ ಹಾಗೂ ಅ ಪ್ರತ್ಯಕ್ಷ, ಗೋಚರ -ಅಗೋಚರ ರೂಪದಿಂದಾದ ಅಹಿತಕರ ಘಟನೆಗಳ ಬಗ್ಗೆ ಮನಪೂರಕವಾಗಿ ಹಿರಿಯರಿಂದ ಕಿರಿಯರಿಗೆ ಮತ್ತು ಕಿರಿಯರಿಂದ ಹಿರಿಯರಿಗೆ ಕ್ಷಮೆಯಾಚನೆಯನ್ನು ಸಲ್ಲಿಸುತ್ತಾರೆ.

ಇಂತಹ ವಿಶೇಷವಾದ ಆಚರಣೆಯ ಅಂಗವಾಗಿ ಧಾರ್ಮಿಕ ಉಪನ್ಯಾಸಗಳನ್ನು ಭೋಧಿಸಲು ಕರ್ನಾಟಕ ಶ್ವೇತಾಂಬರ ಜೈನ್ ಸ್ವಾಧ್ಯಾಯ ಸಂಘದಿಂದ ಬಂಧಂತಹ ಶ್ರೇಷ್ಠ ಪಾಂಡಿತ್ಯ ಪರಾಂಗತ ವಿದ್ವಾಂಸರು ಜೈನ್ ಧರ್ಮಾನುಸಾರದ ಗ್ರಂಥಗಳ ಜ್ಞಾನಸಾಗರವೇ ಸರಳ ಭಾಷೆಯಲ್ಲಿ ವಿವರಿಸಿ ಅನುಮೊದಿಸಿದರು. ಈ ಸಂದರ್ಭದಲ್ಲಿ ಸಮಸ್ತ ಸಮಾಜದ ಜೈನ್ ಶ್ರಾವಕರಲ್ಲಿ ಇತಿಹಾಸ ಕಾಲದ ದಕ್ಷಿಣ ಭಾರತದ ಜೈನ್‌ಕಾಸಿ ಕೋಪಣಾಚಲ ನಗರದ ಕಾಲ್ಪನಿಕ ಭಾವನೆಗಳ ವಾತವರಣದಂತೆ ಎಲ್ಲಾ ಶ್ರಾವಕರೂ ಹರ್ಷೋತ್ಕಾರದಿಂದ ಮೈ ಮರೆಯುವಂತಾಗಿದೆ.

Top